ಪತಿ ಮೂರು ದಿನಗಳಿಂದ ನಾಪತ್ತೆ; ಮನೆಯಲ್ಲಿ ಪತ್ನಿಯ ಶವ ಪತ್ತೆ!

House
Published on

ಆನೇಕಲ್: ದೀಪಾವಳಿಯ ಸಂಭ್ರಮ ಇರಬೇಕಾದ ಈ ಮನೆಯಲ್ಲೀಗ ಶೋಕ ಆವರಿಸಿದೆ. ಮೂರು ದಿನಗಳಿಂದ ಪತಿ ನಾಪತ್ತೆ ಆಗಿರುವುದು ಒಂದೆಡೆಯಾದರೆ, ಮನೆಯಲ್ಲಿ ಪತ್ನಿಯ ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದಲ್ಲಿ ಈ ಕೊಲೆ ಪ್ರಕರಣ ನಡೆದಿದೆ.

ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ಮನೆಯಲ್ಲಿ ಈ ಕೊಲೆ ನಡೆದಿದೆ. ಬಿಜಾಪುರ ಮೂಲದ ಮಹಿಳೆ ಪಾರ್ವತಿ ಬಿರಾದರ್ ಕೊಲೆಯಾದಾಕೆ. ಮನೆಯ ಮೂರನೇ ಮಹಡಿಯಲ್ಲಿ ಬೆಡ್​ಶೀಟ್​​ನಲ್ಲಿ ಕಟ್ಟಿ ಈಕೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ ಪತಿ ಮೂರು ದಿನಗಳಿಂದ ನಾಪತ್ತೆ ಆಗಿರುವುದು ಕೂಡ ಗೊತ್ತಾಗಿದೆ. ಮನೆ ಮಾಲೀಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಗಂಡ-ಹೆಂಡತಿ ಇಬ್ಬರು ಮನೆಯಲ್ಲಿ ವಾಸವಿದ್ದರು. ಇವರು ಮೂರು ವರ್ಷಗಳ ಹಿಂದೆ ಈ ಮನೆಗೆ ಬಂದಿದ್ದರು ಎಂದು ಮಾಲೀಕರು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net