More

    ರಕ್ಷಾಬಂಧನಕ್ಕೂ ಮುನ್ನವೇ ಸಹೋದರನಿಗೆ ಎಂದಿಗೂ ಮರೆಯದ ಕೊಡುಗೆ ನೀಡಿದ ಅಕ್ಕ..

    ಮುಂಬೈ: ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವು ಪವಿತ್ರ ಮತ್ತು ಮುರಿಯಲಾಗದದು. ಅಂತಹ 21 ವರ್ಷದ ಸಹೋದರಿ ತನ್ನ 17 ವರ್ಷದ ಸಹೋದರನಿಗೆ ತನ್ನ ಯಕೃತ್ತು ದಾನ ಮಾಡುವ ಮೂಲಕ ವಿಶಿಷ್ಟವಾದ ರಕ್ಷಾಬಂಧನ ಉಡುಗೊರೆಯನ್ನು ನೀಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ರೋಗಿಯ ತಂದೆ ಸಂತೋಷ್ ಪಾಟೀಲ್ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಗೆಲಸಗಾರರಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ನಂದಿನಿ (ಹಿರಿಯ ಮಗಳು) ಪ್ರಸ್ತುತ ಕಾಲೇಜಿನಲ್ಲಿ ಓದುತ್ತಿದ್ದಾಳೆ, ಆದರೆ ರಾಹುಲ್ (ಕಿರಿಯ ಮಗ) ಈಗ 10 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ನಡುವೆ ಬಾಲಕ ಹಠಾತ್ತನೆ ದೌರ್ಬಲ್ಯ ಅನುಭವಿಸಿ ರಕ್ತ ವಾಂತಿ ಮಾಡಿಕೊಂಡಾಗ ಇಡೀ ಕುಟುಂಬ ಗಾಬರಿಗೊಂಡಿತ್ತು.

    ಇದನ್ನೂ ಓದಿ: ಪಾರ್ಕ್​ನಲ್ಲಿ ಎಲ್ಲರ ಮುಂದೆಯೇ ಪ್ರಾಣ ಬಿಟ್ಟ ಬಾಲಕಿ..!

    ಕೂಡಲೇ ಆತನನ್ನು ಚಿಕಿತ್ಸೆಗಾಗಿ ಮುಂಬೈನ ಮೆಡಿಕ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಕೊನೆಗೆ ಬಾಲಕನಿಗೆ ಆಟೋಇಮ್ಯೂನ್ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಗಿದ್ದು ಆತನಿಗೆ ಯಕೃತ್ತಿನ ಕಸಿ ಮಾಡುವ ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ.

    ಬಾಲಕನ ತಾಯಿಯ ಯಕೃತ್ತಿನ ಒಂದು ಭಾಗವನ್ನು ಕೊಡಲು ಮುಂದೆ ಬಂದರೂ ಸಹಿತ ವೈದ್ಯಕೀಯ ಕಾರಣಗಳಿಂದ ಅದನ್ನು ತಿರಸ್ಕರಿಸಲಾಯಿತು. ಕೊನೆಗೆ ಆತನ ಅಕ್ಕ ಯಕೃತ್ತು ದಾನಕ್ಕೆ ಮುಂದೆ ಬಂದಿದ್ದು, ಸಂಪೂರ್ಣ ಪರೀಕ್ಷೆಯ ನಂತರ ಹೊಂದಾಣಿಕೆಯಾಗುತ್ತದೆ ಎಂದು ತಿಳಿದು ಬಂದಿದೆ. ಬಾಲಕಿಯು ತನ್ನ ಅನಾರೋಗ್ಯದ ಸಹೋದರನ ಜೀವವನ್ನು ಉಳಿಸಲು ಯಾವುದೇ ಆಲೋಚನೆಯಿಲ್ಲದೆ ತನ್ನ ಯಕೃತ್ತನ್ನು ದಾನ ಮಾಡಿದ್ದಾಳೆ.

    ಇದನ್ನೂ ಓದಿ: ಜೈಲಿನಲ್ಲಿ ಅಲ್ಲ, ದೇಹಕ್ಕೆ ಜಿಪಿಎಸ್ ಸಾಧನ ಅಳವಡಿಸಿ ಆರೋಪಿಯನ್ನು ಮನೆಯಲ್ಲೇ ಬಂಧಿಸಿಡಲು ಮುಂದಾಗಿದೆ ಈ ರಾಜ್ಯ..

    ಕೊನೆಗೆ ಮುಂಬೈನ ಮೆಡಿಕ್ವಾರ್ ಹಾಸ್ಪಿಟಲ್ಸ್‌ನ ಲಿವರ್ ಟ್ರಾನ್ಸ್‌ಪ್ಲಾಂಟ್ ಮತ್ತು ಎಚ್‌ಪಿಬಿ ಸರ್ಜರಿ ನಿರ್ದೇಶಕ ಡಾ.ವಿಕ್ರಂ ರಾವುತ್ ನೇತೃತ್ವದ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ದಾನಿ ಮತ್ತು ರೋಗಿ ಇಬ್ಬರೂ ಈಗ ಸ್ಥಿರ ಸ್ಥಿತಿಯಲ್ಲಿದ್ದಾರೆ. ವೈದ್ಯಾಧಿಕಾರಿಗಳು ಅಂಗಾಂಗಗಳನ್ನು ದಾನ ಮಾಡುವಂತೆ ಆಸ್ಪತ್ರೆಗಳಲ್ಲಿ ಮನವಿ ಮಾಡಿದ್ದಾರೆ. ಆರೋಗ್ಯವಂತ ವ್ಯಕ್ತಿಯು ಯಾವುದೇ ಋಣಾತ್ಮಕ ಪರಿಣಾಮಗಳಿಲ್ಲದೆ ತಮ್ಮ ಯಕೃತ್ತನ್ನು ಸುರಕ್ಷಿತವಾಗಿ ದಾನ ಮಾಡಬಹುದು ಎಂದು ಡಾ ರಾವುತ್ ವಿವರಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts