ರಾಮಾಯಣಕ್ಕಾಗಿ ಸಸ್ಯಾಹಾರಿಯಾದ್ರಾ Sai Pallavi? ನಟಿ ನೀಡಿದ ಸ್ಪಷ್ಟನೆ ಹೀಗಿದೆ

Sai Pallavi

ಚೆನ್ನೈ: ದಂಗಲ್’ ಚಿತ್ರದ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಬಿಗ್ ಬಜೆಟ್ ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಚಿತ್ರೋದ್ಯಮದ ಸ್ಟಾರ್​ ನಟರು ಈ ಪ್ರಾಜೆಕ್ಟ್​ನ ಭಾಗವಾಗಿದ್ದು, ಸಿನಿರಸಿಕರ ಹುಬ್ಬೇರುವಂತೆ ಮಾಡಿದೆ. ಬಾಲಿವುಡ್​ ನಟ ರಣಬೀರ್​ ಕಪೂರ್ (Ranbeer Kapoor)​, ಟಾಲಿವುಡ್​ನ ಸಾಯಿ ಪಲ್ಲವಿ (Sai Pallavi), ರಾಮ ಮತ್ತು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಸಾಯಿ ಮಾಡಿರುವ ಟ್ವೀಟ್​ ಸಖತ್​ ವೈರಲ್​ ಆಗುತ್ತಿದೆ.

ರಾಮಾಯಣ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರದಲ್ಲಿ ನಟಿಸುತ್ತಿದ್ದು, ಈ ಕಾರಣಕ್ಕಾಗಿ ನಟಿ ಸಾಯಿ ಪಲ್ಲವಿ ಮಾಂಸಹಾರವನ್ನು ತ್ಯಜಿಸಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಸಾಯಿ ಪಲ್ಲವಿ ಶುದ್ಧ ಸಸ್ಯಾಹಾರಿಯಾಗಿದ್ದು, ಸದಾ ಮಾಂಸಹಾರ ಸೇವನೆ ಮಾಡುತ್ತಾರೆ ಎಂಬರ್ಥದಲ್ಲಿ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ಇದೀಗ ಈ ವಿಚಾರ ನಟಿಯ ಗಮನಕ್ಕೆ ಬಂದಿದ್ದು, ಟ್ವೀಟ್​ ಮಾಡಿ ವಾಹಿನಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಆಧಾರರಹಿತ ವದಂತಿಗಳು, ಸುಳ್ಳುಗಳನ್ನು ನೋಡಿದಾಗ ಬಹುತೇಕ ಸಂದರ್ಭಗಳಲ್ಲಿ ನಾನು ಮೌನವಾಗಿರಲು ಬಯಸುತ್ತೇನೆ. ಆದರೆ ಇದು ನಿರಂತರವಾಗಿ ನಡೆಯುತ್ತಿರುವುದರಿಂದ ನಾನು ಪ್ರತಿಕ್ರಿಯಿಸಬೇಕಿದೆ. ಇದು ನಿಲ್ಲುವಂತೆಯೂ ತೋರುತ್ತಿಲ್ಲ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಘೋಷಣೆ ಸಂದರ್ಭದಲ್ಲಿ ಇದು ಹೆಚ್ಚಿರುತ್ತದೆ. ಮುಂದಿನ ಬಾರಿ ಯಾವುದಾದರೂ ಪ್ರತಿಷ್ಠಿತ ಪೇಜ್ ಅಥವಾ ಮಾಧ್ಯಮಗಳು ಈ ರೀತಿಯ ಸುದ್ದಿ ಮಾಡಿದರೆ ನಾವು ಲೀಗಲ್ ಆಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವೀಟ್​ ಮಾಡಿ ನಟಿ ಸಾಯಿ ಪಲ್ಲವಿ (Sai Pallavi) ಎಚ್ಚರಿಕೆ ನೀಡಿದ್ದಾರೆ.

ಬಾಲಿವುಡ್​ ನಟ ರಣಬೀರ್​ ಕಪೂರ್​, ಟಾಲಿವುಡ್​ನ ಸಾಯಿ ಪಲ್ಲವಿ, ರಾಮ ಮತ್ತು ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕನ್ನಡ ಚಿತ್ರರಂಗದ ‘ಕೆಜಿಎಫ್​’ ಖ್ಯಾತಿಯ ರಾಕಿಂಗ್ ಸ್ಟಾರ್​ ಯಶ್​ ರಾವಣನ ಪಾತ್ರದಲ್ಲಿ ಮಿಂಚಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಸೆಟ್​ನಲ್ಲಿ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ಫಸ್ಟ್​ ಲುಕ್​ ಫೋಟೋಗಳು ಆನ್​ಲೈನ್​ನಲ್ಲಿ  ವೈರಲ್​ ಆಗಿದೆ.

Loan ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ. ಮೌಲ್ಯದ ಚಿಕನ್​ ತಿಂದು ಕೈ ಕೊಟ್ಟ ಬ್ಯಾಂಕ್​ ಮ್ಯಾನೇಜರ್​

Vaibhav Suryavanshi ವಿರುದ್ಧ ಕೇಳಿ ಬಂತು ಮತ್ತೊಂದು ವಂಚನೆ ಆರೋಪ; ಸಂಶಯ ವ್ಯಕ್ತಪಡಿಸಿ ಪಾಕ್​ ಮಾಜಿ ಕ್ರಿಕೆಟಿಗ

 

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…