ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​: 'ಕಾಂತಾರ'ಕ್ಕೆ ಸೂಪರ್​ಸ್ಟಾರ್ ರಜನಿಕಾಂತ್ ಮೆಚ್ಚುಗೆ..

Rajinikanth
Published on

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿ ಬಂದಿರುವ 'ಕಾಂತಾರ'ಕ್ಕೆ ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸೂಪರ್​ಸ್ಟಾರ್​ ರಜನಿಕಾಂತ್ ಕೂಡ ಈ ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು, ಹೊಂಬಾಳೆ ಫಿಲ್ಮ್ಸ್​ ಬಿಟ್ಟು ಬೇರೆ ಯಾರೂ ಇದನ್ನು ಇಷ್ಟು ಸಮರ್ಥವಾಗಿ ಸಿನಿಮಾದಲ್ಲಿ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು 'ಕಾಂತಾರ' ನಿರ್ಮಾಣದ ಬಗ್ಗೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹಗಾರ, ನಿರ್ದೇಶಕ, ನಾಯಕ ಆಗಿ ನೀವು ಸಿನಿಮಾದಲ್ಲಿ ಮೈನವಿರೇಳಿಸುವ ಅನುಭವ ಮೂಡಿಸಿದ್ದೀರಿ. ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​, ಈ ಚಿತ್ರತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ರಜನಿಕಾಂತ್ 'ಕಾಂತಾರ'ವನ್ನು ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net