ಈ ನಟರ ಜತೆ ಅಭಿನಯಿಸಲು ಬಹಳ ಭಯವಾಗ್ತಿತ್ತು: ಶಾಕಿಂಗ್ ಹೇಳಿಕೆ ಕೊಟ್ಟ ‘ಆ್ಯಕ್ಷನ್​​ ಕ್ವೀನ್​’

blank

ತ್ರಿಶೂರ್​: ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಆ್ಯಕ್ಷನ್​ ಕ್ವೀನ್ ಎಂದೇ ಖ್ಯಾತಿ ಗಳಿಸಿದ್ದ ನಟಿ ವಾಣಿ ವಿಶ್ವನಾಥ್​, ತಾವು ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರ ಹಾಗೂ ಸಿನಿಮಾ ಮೂಲಕವೇ ಚಿತ್ರರಸಿಕರ ಮನದಲ್ಲಿ ಒಂದು ಜಾಗ ಕಂಡುಕೊಂಡವರು. ಸ್ಟಾರ್​ ನಟರ ಚಲನಚಿತ್ರಗಳಲ್ಲಿ ಪುರುಷ ನಾಯಕರಿಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಪಾತ್ರವನ್ನು ನಿಭಾಯಿಸುತ್ತಿದ್ದ ನಟಿ, ಸಿನಿಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲರಾಗುತ್ತಿರಲಿಲ್ಲ. ಸದ್ಯ ತಮ್ಮ ಸಿನಿ ವೃತ್ತಿಯ ಆರಂಭಿಕ ದಿನಗಳ ಬಗ್ಗೆ ಇದೀಗ ಮುಕ್ತವಾಗಿ ಮಾತನಾಡಿರುವ ವಾಣಿ, ಹಲವು ಸಂಗತಿಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಈ ರಾಶಿಯವರಿಗಿಂದು ಆಭರಣ ಖರೀದಿಸುವ ಯೋಗ: ನಿತ್ಯಭವಿಷ್ಯ

ಮಲಯಾಳಂ ಚಿತ್ರರಂಗದ ದಿಗ್ಗಜ ನಟರಾದ ಮಮ್ಮೂಕ್ಕ, ಲಾಲತ್ತನ್, ಮತ್ತು ಸುರೇಶ್ ಗೋಪಿ ಇವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವಾಗ ಬಹಳ ಭಯವಾಗ್ತಿತ್ತು. ಆದರೆ, ಸೆಟ್​ನಲ್ಲಿದ್ದ ಟೆಕ್ನಿಕಲ್​ ಸಿಬ್ಬಂದಿಗಳು, ಸ್ಟಾರ್ಟ್, ಕ್ಯಾಮೆರಾ, ಆಕ್ಷನ್ ಎಂದು ಹೇಳಿದಾಗ ನಾನು ಆ ಭಯ, ಅಂಜಿಕೆಯನ್ನೇ ಮರೆತು ಹೋಗ್ತಿದ್ದೆ. ಇಂತಹ ನಟರ ಜತೆ ಅಭಿನಯಿಸಿದ ಮೇಲೆ ನನ್ನನ್ನು ಹೊಸ ಧೈರ್ಯವೇ ಆವರಿಸಿಕೊಂಡಿತು. ಮುಂದಿನ ಶಾಟ್​ನಲ್ಲಿ 25ನೇ ಮಹಡಿಯಿಂದ ಜಿಗಿಯಬೇಕು ಎಂದರೆ, ಖಂಡಿತ ಹಾರಲು ನಾನು ಸಿದ್ಧಳಿದ್ದೆ. ಅಷ್ಟರ ಮಟ್ಟಿಗೆ ನನಗೆ ಧೈರ್ಯ ಬಂದಿತ್ತು ಎಂದಿದ್ದಾರೆ.

ಚಿತ್ರರಂಗದ ದೊಡ್ಡ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದು, ಇಂದು ನನ್ನನ್ನು ಒಬ್ಬ ಪರಿಪೂರ್ಣ ನಟಿ ಎನ್ನುವಂತೆ ಮಾಡಿದೆ. ನನ್ನ ಅಭಿನಯವನ್ನು ಬೆಳ್ಳಿ ಪರದೆಯ ಮೇಲೆ ನೋಡಿ, ಅಭಿಮಾನ ತೋರಿದ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಎಂದು ಹೇಳಿದರು. ಕ್ಯಾಮರಾ ಮುಂದೆ ಬಂದರೆ ಮಾತ್ರ ತಾನೊಬ್ಬ ನಟಿ ಎಂದು ಹೇಳುವ ವಾಣಿ, ಎಲ್ಲರಂತೆ ನಾನು ಕೂಡ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬದುಕು ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೇ ಅವರು ಅಭಿನಯದ ಚಿತ್ರ ಒರು ಅನ್ವೇಷನತಿಂತೆ ತುಡಕ್ಕಂ ಚಿತ್ರ ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಓಪನಿಂಗ್ ಪಡೆದುಕೊಂಡಿದೆ,(ಏಜೆನ್ಸೀಸ್).

ಈ ಅನುಭವಗಳು ನಿಮಗಾಗಿದ್ದರೆ ಖಂಡಿತ ನೀವು ಮಿಡೆಲ್​ ಕ್ಲಾಸ್​ ಕುಟುಂಬದಲ್ಲಿ ಬೆಳೆದವರೇ!

 

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…