ರಸ್ತೆ ತುಂಬಾ ರಾಶಿ ರಾಶಿ ಮೀನು; ಹೊತ್ತು ಸಾಗುತ್ತಿದ್ದ ಲಾರಿಯೇ ಪಲ್ಟಿ!

Fish
Published on

ಉಡುಪಿ: ರಸ್ತೆ ಮೇಲೆ ವಾಹನಗಳು ಸಾಗುವಾಗ ದನ-ಕರುಗಳು, ನಾಯಿಗಳು ಕಂಡುಬರುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಇಂದು ಮೀನಿನ ರಾಶಿಯೇ ಕಂಡುಬಂದಿದೆ. ಮಾರ್ಗ ಮಧ್ಯೆ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ರಕರಣವೊಂದು ವರದಿಯಾಗಿದೆ.

ಉಡುಪಿ ಜಿಲ್ಲೆಯ ಕಾಪುವಿನ ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ಹೀಗೊಂದು ದೃಶ್ಯ ಕಂಡುಬಂದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಮಗುಚಿಬಿದ್ದ ಪರಿಣಾಮವಾಗಿ ಅದರಲ್ಲಿದ್ದ ಟ್ರೇಗಳಲ್ಲಿ ಬಿದ್ದು, ಮೀನುಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿವೆ.

ಉಚ್ಚಿಲ ಮೂಳೂರು ಸಲಪಿ ಮಸೀದಿ ಬಳಿ ರಸ್ತೆ ಕಾಮಗಾರಿಯು ಸಲುವಾಗಿ ಡೈವರ್ಷನ್​ ಇದ್ದುದನ್ನು ಗಮನಿಸದೆ ಹೋದ ಚಾಲಕ ಬಳಿಕ ಲಾರಿಯನ್ನು ನಿಯಂತ್ರಿಸಿಕೊಳ್ಳಲು ಆಗದ್ದರಿಂದ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದರೆ, ನಿರ್ವಾಹಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net