ಕಾರ್​​, ಟ್ರಕ್​ ಮುಖಾಮುಖಿ ಡಿಕ್ಕಿ; ಮದುವೆಗೆ ಹೋಗುತ್ತಿದ್ದ 11 ಮಂದಿ ಮೃತ್ಯು

ಛತ್ತೀಸ್‌ಗಢ: ಕಾರ್​​ ಮತ್ತು ಟ್ರಕ್​ ನಡುವೆ ಭೀಕರವಾದ ಅಪಘಾತ ಸಂಭವಿಸಿದ್ದು, ಮದುವೆಗೆ ಹೋಗುತ್ತಿದ್ದ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಲೋದ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ನಡೆದಿದೆ. ಬುಧವಾರ ರಾತ್ರಿ ಟ್ರಕ್‌ಗೆ ಎಸ್‌ಯುವಿ ಕಾರ್​ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಸಂತ್ರಸ್ತರು ಕಂಕೇರ್ ಜಿಲ್ಲೆಯ ಮರ್ಕಟೋಲಾ ಗ್ರಾಮದಲ್ಲಿ ಮದುವೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೃತರೆಲ್ಲರು ಧಮ್ತರಿ ಜಿಲ್ಲೆಯ ಸೋರಂ-ಭಟ್ಗಾಂವ್ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ … Continue reading ಕಾರ್​​, ಟ್ರಕ್​ ಮುಖಾಮುಖಿ ಡಿಕ್ಕಿ; ಮದುವೆಗೆ ಹೋಗುತ್ತಿದ್ದ 11 ಮಂದಿ ಮೃತ್ಯು