ಹೈದರಾಬಾದ್: ಬಿಡುಗಡೆಯಾದ ಒಂದು ವಾರದೊಳಗೆ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಪುಷ್ಪ-2 (Pushpa 2) ಸಕ್ಸಸ್ ಸಂಭ್ರಮದಲ್ಲಿರುವ ನಟ ಅಲ್ಲು ಅರ್ಜುನ್‌ಗೆ (Allu Arjun) ದೊಡ್ಡ ಶಾಕ್ ಒಂದು ಎದುರಾಗಿದ್ದು, ಚಿತ್ರದ ನಾಯಕನಟ ಅಲ್ಲು ಅರ್ಜುನ್ರನ್ನು ಹೈದರಾಬಾದ್ನ ಚೀಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಿತ್ರ ಬಿಡುಗಡೆಯಾದ ದಿನ ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ನಟ ಅಲ್ಲು ಅರ್ಜುನ್ (Allu Arjun) ಭೇಟಿ ನೀಡಿದ್ದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಪೊಲೀಸರು ನಟ ಅಲ್ಲು ಅರ್ಜುನ್ರನ್ನು ಬಿಎನ್ಎಸ್ ಕಾಯ್ದೆ 105, 118(1)r/w3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಇನ್ನೂ ನಟ ಅಲ್ಲು ಅರ್ಜುನ್ರನ್ನು ಬಂಧಿಸಿರುವ ಕುರಿತು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಪ್ರತಿಕ್ರಿಯಿಸಿದ್ದು, ಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿದೆ. ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಅದೇ ಕಾರಣಕ್ಕೆ ಮಹಿಳೆಯ ಸಾವಾಗಿದೆ. ಇದೀಗ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಅಲ್ಲು ಅರ್ಜುನ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಮೂಲಕ ನಟ ಅಲ್ಲು ಅರ್ಜುನ್ರನ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ಹೇಳಲಾಗಿದ್ದು, ಮೊದಲ ದಿನವೇ ಜಾಮೀನು ದೊರೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದ. ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.
ರಾಮಾಯಣಕ್ಕಾಗಿ ಸಸ್ಯಾಹಾರಿಯಾದ್ರಾ Sai Pallavi? ನಟಿ ನೀಡಿದ ಸ್ಪಷ್ಟನೆ ಹೀಗಿದೆ
Loan ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ. ಮೌಲ್ಯದ ಚಿಕನ್ ತಿಂದು ಕೈ ಕೊಟ್ಟ ಬ್ಯಾಂಕ್ ಮ್ಯಾನೇಜರ್