

ಮೇಷ: ಆದಾಯ ವೃದ್ಧಿಯಾಗಲಿದೆ. ವಿದೇಶ ಸಂಚಾರ ಯೋಗ. ಶುಭಕಾರ್ಯಕ್ಕೆ ಅಡೆತಡೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 5
ವೃಷಭ: ಸರ್ಕಾರಿ ಕೆಲಸಕ್ಕೆ ಅಡ್ಡಿ. ನಿರ್ವಾಹಕ, ಚಾಲಕರ ಕೆಲಸದಲ್ಲಿ ಬದಲಾವಣೆ. ಸಹೋದರರೊಂದಿಗೆ ವಾಗ್ವಾದ. ಚಾಲನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 1
ಮಿಥುನ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಗೃಹ ನಿರ್ವಣಕ್ಕೆ ಆಪ್ತರ ಸಲಹೆ. ಮಹಿಳೆಯರಿಗೆ ಆಭರಣ ಖರೀದಿಸುವ ಯೋಗ. ಶುಭಸಂಖ್ಯೆ: 4
ಕಟಕ: ಭವಿಷ್ಯದ ಚಿಂತೆ ಕಾಡಲಿದೆ. ದಾಂಪತ್ಯ ವಿರಸ ತಾರಕಕ್ಕೆ ಹೋದೀತು. ಉದ್ಯೋಗದ ಪ್ರಯತ್ನದಲ್ಲಿ ಸಫಲತೆ. ಕಲಾವಿದರಿಗೆ ಧನ ಲಾಭ. ಶುಭಸಂಖ್ಯೆ: 2
ಸಿಂಹ: ನಗೆ ಭಾಷಣಕಾರರಿಗೆ ಅವಮಾನ ಸಾಧ್ಯತೆ. ಬರಹಗಾರರು ಮತ್ತು ಉಪನ್ಯಾಸಕರಿಗೆ ಸನ್ಮಾನ. ಲೆಕ್ಕಪರಿಶೋಧಕರಿಗೆ ಧನಲಾಭ. ಶುಭಸಂಖ್ಯೆ: 6
ಕನ್ಯಾ: ಕನಸಿನ ವಿದೇಶ ಪ್ರವಾಸಕ್ಕೆ ಅವಕಾಶ ಒದಗಿ ಬರಲಿದೆ. ಕುಟುಂಬದಲ್ಲಿ ಮದುವೆ ಕಾರ್ಯದ ಸಂಭ್ರಮ. ಹಳೆ ಸ್ನೇಹಿತರ ಭೇಟಿ. ಶುಭಸಂಖ್ಯೆ: 2
ತುಲಾ: ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಉದ್ದಿಮೆದಾರ ಮಹಿಳೆಯರಿಗೆ ಆರ್ಥಿಕ ಸಮಸ್ಯೆ. ವಾಹನ ಖರೀದಿ. ನಾಟ್ಯ ಶಿಕ್ಷಕರಿಗೆ ಮನ್ನಣೆ. ಶುಭಸಂಖ್ಯೆ: 9
ವೃಶ್ಚಿಕ: ದುಶ್ಚಟದಿಂದ ಮಕ್ಕಳನ್ನು ದೂರವಿಡುವ ಪ್ರಯತ್ನ ವಿಫಲ. ಆಹಾರಧಾನ್ಯ ಮಾರಾಟಗಾರರಿಗೆ ಲಾಭ. ಏಕತಾನತೆಯಿಂದ ಬೇಸರ. ಶುಭಸಂಖ್ಯೆ: 7
ಧನಸ್ಸು: ಪ್ರಭಾವಿಗಳ ಸಂಪರ್ಕ. ಉದ್ಯೋಗ ಬದಲಾವಣೆ. ಚರ್ಮರೋಗಿಗಳು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಹೋಟೆಲ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 5
ಮಕರ: ಮನೆಯಲ್ಲಿ ಅಶಾಂತಿ. ವಿಚ್ಛೇದನ ಪ್ರಕರಣದಲ್ಲಿ ನಿಮ್ಮ ಪರವಾಗಿ ತೀರ್ಪ. ಭತ್ತ, ಅಡಕೆ ಕೃಷಿಕರ ಬೆಳೆಗೆ ಬೆಲೆಯಿಂದ ಸಮಾಧಾನ. ಶುಭಸಂಖ್ಯೆ: 2
ಕುಂಭ: ಭರತನಾಟ್ಯ ಕಲಾವಿದರಿಗೆ ಆರ್ಥಿಕ ಲಾಭ. ಚಿಕ್ಕ ಪುಟ್ಟ ವರ್ತಕರಿಗೆ ಮೋಸ ಸಾಧ್ಯತೆ. ಹೂಡಿಕೆ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 7
ಮೀನ: ವಕೀಲರು ಮತ್ತು ನ್ಯಾಯಾಧೀಶರಿಗೆ ವಿಶೇಷ ದಿನ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಆರಕ್ಷಕ ವೃತ್ತಿಯವರಿಗೆ ಒತ್ತಡದ ಕೆಲಸ. ಶುಭಸಂಖ್ಯೆ: 1