ಫ್ಲೈ-ಓವರ್​ನಲ್ಲಿ ಅಪಘಾತ, ಮೇಲಿನಿಂದ ಕೆಳಕ್ಕೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು..

Bike Accident
Published on

ಆನೇಕಲ್: ರಾಜಧಾನಿ ಬೆಂಗಳೂರಿನಲ್ಲಿ ಫ್ಲೈ-ಓವರ್​ನಿಂದ ವಾಹನಗಳು ಕೆಳಕ್ಕೆ ಬಿದ್ದಂಥ ಭೀಕರ ಅಪಘಾತಗಳು ನಡೆದಿದ್ದು, ಇಂದು ಅಂಥದ್ದೇ ಒಂದು ಅಪಘಾತ ಸಂಭವಿಸಿದ್ದು, ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮವಾಗಿ, ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಎಲೆಕ್ಟ್ರಾನಿಕ್ ಸಿಟಿಯ ಎಲೆವೇಟೆಡ್ ಫ್ಲೈ-ಓವರ್ ಮೇಲೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನ ಸಾಫ್ಟ್​ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆಂಧ್ರಪ್ರದೇಶ ಮೂಲದ ಕೌರಿ ನಾಗಾರ್ಜುನ ಎಂಬಾತ ಸಾವಿಗೀಡಾದ ಬೈಕ್ ಸವಾರ.

ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಪಲ್ಸರ್​ ಬೈಕ್​ನಲ್ಲಿ ಬರುತ್ತಿದ್ದ ನಾಗಾರ್ಜುನ, ಎಲೆಕ್ಟ್ರಾನಿಕ್ ಸಿಟಿ ಬಳಿ ಬಲಭಾಗಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ವೇಗದಲ್ಲಿದ್ದ ಬೈಕ್​ ಹತೋಟಿಗೆ ಸಿಗದೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಗಾರ್ಜುನ ಫ್ಲೈ-ಓವರ್​ನಿಂದ ಕೆಳಕ್ಕೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net