More

    ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ಮಂಗಳವಾರ ಕಾಡುವ ಸಮಸ್ಯೆ: ಗ್ರಾಮಸ್ಥರ ಪರವಾಗಿ ಸಚಿವರಿಗೆ ಮನವಿ

    ಉಡುಪಿ: ‘ಮಂಗಳವಾರ ರಜಾ ದಿನ’ ಎಂಬ ಸಿನಿಮಾವೊಂದು ಬಂದಿದೆ. ಆದರೆ ಇಲ್ಲಿ ಕೆಲವು ಗ್ರಾಮಸ್ಥರಿಗೆ ‘ಮಂಗಳವಾರ ಸಜಾ ದಿನ’ ಎಂದರೂ ಅತಿಶಯೋಕ್ತಿ ಏನಲ್ಲ. ಹಾಗಂತ ಇದು ಕೆಲವು ದಿನಗಳ ಸಮಸ್ಯೆಯಲ್ಲ. ಈ ಗ್ರಾಮಸ್ಥರು 20ಕ್ಕೂ ಹೆಚ್ಚು ವರ್ಷಗಳಿಂದ ಇಂಥದ್ದೊಂದು ತೊಂದರೆ ಅನುಭವಿಸುತ್ತಿದ್ದಾರೆ.

    ವರ್ಷಗಟ್ಟಲೆಯಿಂದ ಅನುಭವಿಸುತ್ತಿರುವ ಸಂಕಷ್ಟವನ್ನು ಪರಿಹರಿಸುವಂತೆ ಊರೊಂದರ ಪರವಾಗಿ ಸಚಿವರಿಗೇ ಮನವಿ ಸಲ್ಲಿಸಲಾಗಿದೆ. ಅಂದಹಾಗೆ ಹೀಗೊಂದು ಸಮಸ್ಯೆ ಅನುಭವಿಸುತ್ತಿರುವುದು ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಗ್ರಾಮಸ್ಥರು. ಇಲ್ಲಿ ಮಂಗಳವಾರದಂದು ವಿದ್ಯುತ್ ಕಡಿತಗೊಳಿಸುವ ಪದ್ಧತಿ ಇದ್ದು, ಅದೇ ಈಗ ಹಲವಾರು ತೊಂದರೆ ಅನುಭವಿಸುವಂತೆ ಮಾಡುತ್ತಿದೆ. ಹೀಗಾಗಿ ಇಲ್ಲಿನ ಜನರ ಪರವಾಗಿ ಇಂಧನ ಸಚಿವ ವಿ.ಸುನೀಲ್​ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.

    ಕುಂದಾಪುರ, ಬೈಂದೂರು ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಇಂದಿಗೂ ‘ಮಂಗಳವಾರವೆಂದರೆ ಕರಂಟ್ ಇರಲ್ಲ’ ಎಂಬ ಪದ್ಧತಿ ರೂಢಿಯಲ್ಲಿದೆ. ಸುಮಾರು 20 – 30 ವರ್ಷಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಇಂಥ ಆಧುನಿಕ ಕಾಲದಲ್ಲೂ ಮಂಗಳವಾರ ಇಡೀ ಹಗಲು ವಿದ್ಯುತ್ ಕಡಿತದ ಪದ್ಧತಿ ಮುಂದುವರಿದಿದೆ. ದಯಮಾಡಿ ಈ ಪದ್ಧತಿಯನ್ನು ನಿಲ್ಲಿಸಿ, ಮಂಗಳವಾರವೂ ಹಗಲು ಪೂರ್ತಿ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಬೈಂದೂರು-ಕುಂದಾಪುರ ತಾಲೂಕಿನ ನಾಗರಿಕರ ಪರವಾಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

    ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ಮಂಗಳವಾರ ಕಾಡುವ ಸಮಸ್ಯೆ: ಗ್ರಾಮಸ್ಥರ ಪರವಾಗಿ ಸಚಿವರಿಗೆ ಮನವಿ

    ನಟ ಚೇತನ್​ ವಿವಾದಾತ್ಮಕ ಹೇಳಿಕೆಗೆ ಪೇಜಾವರಶ್ರೀ ಪ್ರತಿಕ್ರಿಯೆ; ಬ್ರಾಹ್ಮಣತ್ವವನ್ನು ವ್ಯಾಖ್ಯಾನಿಸಿದ ಸ್ವಾಮೀಜಿ ಹೇಳಿದ್ದಿಷ್ಟು..

    ‘ಕಾಂತಾರ’ ಭರ್ಜರಿ ಯಶಸ್ಸು: ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಾರಾ ರಿಷಬ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts