More

    ಮನುಷ್ಯರಷ್ಟೇ ಅಲ್ಲ, ಪಕ್ಷಿಗಳಿಂದಲೂ ತಮ್ಮ ಸಂಗಾತಿಗೆ ವಿಚ್ಛೇದನ: ಆಘಾತಕಾರಿ ಅಂಶ ಪತ್ತೆ

    ದೆಹಲಿ: ಮನುಷ್ಯರಂತೆ ಪಕ್ಷಿಗಳು ಸಹ ವಿಚ್ಛೇದನವನ್ನು ಪಡೆಯುತ್ತವೆ ಎಂಬುದನ್ನು ವಿಜ್ಞಾನಿಗಳು ಇತ್ತೀಚಿಗೆ ಕಂಡು ಹಿಡಿಯುವುದರ ಜತೆಗೆ ಅವುಗಳ ವಿಚ್ಛೇದನಕ್ಕೆ ಕಾರಣವಾಗುವ ಎರಡು ಪ್ರಮುಖ ಅಂಶಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

    ಇದನ್ನೂ ಓದಿ: ಪತ್ನಿ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಪ್ರಾಣತ್ಯಾಗ ಮಾಡಿದ ಅಳಿಯ

    ಪಕ್ಷಿಗಳ ನಡುವೆ ವಿಚ್ಛೇದನಕ್ಕೆ ಕಾರಣವಾಗುವ ಎರಡು ಪ್ರಮುಖ ಅಂಶಗಳ ಎಂದರೆ ಅವುಗಳ ನಡವಳಿಕೆ, ವ್ಯವಹಾರಗಳು ಮತ್ತು ಪ್ರತ್ಯೇಕತೆ ಆಗಿದೆ. ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿಯಲ್ಲಿ ಪ್ರಕಟವಾದ ಲೇಖನದಲ್ಲಿ, ಚೀನಾ ಮತ್ತು ಜರ್ಮನಿಯ ಸಂಶೋಧಕರು 232 ಪಕ್ಷಿ ಪ್ರಭೇದಗಳನ್ನು ವಿಶ್ಲೇಷಿಸಿ ಇದಕ್ಕೆ ಸಂಬಂಧಿಸಿದ ಕೆಲವು ಅಚ್ಚರಿಯ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ.

    ಸುಮಾರು 90% ಪಕ್ಷಿ ಪ್ರಭೇದಗಳು ಸಾಮಾನ್ಯವಾಗಿ ಏಕಪತ್ನಿಯಾಗಿ ಉಳಿದು, ಸಂತಾನೋತ್ಪತ್ತಿ ಅವಧಿಯಲ್ಲಿ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಆದರೆ, ಕೆಲವು ಏಕಪತ್ನಿ ಪಕ್ಷಿಗಳು ತಮ್ಮ ಮೂಲ ಸಂಗಾತಿಯು ಇನ್ನೂ ಜೀವಂತವಾಗಿರುವಾಗಲೇ, ಎಂದರೆ ಸಂತಾನವೃದ್ಧಿ ಋತುಗಳಲ್ಲಿ ಹೊಸ ಸಂಗಾತಿಯನ್ನು ಆರಿಸಿಕೊಳ್ಳುತ್ತವೆ. ಈ ನಡವಳಿಕೆಯನ್ನು ವಿಚ್ಛೇದನ ಎಂದು ಕರೆಯಲಾಗುತ್ತದೆ.

    ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ವಂದೇ ಭಾರತ್ ರೈಲು ಟಿಕೆಟ್​ ದರ ಶೀಘ್ರದಲ್ಲೇ ಇಳಿಕೆ

    ಪಕ್ಷಿಗಳಲ್ಲಿ ವಿಚ್ಛೇದನಕ್ಕೆ ಕಾರಣವಾಗುವ ಅಂಶಗಳು ಲೈಂಗಿಕ ಸಂಘರ್ಷ ಮತ್ತು ಪರಿಸರದ ಒತ್ತಡದಂತಹ ಜನರಲ್ಲಿ ಪ್ರತ್ಯೇಕತೆಗೆ ಕಾರಣವಾಗುವ ಅಂಶಗಳಿಗೆ ಹೋಲಿಸಬಹುದು ಎಂದು ಸಂಶೋಧಕರು ತೋರಿಸಿದ್ದಾರೆ.

    ಅಲ್ಲದೇ, ದೀರ್ಘ ವಲಸೆ ಅಂತರವನ್ನು ಹೊಂದಿರುವ ಜಾತಿಯ ಪಕ್ಷಿಗಳು ಹೆಚ್ಚಿನ ವಿಚ್ಛೇದನ ದರವನ್ನು ಹೊಂದಿದ್ದು, ವಲಸೆಯ ನಂತರ, ಜೋಡಿಗಳು ವಿಭಿನ್ನ ಸಮಯಗಳಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು, ಆಗ ಆಯಾ ಪರಿಸರಕ್ಕೆ ಅನುಗುಣವಾಗಿ ಪಕ್ಷಿಗಳು ವಿಭಿನ್ನ ಪಾಲುದಾರರೊಂದಿಗೆ ಸಂಗಾತಿಯಾಗುತ್ತವೆ, ಇದು ಮೊದಲನೇ ಸಂಗಾತಿಯಿಂದ ವಿಚ್ಛೇದನಕ್ಕೆ ಕಾರಣವಾಗುತ್ತದೆ.

    ಇದನ್ನೂ ಓದಿ: ವಿಷಾನಿಲ ಸೋರಿಕೆ: 3 ಮಕ್ಕಳು ಸೇರಿದಂತೆ 16 ಮಂದಿ ಸಾವು

    ವಲಸೆಯ ಪಕ್ಷಿಗಳು ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಪಕ್ಷಿಯ ಜತೆಗೆ ಸಂತಾನೋತ್ಪತ್ತಿ ಮಾಡುತ್ತವೆ. ಇದು ಆಕಸ್ಮಿಕ ಬೇರ್ಪಡಿಕೆಯಿಂದಾಗಿ ಉಂಟಾಗಿರುವ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಹೆಚ್ಚಿನ ವಿಚ್ಛೇದನ ದರ ಹೊಂದಿರುವ ಪಕ್ಷಿಗಳ ಜಾತಿಗಳು ಮತ್ತು ಕಡಿಮೆ ವಿಚ್ಛೇದನ ದರ ಹೊಂದಿರುವ ಜಾತಿಗಳಂತೆ ಪರಸ್ಪರ ನಿಕಟ ಸಂಬಂಧವನ್ನು ಹೊಂದಿವೆ.

    ಪ್ಲೋವರ್‌ಗಳು, ಸ್ವಾಲೋಗಳು, ಮಾರ್ಟಿನ್‌ಗಳು, ಓರಿಯೊಲ್ಸ್ ಮತ್ತು ಬ್ಲ್ಯಾಕ್‌ಬರ್ಡ್‌ಗಳಂತಹ ಕೆಲವು ಪಕ್ಷಿ ಪ್ರಭೇದಗಳು ಹೆಚ್ಚಿನ ವಿಚ್ಛೇದನ ದರಗಳು ಕಂಡು ಬಂದರೆ. ಪೆಟ್ರೆಲ್‌ಗಳು, ಕಡಲುಕೋಳಿಗಳು, ಹೆಬ್ಬಾತುಗಳು ಮತ್ತು ಹಂಸಗಳು ಕಡಿಮೆ ವಿಚ್ಛೇದನ ದರಗಳನ್ನು ಹೊಂದಿವೆ ಎಂದು ಸಂಶೋಧಕರು ತೋರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts