More

    ಚಂದ್ರಯಾನ-3: ಗಗನನೌಕೆ ಉಡಾವಣೆಗೆ ಸಮಯ ನಿಗದಿ; ಇಲ್ಲಿದೆ ವಿವರ..

    ನವದೆಹಲಿ: ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಮಯ ನಿಗದಿಪಡಿಸಿದ್ದು, ಜುಲೈ 13ರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಗಗನನೌಕೆ ನಭಕ್ಕೆ ನೆಗೆಯಲಿದೆ.

    ಶ್ರೀಹರಿಕೋಟಾದ ಸತೀಶ್​ ಧವನ್ ಸ್ಪೇಸ್ ಸೆಂಟರ್​ನಿಂದ ಜಿಎಸ್​ಎಲ್​ವಿ ಮಾರ್ಕ್ 3 ಮೂಲಕ ಈ ಉಡಾವಣೆ ನಡೆಯಲಿದೆ. ಚಂದ್ರಯಾನ-3ಕ್ಕೆ 615 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟ್ ತೆರೆಯಲು ತಯಾರಿ: ವಿವರಣೆ ಕೇಳಿ ಪೊಲೀಸರಿಂದ ನೋಟಿಸ್ ಜಾರಿ

    ಚಂದ್ರಯಾನ-3 ಯಶಸ್ವಿಯಾಗುವ ಕುರಿತು ಇಸ್ರೋ ವಿಶ್ವಾಸ ಹೊಂದಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಇಳಿಸಲು ರೂಪುರೇಷೆ ರಚಿಸಿಕೊಳ್ಳಲಾಗಿದೆ. ಉಡಾವಣೆ ಸಂದರ್ಭದಲ್ಲಿನ ಅತ್ಯಧಿಕ ವೇಗ ಮತ್ತು ಅತೀವ ಕಂಪನ ತಡೆದುಕೊಳ್ಳುವ ಸಾಮರ್ಥ್ಯದ ಕುರಿತಂತೆ ಅಗತ್ಯ ಪರೀಕ್ಷೆಗಳನ್ನು ಮಾರ್ಚ್‌ನಲ್ಲಿಯೇ ನಡೆಸಿ ಸಜ್ಜಾಗಲಾಗಿದೆ.

    ಇದನ್ನೂ ಓದಿ: ಭೀಕರ ಅಪಘಾತ: ಎರಡೂ ಕಾರುಗಳು ಜಖಂ, ರಾಜಕಾರಣಿಯ ಪುತ್ರ ಸೇರಿ ನಾಲ್ವರಿಗೆ ಗಾಯ, ಮೂವರ ಪರಿಸ್ಥಿತಿ ಗಂಭೀರ

    ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯ ಪ್ರದರ್ಶಿಸುವುದು ಮತ್ತು ರೊಬೊಟಿಕ್ ರೋವರ್ ನಿರ್ವಹಿಸುವುದು ಚಂದ್ರಯಾನ-3ರ ಮುಖ್ಯ ಉದ್ದೇಶವಾಗಿದೆ. ಈ ಮಿಷನ್​ ಚಂದ್ರನ ಕುರಿತ ನಮ್ಮ ಅರಿವನ್ನು ಮತ್ತಷ್ಟು ವಿಸ್ತಾರಗೊಳಿಸುವ ನಿರೀಕ್ಷೆ ಇದೆ ಎಂದು ಇಸ್ರೋ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗೃಹಲಕ್ಷ್ಮಿ ವಿಳಂಬ?; ಅದೊಂದೇ ಕಾರಣಕ್ಕೆ ಸ್ವಲ್ಪ ತಡವಾಗುತ್ತಿದೆ ಎಂದ ಹೆಬ್ಬಾಳ್ಕರ್​!

    ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts