More

    ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ

    ಮುಂಬೈ: ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ ಇಂದು (ಫೆ.25) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮುಂಬರುವ ಹಾಡು ಲವ್​ ಡೋಸ್​ 2 ಶೂಟಿಂಗ್​ ಸೆಟ್​ನಲ್ಲಿ ಕೋ ಸ್ಟಾರ್​, ಖ್ಯಾತ ಗಾಯಕ ಹಾಗೂ ರ್ಯಾಪರ್​ ಯೋ ಯೋ ಹನಿಸಿಂಗ್ ಜತೆ ಹುಟ್ಟಹಬ್ಬ ಸಂಭ್ರಮಾಚರಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಹರಿದಾಡುತ್ತಿದ್ದು, ಚಿನ್ನದ ಲೇಪಿತ ಕೇಕ್​ ಎಲ್ಲರ ಗಮನ ಸೆಳೆಯುವುದರ ಜತೆಗೆ ಚರ್ಚೆಯ ವಿಷಯವೂ ಆಗಿಗಿದೆ.

    ಚಿನ್ನದ ಕೇಕ್​ ಮೂಲಕ ಹನಿಸಿಂಗ್​, ಊರ್ವಶಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ಈ ಕೇಕ್​ ಬೆಲೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಕತ್ತರಿಸಿ ತಿನ್ನುವ ಕೇಕ್​ಗೆ ಇಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ದಂಗಾಗ್ತೀರಾ! ಹೌದು, ಈ ಕೇಕ್​ ಬೆಲೆ ಲಕ್ಷವಲ್ಲ, ಕೋಟಿ ಬೆಲೆ ಬಾಳುತ್ತದೆ. ಇತಿಹಾಸದಲ್ಲೇ ಅತಿ ದುಬಾರಿ ಕೇಕ್​ ಎಂಬ ಹೆಗ್ಗಳಿಕೆ ಹೊಂದಿದೆ.

    ಹಾಗಾದರೆ, ಕೇಕ್​ನ ಬೆಲೆ ಎಷ್ಟು ಅಂತೀರಾ? ಕೇಕ್​ನ ಬೆಲೆ ತಿಳಿಯುವ ಮುನ್ನ ನಿಮ್ಮ ಉಸಿರು ಬಿಗಿ ಹಿಡಿದುಕೊಳ್ಳಿ. ಏಕೆಂದರೆ, ಕೇಕ್​ನ ಬೆಲೆ ಬರೋಬ್ಬರಿ 3 ಕೋಟಿ ರೂಪಾಯಿ. ನಿಮಗಿದು ಅಚ್ಚರಿ ಎನಿಸಿದರೂ ಇದೇ ಸತ್ಯ. ಬರ್ತಡೇ ಬೆಡಗಿ ಊರ್ವಶಿಗಿಂತ 24 ಕ್ಯಾರೆಟ್​ ಚಿನ್ನದ ಲೇಪಿತ ಇರುವ ಕೇಕ್​ ತುಂಬಾ ಗಮನ ಸೆಳೆದಿದೆ.

    ಹುಟ್ಟುಹಬ್ಬದಂದು ಊರ್ವಶಿಗೆ ವಿಶೇಷ ಉಡುಗೊರೆ ನೀಡಿದ್ದರ ಬಗ್ಗೆ ಮಾತನಾಡಿರುವ ಹನಿಸಿಂಗ್, ನನ್ನ ಪ್ರಕಾರ ಊರ್ವಶಿ ನಿಜವಾಗಿಯೂ ವಿಶ್ವದ ಅತ್ಯಂತ ಸುಂದರ ಹುಡುಗಿ. ಇದನ್ನು ಅನೇಕ ಬಾರಿ ನಾನು ಹೇಳಿದ್ದೇನೆ. ಆಕೆ ಅತ್ಯಂತ ಸುಂದರ ಹುಡುಗಿಯಾಗಿರುವುದರಿಂದಲೇ ಲವ್​ ಡೋಸ್​ 2 ಹಾಡಿಗಾಗಿ ಆಕೆಯನ್ನು ಆಯ್ಕೆ ಮಾಡಿಕೊಂಡೆ. ಈ ಹಿಂದಿನ ಲವ್ ಡೋಸ್‌ ಹಾಡು ದೊಡ್ಡ ಯಶಸ್ಸನ್ನು ಕಂಡಿತು. ಅಂದಿನಿಂದ, ಅಭಿಮಾನಿಗಳು ಹೆಚ್ಚಿನ ಬೇಡಿಕೆಯನ್ನು ಇಟ್ಟುಕೊಂಡಿದ್ದರು. ಆ ಸಮಯದಿಂದ ಇಂದಿನವರೆಗೆ ಕಲಾವಿದೆಯಾಗಿ ಊರ್ವಶಿ ಅವರ ಬೆಳವಣಿಗೆಯನ್ನು ನಾನು ನೋಡಿದ್ದೇನೆ, ಅವರು ನಿಜಕ್ಕೂ ಜಾಗತಿಕ ಸೂಪರ್‌ಸ್ಟಾರ್ ಎಂದು ಹನಿಸಿಂಗ್​ ಬಣ್ಣಿಸಿದ್ದಾರೆ.

    ನನ್ನ ಪ್ರಕಾರ, ಊರ್ವಶಿಯಂತಹ ಜಾಗತಿಕ ಸೂಪರ್‌ಸ್ಟಾರ್ ರಾಯಲ್ ಗಿಫ್ಟ್​ಗೆ ಅರ್ಹರು. ಹೀಗಾಗಿಯೇ 3 ಕೋಟಿ ರೂ. ಮೌಲ್ಯದ ಈ ವಿಶೇಷ ಕೇಕ್ ಖರೀದಿ ಮಾಡಲು ನಿರ್ಧರಿಸಿದೆ. ಈ ಸಹಯೋಗದ ಅವಶ್ಯಕತೆ ನನಗಿದೆ. ಈ ಕೇಕ್ ಕತ್ತರಿಸಿದ ಕ್ಷಣವು ಕೋ-ಸ್ಟಾರ್​ಗೆ ಇದುವರೆಗೂ ಯಾರಾದರೂ ಮಾಡಿದಂತಹ ಅತ್ಯಂತ ವಿಶೇಷ ಕ್ಷಣ ಅಥವಾ ಉಡುಗೊರೆಯಾಗಿ ಇತಿಹಾಸದಲ್ಲಿ ಉಳಿಯಬೇಕೆಂದು ನಾನು ಬಯಸುತ್ತೇನೆ. ಕೆಲಸದ ವಿಚಾರದಲ್ಲಿ ಊರ್ವಶಿ ನಿಜಕ್ಕೂ ಅದ್ಭುತ. ಈ ಅದ್ಧೂರಿ ಆಚರಣೆಗೆ ಆಕೆ ಅರ್ಹಳು. ಮುಂದೆಯೂ ಅವಳ ದೊಡ್ಡ ಯಶಸ್ಸನ್ನು ನಾನು ಬಯಸುತ್ತೇನೆ ಎಂದು ಹನಿಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​)

    100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

    ಕೇವಲ 2 ಗಂಟೆಗೆ 13 ಲಕ್ಷ ರೂಪಾಯಿ! ನಟಿ ಮೀನಾ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್​ ನಟ

    ಹುಡುಗಿಯರಿಗೆ ಇದು ಸುಲಭ, ಹುಡುಗರ ಬಗ್ಗೆ ಯೋಚಿಸಿದ್ರೆ ಅಯ್ಯೋ ಪಾಪ ಅನ್ಸುತ್ತೆ ಎಂದ ನಿತ್ಯಾ ಮೆನನ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts