ಪತ್ನಿಯ ಖಾಸಗಿ ಕ್ಷಣ ವಿಡಿಯೋ ರೆಕಾರ್ಡ್ ಮಾಡಿ, ಶೇರ್ ಮಾಡಿದ ಪತಿ..

CCTV in bedroom
ಸಾಂದರ್ಭಿಕ ಚಿತ್ರ
Published on

ಖಾಂಡ್ವಾ: ಪತಿಯೊಬ್ಬ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ಪತ್ನಿಯ ಅಶ್ಲೀಲ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಹೇಯ ಕೃತ್ಯ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮಂಧಾತ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ಪುನ್ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. ನೊಂದ ಮಹಿಳೆಯು ತನ್ನ ಪತಿ ಮೊಹಮ್ಮದ್ ಮೆಹ್ತಾಬ್ ಆಕ್ಷೇಪಾರ್ಹ ವಿಡಿಯೋ ಮಾಡಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕೆಲ ಸಮಯದ ಹಿಂದೆ ಪತಿ ವಿರುದ್ಧ ಮಹಿಳೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಆದರೆ ಎರಡು ಬದಿಯ ಸದಸ್ಯರ ಒಪ್ಪಂದದ ಮೇರೆಗೆ ಇದು ರದ್ದಾಗಿತ್ತು. ಇದಾದ ಬಳಿಕ ಆಕೆ ತನ್ನ ಪತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದು, ದುರುಳ ಪತಿ ಅದಾಗಲೇ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ಹೊಂದಾಣಿಕೆಯಾಗದ ಕಾರಣ ಪತಿ ಮತ್ತೆ ಜಗಳವಾಡಿದ್ದು, ಅವಳು ತನ್ನ ತಾಯಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಳು.

ಈ ವೇಳೆ ಪತಿಯ ಸಿಸಿಟಿವಿ ಮೂಲಕ ಸೆರೆ ಹಿಡಿದಿದ್ದ ಆಕೆಯ ಖಾಸಗಿ ವಿಡಿಯೋವನ್ನು ತಂದೆ ಮತ್ತು ಸಹೋದರ ಸೇರಿದಂತೆ ಕುಟುಂಬದ ಇತರ ಸದಸ್ಯರ ಮೊಬೈಲ್‌ಗೆ ವೀಡಿಯೊ ಕಳುಹಿಸಿದ್ದಾನೆ. ಇದರಿಂದ ಮನನೊಂದ ಆತನ ಪತ್ನಿ ಮಾಂಧಾಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಇದಾದ ನಂತರ ಪತಿ ಪತ್ನಿಯ ಪೋಷಕರಿಗೆ ಕೆಲವು ಆಕ್ಷೇಪಾರ್ಹ ವಿಡಿಯೋಗಳನ್ನು ಕಳುಹಿಸಿದ್ದು, ಐಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಖಾಂಡ್ವಾ ಎಸ್​ಪಿ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net