More

    ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜತೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಈ ಮೂಲಿಕೆ..

    ಬೆಂಗಳೂರು: ಅಶ್ವಗಂಧವು ಅದ್ಭುತವಾದ ಔಷಧವಾಗಿದ್ದು, ಇದನ್ನು ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಈ ಅದ್ಭುತ ಮೂಲಿಕೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬಹುದು ಎಂದು ಆಧುನಿಕ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಬಿಕ್ಷೆ ನೆಪದಲ್ಲಿ ಬಂದು ಮನೆ ಮುಂದೆಯೇ ಸೊಸೆಯನ್ನು ದೋಚಿದ ಯುವಕರು: ವಶೀಕರಣ ವಿದ್ಯೆಯಿಂದ ನಡೆದ ಘಟನೆ..?

    ಅಶ್ವಗಂಧ ಒತ್ತಡ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುವುದರೆ ಜತೆಗೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಿಕೆನ್ನು ತಪ್ಪದೇ ಸೇವಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅಲ್ಲದೇ, ಅಶ್ವಗಂಧವು ಸ್ಮರಣೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಿ ಹಾನಿಗೊಳಗಾದ ಮೆದುಳಿನ ಕೋಶಗಳನ್ನು ಸಹ ಸರಿಪಡಿಸುತ್ತದೆ ಎಂದು ಹೇಳಲಾಗಿದೆ.

    ಅಶ್ವಗಂಧವು ಹಾರ್ಮೋನುಗಳನ್ನು ಉತ್ಪಾದಿಸುವ ಮೂತ್ರಜನಕಾಂಗದ ಗ್ರಂಥಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಸಂಪೂರ್ಣ ಹಾರ್ಮೋನ್ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಫಲವತ್ತತೆ, ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರ ನಿಯಮಿತ ಸೇವನೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಸಕ್ಕರೆ ಕಾಯಿಲೆಯ ನಂತರವೂ ಪದೇ ಪದೇ ಸಿಹಿ ತಿನ್ನುತ್ತಿದ್ದ ಪತ್ನಿ: ಬೇಸತ್ತ ಪತಿ ಮಾಡಿದ್ದಿಷ್ಟು..

    ಅಶ್ವಗಂಧವು ರಕ್ತ ಪರಿಚಲನೆಯನ್ನು ಹೆಚ್ಚಿಸುವುದರ ಜತೆಗೆ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದ್ದು, ದೇಹದಲ್ಲಿನ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ಸಂಧಿವಾತ, ಅಸ್ತಮಾ ಮತ್ತು ದೀರ್ಘಕಾಲದ ನೋವಿಗೆ ಉತ್ತಮ ಪರಿಹಾರವಾಗಿಯೂ ಕಾರ್ಯನಿರ್ವಹಿಸುತ್ತದೆ.

    ಮರೆವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಶ್ವಗಂಧ ಒಳ್ಳೆಯದಾಗಿದ್ದು, ಇದು ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಶ್ವಗಂಧವು ಕಾರ್ಟಿಸೋಲ್ ಹಾರ್ಮೋನಿನ ಪರಿಣಾಮವನ್ನು ಚರ್ಮದ ಮೇಲೆ ಬೀಳದಂತೆ ರಕ್ಷಿಸುವುದರ ಜತೆಗೆ ವಯಸ್ಸಾದ ಚರ್ಮವನ್ನು ತಡೆಯುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ತ್ವಚೆಯನ್ನು ಮೃದುವಾಗಿ ಮತ್ತು ಒತ್ತಡ ಮುಕ್ತವಾಗಿಸುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts