ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟ ಪೊಲೀಸ್​ ಕಾನ್ಸ್​ಟೆಬಲ್​

Police Constable
Published on

ಕಲಬುರಗಿ: ಗುಂಡು ಹಾರಿಸಿಕೊಂಡು ಕಾನ್​ಸ್ಟೆಬಲ್​ ಒಬ್ಬರು ಸಾವಿಗೆ ಶರಣಾಗಿರುವ ಘಟನೆ ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಮೃತ ಪೇದೆಯನ್ನು ಮಲ್ಲಿಕಾರ್ಜುನ (34) ಎಂದು ಗುರುತಿಸಲಾಗಿದೆ. ಚಿತ್ತಾಪುರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 303 ರೈಫಲ್​ನಿಂದ ಗುಂಡು ಹಾರಿಸಿಕೊಂಡು ಕಾನ್ಸ್​ಟೆಬಲ್ ಪ್ರಾಣ ಬಿಟ್ಟಿದ್ದಾರೆ.

ಮಲ್ಲಿಕಾರ್ಜುನ್​ ಅವರು ಚುನಾವಣೆ ನಿಮಿತ್ತ ಫ್ಲೈಯಿಂಗ್ ಸ್ವ್ಕಾಡ್​ ಕರ್ತವ್ಯದಲ್ಲಿದ್ದರು. ನಿನ್ನೆ ರಾತ್ರಿ ಚಿತ್ತಾಪುರ ತಹಸೀಲ್ದಾರ್ ಕಚೇರಿಯ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ.

ಮಲ್ಲಿಕಾರ್ಜುನ್​ ಅವರು ಚಿತ್ತಾಪುರ ತಾಲ್ಲೂಕಿನ ಶಹಬಾದ್ ಮಡ್ಡಿ ನಿವಾಸಿ. ಸಾವಿಗೆ ಕಾರಣ ಏನೆಂದು ತಿಳಿದುಬರಬೇಕಿದೆ. ಘಟನೆ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net