6 ಪತ್ನಿಯರು, 10000 ಮಕ್ಕಳ ತಂದೆ ಹೆನ್ರಿ; ವಿಶ್ವದ ಅತ್ಯಂತ ಹಳೆಯ ಜೀವಂತ ಮೊಸಳೆ ಬಗ್ಗೆ ನಿಮಗೆಷ್ಟು ಗೊತ್ತು?

ಕೇಪ್​ಟೌನ್​​: ಪ್ರಪಂಚದಾದ್ಯಂತ ಪ್ರಸ್ತುತ ವಿಶ್ವದ ಅತ್ಯಂತ ಹಳೆಯ ಮೊಸಳೆ ವಿಚಾರ ಚರ್ಚೆಯಾಗುತ್ತಿದೆ. ಈ ಮೊಸಳೆಗೆ 124 ವರ್ಷ ಎಂದರೆ ನಂಬುತ್ತೀರಾ..? ಹೌದು ಈ ಮೊಸಳೆಗೆ 124 ವರ್ಷ, ಇದು ವಿಶ್ವದ ಅತ್ಯಂತ ಹಳೆಯ ಜೀವಂತ ಸರೀಸೃಪಗಳಲ್ಲಿ ಒಂದಾಗಿದೆ. ಈ ದೈತ್ಯ ಮೊಸಳೆಯ ಹೆಸರು ಹೆನ್ರಿ. 700 ಕೆಜಿ ತೂಕ ಮತ್ತು 16 ಅಡಿ ಎತ್ತರವಿರುವ ಈ ಮೊಸಳೆಗೆ ಆರು ಪತ್ನಿಯರು. ಬಹುಪತ್ನಿತ್ವವನ್ನು ಪಾಲಿಸುತ್ತಿರುವ ಹೆನ್ರಿಗೆ 10 ಸಾವಿರಕ್ಕೂ ಹೆಚ್ಚು ಮಕ್ಕಳಿವೆ ಎಂದು ಅದು ವಾಸವಿರುವ ಮೃಗಾಲಯದಿಂದ ಮಾಹಿತಿ ಬಂದಿದೆ.

ಇದನ್ನು ಓದಿ: ಗೂಢಚಾರಿಕೆ ತಿಮಿಂಗಿಲ ಶವವಾಗಿ ಪತ್ತೆ; ‘ಹ್ವಾಲ್ಡಿಮಿರ್’​ ನಿಗೂಢ ಸಾವಿನ ಬಗ್ಗೆ ರಷ್ಯಾ ಮೌನವಾಗಿರುವುದೇಕೆ?

ಹೆನ್ರಿಯು 1900 ಡಿಸೆಂಬರ್ 16 ರಂದು ಬೋಟ್ಸ್ವಾನಾದ ಒಕಾವಾಂಗೊ ಡೆಲ್ಟಾದಲ್ಲಿ ಜನಿಸಿತು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಡೆಲ್ಟಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ದಕ್ಷಿಣ ಆಫ್ರಿಕಾದ ದೇಶದಲ್ಲಿ ವಿಶಾಲ ಒಳನಾಡನ್ನು ಹೊಂದಿದೆ. ಹೆನ್ರಿಯ ಹಲ್ಲುಗಳು ಭಯಾನಕವಾಗಿದ್ದು ಅದರ ಪಾದಗಳು ತುಂಬಾ ದೊಡ್ಡದಾಗಿದೆ ಮತ್ತು ಚರ್ಮವು ಶುಷ್ಕ ಹಾಗೂ ಚಪ್ಪಟೆಯಾಗಿದೆ. ಒಂದು ಶತಮಾನಕ್ಕಿಂತಲೂ ಹಳೆಯದಾಗಿರುವ ಈ ಮೊಸಳೆಯ ಉದ್ದವು ಮಿನಿಬಸ್‌ಗೆ ಸಮಾನವಾಗಿದೆ.

ಈ ಮೊಸಳೆ ಬೋಟ್ಸ್ವಾನ ಬುಡಕಟ್ಟಿನ ಮಕ್ಕಳನ್ನು ತಿನ್ನುತ್ತಿದ್ದ ಎಂಬ ಕುಖ್ಯಾತಿ ಪಡೆದುಕೊಂಡಿದೆ. ಅವರು 1903ರಲ್ಲಿ ಅವನನ್ನು ಕೊಲ್ಲಲು ಆನೆಯ ಸಹಾಯವನ್ನು ಪಡೆಯಲಾಯಿತು. ಸರ್ ಹೆನ್ರಿ ನ್ಯೂಮನ್ ಒಬ್ಬ ಪ್ರಸಿದ್ಧ ಬೇಟೆಗಾರ ಅವರ ಹೆಸರನ್ನೆ ಈ ಮೊಸಳೆಗೆ ಇಡಲಾಗಿದೆ. ಈ ಮೊಸಳೆಯನ್ನು ಕ್ರೂರವಾಗಿ ಕೊಲ್ಲುವ ಬದಲು ಹೆನ್ರಿ ನ್ಯೂಮನ್ ಸೆರೆಹಿಡಿದು ವಿದೇಶದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಿದರು.

ಕಳೆದ ಮೂರು ದಶಕಗಳಿಂದ ಹೆನ್ರಿ ಹೆಸರಿನ ದೈತ್ಯ ಮೊಸಳೆ ದಕ್ಷಿಣ ಆಫ್ರಿಕಾದ ಸ್ಕಾಟ್ಸ್‌ಬರ್ಗ್‌ನಲ್ಲಿರುವ ಕ್ರಾಕ್‌ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ವಾಸಿಸುತ್ತಿದೆ. ಹೆನ್ರಿ ಒಂದು ನೈಲ್ ಮೊಸಳೆ. ಇದು 26 ದೇಶಗಳಲ್ಲಿ ಕಂಡುಬರುವ ತಳಿಯಾಗಿದೆ. ಈ ಎಲ್ಲಾ ದೇಶಗಳು ಮುಖ್ಯವಾಗಿ ಉಪಸಹಾರನ್ ಆಫ್ರಿಕಾದಲ್ಲಿ ನೆಲೆಗೊಂಡಿವೆ. ಈ ಮೊಸಳೆಗಳು ಸರೋವರಗಳು, ನದಿಗಳು, ಜೌಗು ಪ್ರದೇಶಗಳು ಮತ್ತು ಜವುಗು ಪ್ರದೇಶಗಳಂತಹ ವಿವಿಧ ಜಲವಾಸಿ ಪರಿಸರದಲ್ಲಿ ವಾಸಿಸುತ್ತವೆ.

ಈ ಅಪಾಯಕಾರಿ ನರಭಕ್ಷಕಗಳು ಅತ್ಯಂತ ಉಗ್ರವಾಗಿರುತ್ತವೆ. ಜೀಬ್ರಾಗಳು ಮತ್ತು ಮುಳ್ಳುಹಂದಿಗಳಂತಹ ತಮ್ಮ ಬೇಟೆಯನ್ನು ಕೊಲ್ಲಲು ಹೆದರುವುದಿಲ್ಲ. ಈ ಪ್ರದೇಶದಲ್ಲಿ ಪ್ರತಿ ವರ್ಷ ನೂರಾರು ಜನರು ನೈಲ್ ಮೊಸಳೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಹೆನ್ರಿ ಭೂಮಿಯ ಮೇಲೆ ಸಂಚರಿಸುವ ಅತ್ಯಂತ ಹಳೆಯ ಜೀವಂತ ಮೊಸಳೆ ಎಂಬ ಬಿರುದನ್ನು ಹೊಂದಿದೆ.(ಏಜೆನ್ಸೀಸ್​​)

ಕಪಿಲ್​ನನ್ನು ಜಗತ್ತು ಶಪಿಸುತ್ತದೆ; ಆಲ್​ರೌಂಡರ್​​​​ ಯುವರಾಜ್​​ ಸಿಂಗ್​​ ತಂದೆ ಹೀಗೆಳಿದ್ದೇಕೆ?

Share This Article

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…