More

    ಸ್ಕೂಟಿಯಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಗೆ 1000 ರೂ. ದಂಡ!

    ಬಿಹಾರ: ಸಂಚಾರ ನಿಯಮಗಳನ್ನು ಪಾಲನೇ ಮಾಡದೇ ಇದ್ದಲ್ಲಿ ಪೊಲೀಸರು ದಂಡ ವಿಧಿಸುತ್ತಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೇ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಚಲನ್ ಬರುವುದು ಸಾಮಾನ್ಯ. ಆದರೆ ದ್ವಿಚಕ್ರ ವಾಹನದ ಮಾಲೀಕರು ಸೀಟ್‌ಬೆಲ್ಟ್ ಧರಿಸದೆ ಟ್ರಾಫಿಕ್ ನಿಯಮವನ್ನು ಪಾಲಿಸದ್ದಕ್ಕೆ ಪೊಲೀಸರು 1,000 ರೂ. ಚಲನ್ ನೀಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

    ಬಿಹಾರ ನಿವಾಸಿಯಾಗಿರುವ ಸಮತಿಪುರದಲ್ಲಿ ಬೈಕ್ ಸವಾರ ಕೃಷ್ಣಕುಮಾರ್ ಝಾ ಎಂಬಾತನಿಗೆ ಚಲನ್ ಬಂದಿದೆ.

    ನಡೆದಿದ್ದೇನು?: ಕೃಷ್ಣಕುಮಾರ್ ಝಾ ಅವರು ಸ್ಕೂಟಿಯಲ್ಲಿ ಬನಾರಸ್‌ಗೆ ಹೋಗುತ್ತಿದ್ದರು. ಈ ವೇಳೆ ಅವರ ಮೊಬೈಲ್‍ಗೆ ಸಂದೇಶ ಬಂದಿದೆ. 1,000 ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಹಣವನ್ನು ಈಗಾಗಲೇ ಪಾವತಿಸಲಾಗಿದೆ. ಆ ಚಲನ್‍ನಲ್ಲಿ 2020ರ ಅಕ್ಟೋಬರ್‌ನಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಎಂದು ಉಲ್ಲೇಖಿಸಲಾಗಿದೆ.ಇದನ್ನು ನೋಡಿದ ಕೃಷ್ಣಕುಮಾರ್ ಒಮ್ಮೆಲೇ ಶಾಕ್ ಆಗಿದ್ದಾರೆ.

    ಇದನ್ನೂ ಓದಿ:  ಬಿಜೆಪಿ ಬಿಟ್ಟ ಬೆನ್ನಲ್ಲೇ ಮತ್ತೊಂದು ದೃಢ ನಿರ್ಧಾರ ತೆಗೆದುಕೊಂಡ ಮಾಜಿ ಸಿಎಂ ಜಗದೀಶ್​ ಶೆಟ್ಟರ್​!

    ಬೈಕ್‍ನಲ್ಲಿ ಹೋಗಿರುವುದಕ್ಕೆ ಸೀಟ್ ಬೇಲ್ಟ್ ಯಾಕೆ ಧರಿಸಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪೊಲೀಸರು ತಾಂತ್ರಿಕ ದೋಷದಿಂದಾಗಿ ಕೆಲವೊಮ್ಮೆ ಈ ರೀತಿಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ಕೃಷ್ಣಕುಮಾರ್ ಝಾ ಸ್ವೀಕರಿಸಿದ ಚಲನ್ ಅನ್ನು ಮ್ಯಾನುವಲ್‌ನಿಂದ ನೀಡಲಾಗಿದೆ. ದೋಷ ಎಲ್ಲಿ ಸಂಭವಿಸಿದೆ ಎಂದು ನಾನು ಪರಿಶೀಲಿಸುತ್ತೇನೆ ಎಂದು ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ತಿಳಿಸಿದ್ದಾರೆ.

    ಕಾರ್​​, ಟ್ರಕ್​ ಮುಖಾಮುಖಿ ಡಿಕ್ಕಿ; ಮದುವೆಗೆ ಹೋಗುತ್ತಿದ್ದ 11 ಮಂದಿ ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts