More

    ಒಂದೇ ಸೆಕೆಂಡ್​ನಲ್ಲಿ ಭಯೋತ್ಪಾದಕ ಎಂದು ಘೋಷಿಸುತ್ತೇವೆ: ಶಿಕ್ಷಕನಿಗೆ ಪೊಲೀಸ್​ ಅಧಿಕಾರಿ ಬೆದರಿಕೆ

    ಪಟನಾ: ದೂರು ನೀಡಲು ಬಂದ ಶಿಕ್ಷಕನಿಗೆ ಪೊಲೀಸ್​ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ಬಿಹಾರ ರಾಜಧಾನಿ ಪಟನಾದ ಜಮುಯಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

    ಒಂದು ಸೆಕೆಂಡ್​ನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಿಸುತ್ತೇವೆ ಎಂದು ಪೊಲೀಸ್​ ಅಧಿಕಾರಿ ಶಿಕ್ಷಕನಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈ ಘಟನೆ ಎರಡ್ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳಲು ಶಿಕ್ಷಕ ಸೇರಿದಂತೆ ಆತನ ಇಡೀ ಕುಟುಂಬದ ಸದಸ್ಯರು ಪೊಲೀಸ್​ ಠಾಣೆಗೆ ಹೋಗಿದ್ದರು. ಈ ವೇಳೆ ರಾಜೇಶ್​ ಶರಣ್​ ಹೆಸರಿನ ಪೊಲೀಸ್​ ಅಧಿಕಾರಿ ಮತ್ತು ಮಫ್ತಿಯಲ್ಲಿದ್ದ ಇತರ ಪೊಲೀಸ್​ ಸಿಬ್ಬಂದಿ ಶಿಕ್ಷಕನ ಸುತ್ತ ಕುಳಿತಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡು ದಿಢೀರನೇ ತಾನು ಕೂತಿದ್ದ ಕುರ್ಚಿಯಿಂದ ಎದ್ದ ರಾಜೇಶ್​ ಶರಣ್​, ಶಿಕ್ಷಕನಿಗೆ ಬೆರಳು ತೋರಿಸಿ ಬೆದರಿಕೆ ಹಾಕಿದರು.

    ಇದನ್ನೂ ಓದಿ: ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟ ಪೊಲೀಸ್​ ಕಾನ್ಸ್​ಟೆಬಲ್​

    ಘೋಷಿಸುವುದು ನಮ್ಮ ಕೆಲಸ

    ಜನರನ್ನು ಭಯೋತ್ಪಾದಕರು ಎಂದು ಘೋಷಿಸುವುದು ನಮ್ಮ ಕೆಲಸ. ಒಂದೇ ಸೆಕೆಂಡ್​ನಲ್ಲಿ ನಿನ್ನನ್ನು ಭಯೋತ್ಪಾದಕ ಎಂದು ಘೋಷಣೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ. ಇಷ್ಟಾದರೂ ಅಲ್ಲಿದ್ದ ಜನರು ಪ್ರತಿರೋಧ ತೋರದೇ ಸುಮ್ಮನಿದ್ದರು. ಇದೀಗ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಪೊಲೀಸ್​ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್​)

    ವಿಡಿಯೋ ಕೃಪೆ: ಎನ್​ಡಿಟಿವಿ ಟ್ವಿಟರ್​

    ಈಗ ರೀಲ್​​ಗಳನ್ನು ಕಸ್ಟ್​​ಮೈಸ್​ ಮಾಡಬಹುದು…! ಏನಿದು ಹೊಸ ಫೇಸ್​ಬುಕ್​ ಆಯ್ಕೆ?

    Bajrang Dal Ban: ಕೆ. ಸುಧಾಕರ್ ನೇತೃತ್ವದಲ್ಲಿ ಬಜರಂಗದಳ, ಹಿಂದೂಪರ ಸಂಘಟನೆಗಳ ಪ್ರತಿಭಟನೆ!

    ಗುರಿ ಇರಲಿ… ರಾಜ್ಯ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದ ಪ್ರಿಯಾಂಕಾ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts