ಮುಂಬೈ: ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮಾದ ನಿರ್ಮಾಪಕರು ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಗೆ (CBFC) ನಿರ್ದೇಶನ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಆದೇಶವನ್ನು ನೀಡಲು ನಿರಾಕರಿಸಿತು. ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಆದೇಶದಿಂದಾಗಿ ಸಿಬಿಎಫ್‌ಸಿಗೆ ಆದೇಶ ರವಾನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನು ಓದಿ: ಆ ಪಾತ್ರದ ನಟನೆ ಬಳಿಕ 3 ತಿಂಗಳು ಕಣ್ಣು ಕಾಣಲಿಲ್ಲ; ವೈದ್ಯರು ಎಚ್ಚರಿಸಿದ್ರು ಕೂಡ ನಾನು ಈ ತಪ್ಪು ಮಾಡಿದೆ ಎಂದ ಖ್ಯಾತ ನಟ
ಕೋರ್ಟ್ ಹೇಳಿಕೆ ಬಳಿಕ ಬಿಟೌನ್ ಕ್ವೀನ್ ಕಂಗನಾ, ಎಲ್ಲರ ಟಾರ್ಗೆಟ್ ನಾನೆ ಆಗಿದ್ದೇನೆ. ನಿದ್ರೆಯಲ್ಲಿರುವ ರಾಷ್ಟ್ರವನ್ನು ಎಬ್ಬಿಸಿದ್ದಕ್ಕೆ ಬೆಲೆ ತೆರುತ್ತಿದ್ದೇನೆ. ನಾನು ಏನು ಮಾತನಾಡುತ್ತಿದ್ದೇನೆಂದು ಅವರಿಗೆ ತಿಳಿದಿಲ್ಲ. ನಾನು ಏಕೆ ಕಾಳಜಿ ವಹಿಸುತ್ತಿದ್ದೇನೆ ಎಂದು ಅವರಿಗೆ ಗೊತ್ತಿಲ್ಲ. ಏಕೆಂದರೆ ಅವರು ಶಾಂತಿಯನ್ನು ಬಯಸುತ್ತಾರೆ, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.ಗಡಿಯಲ್ಲಿರುವ ಸೈನಿಕನಿಗೂ ಮೌನವಾಗಿರುವ ಅದೇ ಸವಲತ್ತು ಸಿಗಲಿ ಎಂದು ಬಯಸುತ್ತೇನೆ. ಅವನು ಪಾಕಿಸ್ತಾನಿ ಅಥವಾ ಚೀನೀಯರನ್ನು ಶತ್ರುಗಳೆಂದು ಪರಿಗಣಿಸುವ ಅಗತ್ಯವಿಲ್ಲ ಎಂದೆನ್ನಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಚಿತ್ರದ ಟ್ರೇಲರ್‌ನಲ್ಲಿ ತಪ್ಪಾದ ಐತಿಹಾಸಿಕ ಸಂಗತಿಗಳನ್ನು ತೋರಿಸಲಾಗಿದೆ ಎಂಬುದು ಸಿನಿಮಾ ಕುರಿತಾದ ಆರೋಪವಾಗಿದೆ. ಇದು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುವುದು ಮಾತ್ರವಲ್ಲದೆ ದ್ವೇಷ ಮತ್ತು ಸಾಮಾಜಿಕ ಅಪಶ್ರುತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತಿದೆ. ಚಿಂತಿಸಬೇಡಿ, ಜೀವನದ ಸತ್ಯವು ವಿಭಿನ್ನವಾಗಿದೆ ಎಂದು ಕಂಗಣಾ ಹೇಳಿದ್ದಾರೆ.
ಸೆಪ್ಟೆಂಬರ್ 6ರಂದು ರಿಲೀಸ್ ಆಗಬೇಕಿದ್ದ ಎಮರ್ಜೆನ್ಸಿ ಸಿನಿಮಾ ಸಿಬಿಎಫ್ಸಿಯಿಂದ ಸರ್ಟಿಫಿಕೇಟ್ ಪಡೆಯಲು ವಿಳಂಬವಾಗಿರುವ ಕಾರಣ ಮುಂದೂಡಲಾಗಿದೆ. ಆದರೆ ಸಿನಿಮಾ ಎಂದು ಬಿಡುಗಡೆಯಾಗಲಿದೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಎಮರ್ಜೆನ್ಸಿ ಸಿನಿಮಾ ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)
6 ಪತ್ನಿಯರು, 10000 ಮಕ್ಕಳ ತಂದೆ ಹೆನ್ರಿ; ವಿಶ್ವದ ಅತ್ಯಂತ ಹಳೆಯ ಜೀವಂತ ಮೊಸಳೆ ಬಗ್ಗೆ ನಿಮಗೆಷ್ಟು ಗೊತ್ತು?