ಆ ಪಾತ್ರದ ನಟನೆ ಬಳಿಕ 3 ತಿಂಗಳು ಕಣ್ಣು ಕಾಣಲಿಲ್ಲ; ವೈದ್ಯರು ಎಚ್ಚರಿಸಿದ್ರು ಕೂಡ ನಾನು ಈ ತಪ್ಪು ಮಾಡಿದೆ ಎಂದ ಖ್ಯಾತ ನಟ

ಚೆನ್ನೈ: ಕಾಲಿವುಡ್​ನಲ್ಲಿ ಚಿಯಾನ್​ ಎಂದು ಖ್ಯಾತಿ ಪಡೆದಿರುವ ನಟ ವಿಕ್ರಮ್​ ತಮ್ಮ ಸಿನಿಮಾಗಳಲ್ಲಿ ಒಂದಲ್ಲಾ ಒಂದು ರೀತಿಯ ಎಕ್ಸ್​ಪೆರಿಮೆಂಟ್​ ಮಾಡೋದು ಗೊತ್ತೆ ಇದೆ. ಅವರ ಚಿತ್ರಕ್ಕೆ ನೀಡುವ ಡೆಡಿಕೇಷನ್​ ಬಗ್ಗೆ ಹೇಳುವ ಅಗತ್ಯವೆ ಇಲ್ಲ, ಅವರ ಹಿಂದಿನ ಸಿನಿಮಾಗಳನ್ನು ನೋಡಿದ್ರೆ ತಿಳಿಯುತ್ತೆ. ಸಿನಿಮಾಗಳಿಗೆ ನಡೆಸುತ್ತಿದ್ದ ತಯಾರಿಯಿಂದ ತಾವು ಅನುಭವಿಸಿದ ಕಷ್ಟಗಳನ್ನು ಸ್ವತಃ ವಿಕ್ರಮ್​​​ ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: 6 ಪತ್ನಿಯರು, 10000 ಮಕ್ಕಳ ತಂದೆ ಹೆನ್ರಿ; ವಿಶ್ವದ ಅತ್ಯಂತ ಹಳೆಯ ಜೀವಂತ ಮೊಸಳೆ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕಾಶಿ ಸಿನಿಮಾದಲ್ಲಿನ ಅವರು ಕುರುಡನ ಪಾತ್ರ ಮಾಡಿರುವುದು ತಿಳಿದಿದೆ. ಆದರೆ ಆ ಪಾತ್ರಕ್ಕಾಗಿ ವಿಕ್ರಮ್​ ದೈಹಿಕವಾಗಿ ಬದಲಾವಣೆಗಳನ್ನು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿನ ಕುರುಡುನ ಪಾತ್ರ ನಟಿಸಿದ ಬಳಿಕ ಮೂರು ತಿಂಗಳ ಕಾಲ ಸರಿಯಾಗಿ ನನಗೆ ಕಣ್ಣು ಕಾಣುತ್ತಿರಲಿಲ್ಲ ಎಂದು ಹೇಳಿದರು. ಕುರುಡರಾಗಿ ಕಾಣಿಸಿಕೊಳ್ಳಲು ಕಣ್ಣನ್ನು ತಲೆಯ ಭಾಗ ನೋಡುವಂತೆ ನಟಿಸಬೇಕಿತ್ತು. ಅದರು ನನ್ನ ದೃಷ್ಟಿಯ ಮೇಲೆ ಪ್ರಭಾವ ಬೀರಿತು. ಕಣ್ಣಿಗೆ ಅಪಾರಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು ಎಂದು ನೆನೆಪಿಸಿಕೊಂಡರು.

ಆ ಪಾತ್ರದ ನಟನೆ ಬಳಿಕ 3 ತಿಂಗಳು ಕಣ್ಣು ಕಾಣಲಿಲ್ಲ; ವೈದ್ಯರು ಎಚ್ಚರಿಸಿದ್ರು ಕೂಡ ನಾನು ಈ ತಪ್ಪು ಮಾಡಿದೆ ಎಂದ ಖ್ಯಾತ ನಟ

ಇದೇ ಸಮಯದಲ್ಲಿ ಐ ಚಿತ್ರಕ್ಕಾಗಿ 86 ಕೆಜಿಯಿಂದ 52 ಕೆಜಿಗೆ ತೂಕ ಇಳಿಸಿಕೊಂಡಿದ್ದೆ. ಅಷ್ಟು ದೈಹಿಕ ಬದಲಾವಣೆಯಿಂದಾಗಿ ಗಂಭೀರ ಸಮಸ್ಯೆ ಎದುರಾಯಿತು. ಆದರೆ ಆ ಸಮಸ್ಯೆಗಳಿಂದ ಹೊರಬಂದೆ. ಆ ಸಮಯದಲ್ಲೂ ವೈದ್ಯರು ನನಗೆ ಮೊದಲೆ ಸೂಚಿಸಿದ್ದರು. ಸಾಮಾನ್ಯವಾಗಿ 50 ಪೌಂಡ್​ಗಿಂತ ಹೆಚ್ಚು ತೂಕ ಇಳಿಕೆ ಮಾಡಿಕೊಂಡರೆ ದೇಹದ ಅಂಗಾಂಗಗಳು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಹಾಗೂ ಅಂಗಗಳು ವಿಫಲವಾದರೆ ನಿಮಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ನಮಗೆ ಅರ್ಥವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ರು ಎಂದು ಹೇಳಿದರು.

ಇತ್ತೀಚೆಗೆ ತೆರೆಕಂಡ ತಂಗಳನ್​ ಸಿನಿಮಾದಲ್ಲಿನ ಡಿಫರೆಂಟ್​ ಲುಕ್​​ನಿಂದ ನಟ ವಿಕ್ರಮ್​ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು ಮತ್ತು ಮಾಳವಿಕಾ ಮೋಹನನ್ ನಾಯಕಿಯರಾಗಿ ನಟಿಸಿದ್ದಾರೆ. (ಏಜೆನ್ಸೀಸ್​)

Metoo ಇದು ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲೆಡೆ ಇರುವ ಸಮಸ್ಯೆ ಎಂದ ಖ್ಯಾತ ನಿರ್ಮಾಪಕಿ

Share This Article

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ…

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…