ತಾಯಿ ಮನೆಗೆ ಹೋದ ಪತ್ನಿ: ಕಠಿಣ ನಿರ್ಧಾರ ತೆಗೆದುಕೊಂಡ ಸಾಫ್ಟ್​​​ವೇರ್ ಇಂಜಿನಿಯರ್..!

wife
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್‌: ದಂಪತಿಗಳ ನಡುವೆ ಜಗಳ ಸಾಮಾನ್ಯ. ಗಂಡ-ಹೆಂಡತಿ ಜಗಳವಾಡಿಕೊಂಡು ಮತ್ತೆ ಒಂದಾಗುವುದು ಸಮಾಜದ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯ ಸಂಗತಿ. ಯುವತಿಯೊಬ್ಬಳು ಪತಿಯನ್ನು ತೊರೆದಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಅತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಚಂದ್ರ (30) ಎಂಬಾತನೇ ಮೃತ ದುದೈವಿಯಾಗಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾನೆ. ರಾಮಚಂದ್ರ 9 ತಿಂಗಳ ಹಿಂದೆ ವಿವಾಹವಾಗಿದ್ದನು. ಆದರೆ ಮನೆಯಲ್ಲಿ ನಡೆದ ಸಣ್ಣ ಜಗಳದಿಂದ ಪತ್ನಿ ಆತನನ್ನು ಬಿಟ್ಟು ಮನೆಗೆ ಹೋಗಿದ್ದಾಳೆ.

ಕಳೆದ ಮೂರು ತಿಂಗಳಿಂದ ಅತ್ತಾಪುರ ವ್ಯಾಪ್ತಿಯ ಮಾರುತಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಂಟಿ ಜೀವನ ನಡೆಸುತ್ತಿದ್ದ ಆತ, ಪತ್ನಿ ತೊರೆದು ಹೋಗಿದ್ದಕ್ಕೆ ಮನನೊಂದು ಶುಕ್ರವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net