More

  ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್​ಗೆ ಬಂಧನ ಭೀತಿ

  ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್​ಗೆ ಬಂಧನ ಭೀತಿ ಎದುರಾಗಿದೆ. ಚೆಕ್​ ಬೌನ್ಸ್​ ಪ್ರಕರಣದಲ್ಲಿ ಪ್ರಕಾಶ್​ಗೆ ಬಂಧನ ವಾರಂಟ್​ ಜಾರಿಯಾಗಿದೆ.

  ಸಮನ್ಸ್ ನೀಡಿದರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆನೇಕಲ್​ನ ಜೆಎಂಎಫ್​ಸಿ ಕೋರ್ಟ್ ವಾರಂಟ್​ ಜಾರಿ ಮಾಡಿದೆ. 2018ರಲ್ಲಿ ವ್ಯವಹಾರದ ವಿಚಾರವಾಗಿ ಲೀಲಾವತಿ ಎಂಬುವವರಿಗೆ ವರ್ತೂರು ಪ್ರಕಾಶ್​ 25 ಲಕ್ಷ ರೂ. ಚೆಕ್ ನೀಡಿದ್ದರು.

  ಲೀಲಾವತಿ ಅವರು ಹಣವನ್ನು ಡ್ರಾ ಮಾಡಿಕೊಳ್ಳಲು ಕೆನರಾ ಬ್ಯಾಂಕ್​ಗೆ ಚೆಕ್ ಹಾಕಿದ್ದರು. ಆದರೆ, ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ವಿಚಾರಿಸೋಣ ಅಂದ್ರೆ ವರ್ತೂರು ಪ್ರಕಾಶ್, ಲೀಲಾವತಿ ಅವರ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಚೆಕ್​ ಬೌನ್ಸ್​ ಪ್ರಕರಣವನ್ನು ದಾಖಲಿಸಿದ್ದರು.

  ಈ ಪ್ರಕರಣದ ವಿಚಾರಣೆ 2018 ರಿಂದ ಆನೇಕಲ್​ನ ಜೆಎಂಎಫ್​ಸಿ ಕೋರ್ಟ್​ನಲ್ಲಿ ನಡೆಯುತ್ತಿದೆ. ವರ್ತೂರು ಪ್ರಕಾಶ್​ಗೆ ಸಾಕಷ್ಟು ಬಾರಿ ಸಮನ್ಸ್ ನೀಡಿದರು ಆತ ಕೋರ್ಟಿಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಆನೇಕಲ್ ಜೆಎಂಎಫ್​ಸಿ ಕೋರ್ಟ್ ಬಂಧನದ ವಾರಂಟ್​ ಜಾರಿ ಮಾಡಿದೆ.

  ಮೇ 10ನೇ ತಾರೀಖಿನ ವೇಳೆಗೆ ವರ್ತೂರು ಪ್ರಕಾಶ್​ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು ಜಿಗಣಿ ಪೋಲೀಸರಿಗೆ ನ್ಯಾಯಾಧೀಶರು ತಾಕೀತು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts