ಚುನಾವಣೆ ವೇಳೆ ಮಾತ್ರ ನೆನಪು

1 Min Read
ಚುನಾವಣೆ ವೇಳೆ ಮಾತ್ರ ನೆನಪು
ಹನುಮಂತಪ್ಪ

ಆನವಟ್ಟಿ: ಚುನಾವಣೆ ವೇಳೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಮಡಿವಾಳ ಸಮಾಜ ನೆನಪಾಗುತ್ತಿದೆ. ಇದೇ ಸಮಾಜದ ಮುಖಂಡರು ಅನುದಾನಕ್ಕಾಗಿ ಜನಪ್ರತಿನಿಧಿಗಳ ಬಳಿ ಹೋದಾಗ ಗೌರವ ಕೊಟ್ಟಿರಲಿಲ್ಲ ಎಂದು ಶಿವಶರಣ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಸಿ.ಹನುಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಪದೇ ಪದೆ ಮಡಿವಾಳ ಸಮಾಜವನ್ನು ಪ್ರಸ್ತಾಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರ ನಡೆಸಿರುವ ಮಡಿವಾಳ ಸಮಾಜದ ದೊಡ್ಡ ದೊಡ್ಡ ಮುಖಂಡರು ಶಿವಮೊಗ್ಗ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ. ಸಮಾಜದ ಎಷ್ಟು ಕುಟುಂಬಗಳಿಗೆ ಹಕ್ಕುಪತ್ರ ಕೊಡಿಸಿದ್ದೀರಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಡಿವಾಳ ಸಮಾಜದವರಿಗೆ ಯಾವ ಪಕ್ಷವು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಕಾರ ನೀಡಿದೆ ಹಾಗೂ ಹಕ್ಕುಪತ್ರ ನೀಡಿದೆ ಎಂಬುದು ಜನರಿಗೆ ಗೊತ್ತಿದೆ. ಮತ ಚಲಾಯಿಸುವುದು ಸ್ವಂತ ಅಭಿಪ್ರಾಯ. ಕೆಲವು ಮುಖಂಡರು ಸ್ವಾರ್ಥ ರಾಜಕಾರಣಕ್ಕಾಗಿ ಏಕಮುಖವಾಗಿ ಒಂದು ಪಕ್ಷಕ್ಕೆ ಮತ ಹಾಕಿ ಎನ್ನುತ್ತಿದ್ದು, ಅಂಥವರಿಗೆ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ಅಶ್ವಿನಿಕುಮಾರ್, ಮುಖಂಡರಾದ ರಾಜಶೇಖರ್, ಹೆಗ್ಗಪ್ಪ ಇದ್ದರು.

See also  ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ: ಸಿದ್ದರಾಮಯ್ಯ ಘೋಷಣೆ
Share This Article