ಹನಿಟ್ರ್ಯಾಪ್​ ನಿಪುಣೆ ಅಂದರ್​: ಈಕೆಯ ಪಟ್ಟಿಯಲ್ಲಿದ್ದಾರೆ ಪ್ರಖ್ಯಾತ ರಾಜಕಾರಣಿಗಳು, ಪೊಲೀಸರು!

Aswathy Achu
Published on

ಹನಿಟ್ರ್ಯಾಪ್​ ನಿಪುಣೆ ಅಂದರ್​: ಈಕೆಯ ಪಟ್ಟಿಯಲ್ಲಿದ್ದಾರೆ ಪ್ರಖ್ಯಾತ ರಾಜಕಾರಣಿಗಳು, ಪೊಲೀಸರು!

ತಿರುವನಂತಪುರ: ಮದುವೆ ಹೆಸರಿನಲ್ಲಿ ನಂಬಿಸಿ ಭಾರೀ ಪ್ರಮಾಣದ ಹಣ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್​ ನಿಪುಣೆ ಅಶ್ವಥಿ ಅಚು ಎಂಬಾಕೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

Ashwathy achu 1

ಪೊಲೀಸರ ಪ್ರಕಾರ ಅಶ್ವಥಿ ಅಚ್ಚು ಓರ್ವ ಹಿಸ್ಟರಿ ಶೀಟರ್​ ಆಗಿದ್ದು, ಅನೇಕ ಹನಿಟ್ರ್ಯಾಪ್​ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಇತ್ತೀಚೆಗೆ ಪೂವರ್​ ಮೂಲದ 68 ವರ್ಷದ ಸೆನಿಲ್​ ಎಂಬುವವರನ್ನು ಮದುವೆಯಾಗುವುದಾಗಿ ನಂಬಿಸಿ, 40 ಸಾವಿರ ಹಣ ಸುಲಿಗೆ ಮಾಡಿ ವಂಚನೆ ಮಾಡಿದ್ದಾಳೆ.

ವಂಚನೆಗೆ ಒಳಗಾಗಿರುವುದು ಗೊತ್ತಾದ ಕೂಡಲೇ ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿದರು. ಬಳಿಕ ಅಶ್ವಥಿಯನ್ನು ಠಾಣೆಗೆ ಕರೆಸಲಾಯಿತು. ಸಂಜೆ ಹೊತ್ತಿಗೆ ಹಣ ಮರಳಿಸುವುದಾಗಿ ಭರವಸೆ ನೀಡಿದ್ದಳು. ಆದರೆ, ಗಡುವನ್ನು ಮೀರಿ ಹಣ ನೀಡದೇ ಪರಾರಿಯಾಗಿದ್ದಳು. ಕೊನೆಗೆ ಆಕೆಯನ್ನು ಬಂಧಿಸಲಾಗಿದೆ.

Ashwathy achu 2

ಅಶ್ವಥಿ ಅಚ್ಚು ಸಾಕಷ್ಟು ಮಂದಿಯನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕೆಡವಿದ್ದಾಳೆ. ಅವರಲ್ಲಿ ಹೆಸರು ಮಾಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಕೂಡ ಸೇರಿದ್ದಾರೆ. ತಮ್ಮ ಹೆಸರುಗಳು ಬಹಿರಂಗವಾಗಿ ಸಾರ್ವಜನಿಕರಲ್ಲಿ ಎದುರಲ್ಲಿ ಮಾನ ಮರ್ಯಾದೆ ಹೋಗಬಹುದು ಅಂತ ಅಶ್ವಥಿಯ ಹೆಸರನ್ನು ಹಲವು ಪ್ರಕರಣಗಳಿಂದ ಕೈಬಿಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net