More

    ಜೈಲಿನಲ್ಲಿ ಅಲ್ಲ, ದೇಹಕ್ಕೆ ಜಿಪಿಎಸ್ ಸಾಧನ ಅಳವಡಿಸಿ ಆರೋಪಿಯನ್ನು ಮನೆಯಲ್ಲೇ ಬಂಧಿಸಿಡಲು ಮುಂದಾಗಿದೆ ಈ ರಾಜ್ಯ..

    ಭುವನೇಶ್ವರ್: ಒಡಿಶಾದ ಜೈಲುಗಳಲ್ಲಿ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ದೊಡ್ಡ ಹೆಜ್ಜೆ ಇಡಲಿದೆ. ಘೋರವಲ್ಲದ ಆರೋಪಗಳನ್ನು ಎದುರಿಸುತ್ತಿರುವ ವಿಚಾರಣಾಧೀನ ಕೈದಿಗಳನ್ನು ಇನ್ನು ಮುಂದೆ ಜೈಲುಗಳಲ್ಲಿ ಬಂಧಿಸಲಾಗುವುದಿಲ್ಲ ಆದರೆ ಮನೆಗಳಲ್ಲಿ ಬಂಧಿಸಿ ಇರಿಸಲು ಯೋಚನೆ ನಡೆಸುತ್ತಿದೆ.

    ಇದಕ್ಕಾಗಿ, ನವೀನ್ ಪಟ್ನಾಯಕ್ ಸರ್ಕಾರವು ಜಿಪಿಎಸ್-ಶಕ್ತಗೊಂಡ ಟ್ರ್ಯಾಕಿಂಗ್ ಸಾಧನಗಳನ್ನು ಬಳಸಲು ಹೊರಟಿದ್ದು, ಕೈದಿಗಳ ಮೇಲೆ ಜಿಪಿಎಸ್ ಅಳವಡಿಸುವ ಮೂಲಕ ಅವರ ಮೇಲೆ ನಿಗಾ ಇಡುವ ಮೊದಲ ರಾಜ್ಯ ಒಡಿಶಾ ಆಗಲಿದೆ. ವಿಚಾರಣಾಧೀನ ಕೈದಿಗಳನ್ನು ಬಂಧಿಸಲು ಅವಕಾಶ ನೀಡುವ ಮೂಲಕ ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: ಪಾರ್ಕ್​ನಲ್ಲಿ ಎಲ್ಲರ ಮುಂದೆಯೇ ಪ್ರಾಣ ಬಿಟ್ಟ ಬಾಲಕಿ..!

    ಈ ಕ್ರಮದಿಂದ ಜೈಲುಗಳಲ್ಲಿ ಜನಸಂದಣಿ ಕಡಿಮೆಯಾಗಿ, ಕೈದಿಗಳ ಮೇಲಿನ ಸರ್ಕಾರದ ವೆಚ್ಚವೂ ಉಳಿತಾಯವಾಗುತ್ತದೆ. ಈ ರೀತಿಯ ಸಾಧನವನ್ನು ಈಗಾಗಲೇ ಯುಎಸ್​​ನಲ್ಲಿ ಬಳಸಲಾಗುತ್ತಿದೆ. ಈ ಟ್ರ್ಯಾಕಿಂಗ್ ಸಾಧನದ ಬೆಲೆ 10,000 ರಿಂದ 15,000 ರೂಪಾಯಿ ಇರಲಿದೆ ಎನ್ನಲಾಗಿದ್ದು, ಈ ಸಾಧನವನ್ನು ಕೈದಿಗಳ ಪಾದಕ್ಕೆ ಜೋಡಿಸಲಾಗುತ್ತದೆ. ಇದು ಜಿಪಿಎಸ್​ನ್ನು ಒಳಗೊಂಡಿದ್ದು, ಇದನ್ನು ತೆಗೆಯಲು ಯತ್ನಿಸಿದರೆ ಅಥವಾ ಏನಾದರೂ ತೊಂದರೆ ನೀಡಿದರೂ ಸಹಿತ ಇದು ಎಚ್ಚರಿಕೆ ಸಂದೇಶವನ್ನು ಪೊಲೀಸರಿಗೆ ರವಾನಿಸುತ್ತದೆ.

    ಅಧಿಕೃತ ಮಿತಿಯಿಂದ ಹೊರಗೆ ಹೋಗುವಾಗ ಎಚ್ಚರಿಕೆ:
    ಆರೋಪಿಗೆ ಅಳವಡಿಸಬೇಕಾದ ಸಾಧನದಲ್ಲಿ ನಿಗದಿತ ಪ್ರದೇಶ ಅಥವಾ ವ್ಯಾಪ್ತಿಯನ್ನು ಗುರುತಿಸಿ ಪ್ರೋಗ್ರಾಮ್ ಮಾಡಬೇಕು. ಒಂದು ವೇಳೆ ಆತ ಅಧಿಕೃತ ಮಿತಿಗಳನ್ನು ಮೀರಿ ಹೆಜ್ಜೆ ಹಾಕಿದರೆ ಅದು ತಕ್ಷಣವೇ ಪೊಲೀಸರನ್ನು ಎಚ್ಚರಿಸುತ್ತದೆ. ಇದರಿಂದ ಆರೋಪಿಯ ಜಾಮೀನು ರದ್ದುಗೊಂಡು ಜೈಲಿಗೆ ಕಳುಹಿಸಲಾಗುತ್ತದೆ.

    ಸಾಧನದ ವೆಚ್ಚವನ್ನು ಕೈದಿಗಳಿಂದ ವಸೂಲಿ:
    ಜಾಮೀನು ನೀಡುವಾಗ ವಿಚಾರಣಾಧೀನ ಕೈದಿಗಳಿಗೆ ಜೈಲು ಬೇಕೇ ಅಥವಾ ಜಾಮೀನು ಬೇಕೇ ಎಂದು ಕೇಳಬಹುದು ಎಂದು ಹೇಳಲಾಗಿದ್ದು, ಜಾಮೀನು ಪಡೆಯಲು, ಅವರಿಗೆ ಟ್ರ್ಯಾಕಿಂಗ್ ಸಾಧನಗಳನ್ನು ಕಡ್ಡಾಯಗೊಳಿಸಬಹುದಾಗಿದೆ. ಈ ಉಪಕರಣವನ್ನು ಸರ್ಕಾರ ಖರೀದಿಸುವ ಅಗತ್ಯವಿಲ್ಲ. ಬದಲಾಗಿ, ವಿಚಾರಣಾಧೀನ ಕೈದಿಗಳಿಗೆ ಜಾಮೀನಿನ ಬದಲಾಗಿ ಉಪಕರಣಗಳನ್ನು ಖರೀದಿಸಲು ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.(ಏಜೆನ್ಸೀಸ್)

    ಮಗಳೇ ನೀನಿಲ್ಲದೇ ನಾನಿಲ್ಲ ಎಂದು ಪ್ರಾಣಬಿಟ್ಟ ತಂದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts