ಕಾಲೇಜು ಕಟ್ಟಡದ ಒಳಗೆ ಸಾವಿಗೆ ಶರಣಾದ ಹುನಗುಂದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ

BGK Principal (1)
Published on

ಬಾಗಲಕೋಟೆ: ಕಾಲೇಜು ಕಟ್ಟಡದ ಒಳಗಡೆ ಪ್ರಾಂಶುಪಾಲರೊಬ್ಬರು ಸಾವಿಗೆ ಶರಣಾಗಿರುವ ಘಟನೆ ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ನಾಗರಾಜ್ ಮುದಗಲ್ಲ (55) ಮೃತ ಪ್ರಾಂಶುಪಾಲ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಇಂದು ನಸುಕಿನ ವೇಳೆ ನೇಣು ಹಾಕಿಕೊಂಡಿದ್ದಾರೆ. ಕಾಲೇಜ್ ಕ್ಯಾಂಟಿನ್​ ಸ್ಟೇರ್ ಕೇಸ್ ಗ್ರಿಲ್​​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.

ಇಂದು ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಪೂರ್ವ ಸಿದ್ದತೆಗಾಗಿ ನಿನ್ನೆ ರಾತ್ರಿ ಕಾಲೇಜಿನಲ್ಲೆ ಪ್ರಾಂಶುಪಾಲರು ವಾಸ್ತವ್ಯ ಹೂಡಿದ್ದರು. ನಸುಕಿನ ಜಾವ ಎದ್ದು ನಿತ್ಯಕರ್ ಮುಗಿಸಿ ರೆಡಿಯಾಗಲೆಂದು ಕೊಠಡಿಯಿಂದ ಹೊರಗೆ ಬಂದ ಪ್ರಾಂಶುಪಾಲರು ಬಳಿಕ‌ ಶವವಾಗಿ ಪತ್ತೆಯಾಗಿದ್ದಾರೆ.

ಆರು ತಿಂಗಳ ಹಿಂದೆ ಇಳಕಲ್ ಕಾಲೇಜ್​​ನಿಂದ ಹುನಗುಂದ ಕಾಲೇಜ್​ಗೆ ವರ್ಗಾವಣೆ ಆಗಿ ಬಂದಿದ್ದರು. ಇಳಕಲ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 14 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಇವರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ.

ಘಟನಾ ಸ್ಥಳಕ್ಕೆ ಹುನಗುಂದ ಡಿವೈಎಸ್ಪಿ, ಸಿಪಿಐ, ಪಿಎಸ್​ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುನುಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net