More

    ಜುಲೈ 13 ಅಲ್ಲ 14ಕ್ಕೆ ಚಂದ್ರಯಾನ-3 ಗಗನನೌಕೆ ಉಡಾವಣೆ: ಇಸ್ರೋ ಮಾಹಿತಿ

    ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಮಯ ನಿಗದಿಪಡಿಸಿದ್ದು, ಜುಲೈ 14ರ ಮಧ್ಯಾಹ್ನ 2.35ಕ್ಕೆ ಸರಿಯಾಗಿ ಗಗನನೌಕೆ ನಭಕ್ಕೆ ನೆಗೆಯಲಿದೆ.

    ರಾಕೆಟ್‌ನಲ್ಲಿ ಸುತ್ತುವರಿದಿರುವ ಬಾಹ್ಯಾಕಾಶ ನೌಕೆಯನ್ನು ಲಾಂಚ್‌ಪ್ಯಾಡ್‌ಗೆ ಸಾಗಿಸಿದ ಬಳಿಕ ಇಸ್ರೋ ಈ ಘೋಷಣೆ ಮಾಡಿದೆ. ಈ ಮೊದಲು ಜುಲೈ 13ರ ಮಧ್ಯಾಹ್ನ 2.30ಕ್ಕೆ ಉಡಾವಣೆ ಆಗಲಿದೆ ಎಂದು ಇಸ್ರೋ ಹೇಳಿತ್ತು. ಆದಾಗ್ಯೂ ಈ ದಿನವನ್ನೂ ಸಹ ಇಸ್ರೋ ಪರಿಷ್ಕರಿಸಿಲ್ಲ.

    ಇದನ್ನೂ ಓದಿ: ಮನುಷ್ಯರಷ್ಟೇ ಅಲ್ಲ, ಪಕ್ಷಿಗಳಿಂದಲೂ ತಮ್ಮ ಸಂಗಾತಿಗೆ ವಿಚ್ಛೇದನ: ಆಘಾತಕಾರಿ ಅಂಶ ಪತ್ತೆ

    ಈ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್​ ಮಾತನಾಡಿ, ಜುಲೈ 19ರವರೆಗೂ ಲಾಂಚ್​ ವಿಂಡೋ ತೆರೆದೇ ಇರುತ್ತದೆ. ಒಂದು ವೇಳೆ ನಿಗದಿಯಾದ ದಿನಕ್ಕೆ ಗಗನನೌಕೆ ಉಡಾವಣೆ ಆಗದಿದ್ದರೆ, ಜು. 19ರ ಬ್ಯಾಕ್ ಅಪ್ ದಿನಾಂಕವರೆಗೂ ಮುಂದೂಡಬಹುದು ಎಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ವಿಫಲವಾಗದೇ ಚಂದ್ರನಲ್ಲಿ ಗಗನನೌಕೆ ಮೃಧುವಾಗಿ ಇಳಿಯುವ ನಂಬಿಕೆಯನ್ನು ವ್ಯಕ್ತಪಡಿಸಿದರು.

    ಅಂದಹಾಗೆ ಶ್ರೀಹರಿಕೋಟಾದ ಸತೀಶ್​ ಧವನ್ ಸ್ಪೇಸ್ ಸೆಂಟರ್​ನಿಂದ ಜಿಎಸ್​ಎಲ್​ವಿ ಮಾರ್ಕ್ 3 ಮೂಲಕ ಈ ಉಡಾವಣೆ ನಡೆಯಲಿದೆ. ಚಂದ್ರಯಾನ-3ಕ್ಕೆ 615 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಚಂದ್ರಯಾನ-3 ಯಶಸ್ವಿಯಾಗುವ ಕುರಿತು ಇಸ್ರೋ ವಿಶ್ವಾಸ ಹೊಂದಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಇಳಿಸಲು ರೂಪುರೇಷೆ ರಚಿಸಿಕೊಳ್ಳಲಾಗಿದೆ. ಉಡಾವಣೆ ಸಂದರ್ಭದಲ್ಲಿನ ಅತ್ಯಧಿಕ ವೇಗ ಮತ್ತು ಅತೀವ ಕಂಪನ ತಡೆದುಕೊಳ್ಳುವ ಸಾಮರ್ಥ್ಯದ ಕುರಿತಂತೆ ಅಗತ್ಯ ಪರೀಕ್ಷೆಗಳನ್ನು ಮಾರ್ಚ್‌ನಲ್ಲಿಯೇ ನಡೆಸಿ ಸಜ್ಜಾಗಿದೆ.

    ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯ ಪ್ರದರ್ಶಿಸುವುದು ಮತ್ತು ರೊಬೊಟಿಕ್ ರೋವರ್ ನಿರ್ವಹಿಸುವುದು ಚಂದ್ರಯಾನ-3ರ ಮುಖ್ಯ ಉದ್ದೇಶವಾಗಿದೆ. ಈ ಮಿಷನ್​ ಚಂದ್ರನ ಕುರಿತ ನಮ್ಮ ಅರಿವನ್ನು ಮತ್ತಷ್ಟು ವಿಸ್ತಾರಗೊಳಿಸುವ ನಿರೀಕ್ಷೆ ಇದೆ ಎಂದು ಇಸ್ರೋ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಉರ್ಫಿ ಚಿತ್ರ ವಿಚಿತ್ರ ಬಟ್ಟೆ ಧರಿಸುವುದೇಕೆ?; ಕೊನೆಗೂ ರಿವೀಲ್​ ಆಯ್ತು ಸೀಕ್ರೆಟ್

    ಈವರೆಗೆ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ತಮ್ಮ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡ್​ ಮಾಡಿವೆ. ಆ ದೇಶಗಳು ಯಾವುವೆಂದರೆ, ಅಮೆರಿಕ, ರಷ್ಯಾ ಮತ್ತು ಚೀನಾ. (ಏಜೆನ್ಸೀಸ್​)

    ಚಂದ್ರಯಾನ-3: ಗಗನನೌಕೆ ಉಡಾವಣೆಗೆ ಸಮಯ ನಿಗದಿ; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts