ಗೂಢಚಾರಿಕೆ ತಿಮಿಂಗಿಲ ಶವವಾಗಿ ಪತ್ತೆ; ‘ಹ್ವಾಲ್ಡಿಮಿರ್’​ ನಿಗೂಢ ಸಾವಿನ ಬಗ್ಗೆ ರಷ್ಯಾ ಮೌನವಾಗಿರುವುದೇಕೆ?

ನಾರ್ವೆ: ಬೇಹುಗಾರಿಕೆ ಉದ್ದೇಶಗಳಿಗಾಗಿ ರಷ್ಯಾದಿಂದ ತರಬೇತಿ ಪಡೆದಿದ್ದ ತಿಮಿಂಗಿಲ ಇದೀಗ ನಾರ್ವೆ ಕರಾವಳಿಯಲ್ಲಿ ನಿಗೂಢವಾಗಿ ಮೃತಪಟ್ಟಿದೆ. ಇಡೀ ಜಗತ್ತಿನ ಗಮನ ಸೆಳೆದಿದ್ದ ರಷ್ಯನ್​ ಸ್ಪೈ ತಿಮಿಂಗಿಲ ಎಂದೆ ಫೇಮಸ್​ ಆಗಿದ್ದ ಹ್ವಾಲ್ಡಿಮಿರ್ (Hvaldimir) ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ಪತ್ತೆಯಾಗಿದೆ. ಕ್ರೇನ್​ ಸಹಾಯದಿಂದ ತಿಮಿಂಗಿಲ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿ: ಅತ್ಯಾಚಾರದಂತಹ ಸೂಕ್ಷ್ಮ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ; ಸಚಿವ ಕಿರಣ್​​ ರಿಜಿಜು

ವರದಿಗಳ ಪ್ರಕಾರ ರಷ್ಯಾದ ಈ ಗೂಢಚಾರಿ ತಿಮಿಂಗಿಲದ ದೇಹದಲ್ಲಿ ಕ್ಯಾಮೆರಾಗಳು ಮತ್ತು ಇನ್ನಿತರ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಮೂಲಕ ಯಾವುದೇ ಪ್ರದೇಶದ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆಯಬಹುದು. ಅಲ್ಲದೆ ಈ ತಿಮಿಂಗಿಲದಿಂದ ಸಮುದ್ರದ ಆಳದಲ್ಲಿ ನಡೆಯುವ ಘಟನೆಗಳ ಚಲನವಲನವನ್ನು ಸಹ ಸೆರೆ ಹಿಡಿಯಲಾಗುತ್ತಿದೆ ಎಂಬ ಆರೋಪಗಳಿವೆ.

ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2 ಸಾವಿರದ 700 ಪೌಂಡ್​ ತೂಕವಿದೆ ಎಂದು ಹೇಳಲಾಗುತ್ತಿದೆ. ಇದು ರಷ್ಯನ್ ಸ್ಪೈ ತಿಮಿಂಗಲ ಅಂತಾನೇ ನಂಬಿದ್ದ ಹಲವು ರಾಷ್ಟ್ರಗಳು ಇದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಹೆಸರು ಸೇರಿಸಿ ಹ್ವಾಲ್ಡಿಮಿರ್ (Hvaldimir)​ ಅಂತ ಹೆಸರಿಟ್ಟಿದ್ದಾರೆ. ಈ ಹಿಂದೆ ಓಸ್ಲೋ ಕರಾವಳಿಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದೇ ಸಮಯದಲ್ಲಿ ಕೊನೆಯ ಬಾರಿಗೆ ಹ್ವಾಲ್ಡಿಮಿರ್​ ತಿಮಿಂಗಿಲ ಓಸ್ಲೋ ಫ್ಜೋರ್ಡ್‌ನ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಅವ್ರಿಗೆ ತುಂಬಾನೇ ಪ್ರೀತಿಪಾತ್ರವಾಗಿದ್ದ ಹ್ವಾಲ್ಡಿಮಿರ್​ ಹೆಸರಿನ ಈ ತಿಮಿಂಗಿಲ ಸಾಧಾರಣ ಜಲಚರವಲ್ಲ. ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹ್ವಾಲ್ಡಿಮಿರ್​ ತಿಮಿಂಗಿಲ ಮನುಷ್ಯರ ಜತೆ ತುಂಬಾ ಆತ್ಮೀಯವಾಗಿ ವರ್ತಿಸುತ್ತಿತ್ತು. 2019ರಲ್ಲಿ ಸೆಂಟ್ ಪೀಟರ್ಸ್​ಬರ್ಗ್​ ಸಲಕರಣೆ ಎಂಬ ಲೆಬಲ್​ನೊಂದಿಗೆ ಹ್ವಾಲ್ಡಿಮಿರ್​ ಹೆಸರಿನ ತಿಮಿಂಗಿಲ ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು.

ಪ್ರಾಣಿಗಳನ್ನು ಗೂಢಚಾರರನ್ನಾಗಿ ಮಾಡುವ ರಷ್ಯಾದ ಯೋಜನೆಯ ಭಾಗವಾಗಿ ಹ್ವಾಲ್ಡಿಮಿರ್ ತಿಮಿಂಗಿಲ ರಷ್ಯಾದ ಸ್ಪೈ ಆಗಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾ ಮಾತ್ರ ಇಂದಿಗೂ ಆ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಹ್ವಾಲ್ಡಿಮಿರ್​ ತಿಮಿಂಗಿಲದ ಸಾವು ಸಹಜನಾ..? ಇಲ್ಲ ಕೊಲೆನಾ..? ಎಂಬ ವಿಷಯ ಸದ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​​)

ಗಾಯಕಿ ಸುಚಿತ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಇದೇ ಕಾರಣ; ನಟಿ ರೀಮಾ ಕಲ್ಲಿಂಗಲ್ ಹೇಳಿದಿಷ್ಟು

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…