ಪಾರ್ಕ್​ನಲ್ಲಿ ಎಲ್ಲರ ಮುಂದೆಯೇ ಪ್ರಾಣ ಬಿಟ್ಟ ಬಾಲಕಿ..!

maharashtra girl
Published on

ಮುಂಬೈ: ಉದ್ಯಾನವನದ ಬೆಂಚ್ ಮೈಮೇಲೆ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಬ್ರೀಜಾ(4) ಮೃತಪಟ್ಟ ಬಾಲಕಿಯಾಗಿದ್ದು, ಸ್ಥಳೀಯ ಗಿರಿರಾಜ್ ಸೊಸೈಟಿ ಪ್ಲಾಟ್ ನಂ.36ರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್ ವಿಶ್ವಕರ್ಮ ಏಂಬುವರ ಮಗಳಾಗಿದ್ದಾಳೆ. ಆಕೆ ತನ್ನ ತಂದೆಯೊಂದಿಗೆ ಸಮೀಪದ ಪಾರ್ಕ್‌ಗೆ ಆಟವಾಡಲು ಹೋಗಿದ್ದಳು. ಈ ವೇಳೆ ಬಾಲಕಿಯು ಆಯಾಸಗೊಂಡಿದ್ದು, ಅಲ್ಲಿಯೇ ಇದ್ದ ಸಿಮೆಂಟ್​ ಬೆಂಚ್​ ಮೇಲೆ ಕುಳಿತಿದ್ದಾಳೆ.

ಸ್ವಲ್ಪ ಸಮಯದ ನಂತರ ಸಿಮೆಂಟ್​ ಬೆಂಚ್​ ಕುಸಿದು ಆಕೆಯ ಮೇಲೆಯೇ ಬಿದ್ದಿದೆ. ಕೂಡಲೇ ತಂದೆ ಇದನ್ನು ಗಮನಿಸಿದ್ದು, ಮಗಳತ್ತ ಓಡಿ ಬೆಂಚನ್ನು ಎತ್ತಿದ್ದಾರೆ. ಆದರೆ, ಬೆಂಚಿನ ಭಾರದಿಂದಾಗಿ ಬ್ರಿಜಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಾನಗರ ಪಾಲಿಕೆ ಈ ಉದ್ಯಾನವನವನ್ನು ನಿರ್ಲಕ್ಷಿಸಿದ್ದು, ಉದ್ಯಾನವನವು ಪಾಳು ಬಿದ್ದಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ನಾಲ್ಕು ವರ್ಷದ ಮಗುವಿನ ಸಾವು ಕುಟುಂಬದಲ್ಲಿ ತೀವ್ರ ದುಃಖ ತಂದಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net