Holding Baby Like Kangaroo : ಈ ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಕಲುಷಿತವಾಗಿದೆ. ವಿಶೇಷವಾಗಿ ವಾತಾವರಣವಂತೂ ತುಂಬಾ ಹದಗೆಡುತ್ತಿದೆ. ಇದರಿಂದಾಗಿ ಅನೇಕ ಕಾಯಿಲೆಗಳು ಮನು ಕುಲಕ್ಕೆ ಎದುರಾಗುತ್ತಿವೆ. ಅದರಲ್ಲೂ ಚಿಕ್ಕ ಮಕ್ಕಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕಲುಷಿತ ವಾತಾವರಣದಿಂದಾಗಿ ಶೀತ ಮತ್ತು ಕೆಮ್ಮಿನ ಜೊತೆಗೆ ಚರ್ಮದ ಸಮಸ್ಯೆಗಳಿಂದ ಮಕ್ಕಳು ಬಳಲುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕೆಲ ಪೋಷಕರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಗುಣಪಡಿಸಲು ಪ್ರಯತ್ನಿಸಿ, ಮನೆಮದ್ದುಗಳನ್ನು ಅನುಸರಿಸುತ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ರೀಲ್ ಒಂದು ವೈರಲ್ ಆಗಿದ್ದು, ಅದರಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಉಪಯುಕ್ತ ವಿಚಾರವೊಂದನ್ನು ಹೇಳಲಾಗಿದೆ. ಇದು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ನವಜಾತ ಶಿಶುವನ್ನು ಕಾಂಗರೂಗಳಂತೆ ಎದೆಯ ಹತ್ತಿರ ಹಿಡಿದಿಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಮಗುವನ್ನು ಕಾಂಗರೂಗಳಂತೆ ಎದೆಯ ಹತ್ತಿರ ಹಿಡಿದರೆ, ಮಗುವಿನ ತೂಕ ಹೆಚ್ಚಾಗುತ್ತದೆ ಮತ್ತು ಶೀತದಿಂದ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗಿದೆ.
ಮಗುವನ್ನು ಅಪ್ಪಿಕೊಳ್ಳುವುದರಿಂದ ಉಷ್ಣತೆ ಸಿಗುತ್ತದೆ ಮತ್ತು ಮಗುವಿನ ಮೆದುಳು, ನರಗಳು ಮತ್ತು ಮೂಳೆಗಳು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದಿಷ್ಟೇ ಅಲ್ಲದೆ, ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವೂ ಹೆಚ್ಚಾಗುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಅಷ್ಟಕ್ಕೂ ಇದು ನಿಜಾನಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಇದನ್ನೂ ಓದಿ: ಗೇ ಆ್ಯಪ್ನಲ್ಲಿ ಪರಿಚಯ: ಕರೆದ ಕೂಡಲೇ ಮನೆಗೆ ಹೋದ ಯುವಕನಿಗೆ ಕಾದಿತ್ತು ಬಿಗ್ ಶಾಕ್! Gay App
ಜಗತ್ತಿನಲ್ಲಿರುವ ಪ್ರತಿಯೊಬ್ಬರು ವಿಭಿನ್ನರು. ಪ್ರತಿ ಮಗುವೂ ವಿಭಿನ್ನ. ಕೆಲವು ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ. ಇನ್ನು ಕೆಲವರು ಹುಟ್ಟಿನಿಂದಲೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದಾಗಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಹುಟ್ಟಿದ ಕ್ಷಣದಿಂದಲೇ ವಿವಿಧ ತಪ್ಪು ಕಲ್ಪನೆಗಳನ್ನು ಹೊಂದಲು ಪ್ರಾರಂಭಿಸುತ್ತಾರೆ. ಆದರೆ, ಈ ವಿಡಿಯೋದಲ್ಲಿ ಹೇಳಿರುವ ಎಲ್ಲವೂ ಅಕ್ಷರಶಃ ಸತ್ಯ. ಮಕ್ಕಳ ಆರೋಗ್ಯ ಚೆನ್ನಾಗಿರಬೇಕು ಮತ್ತು ಮಕ್ಕಳು ಚೆನ್ನಾಗಿ ಬೆಳೆಯಬೇಕಾದರೆ ವಿಡಿಯೋದಲ್ಲಿರುವ ಸಲಹೆಗಳನ್ನು ತಪ್ಪದೇ ಅನುಸರಿಸಬೇಕು.
ಮಕ್ಕಳು ಒಂದು ವರ್ಷ ವಯಸ್ಸಿನವರೆಗೆ ನಡೆಯಲು ಕಲಿಯುವುದಿಲ್ಲ. ಆ ಸಮಯದಲ್ಲಿ, ನಾವು ಖಂಡಿತವಾಗಿಯೂ ಅವರನ್ನು ಹೊತ್ತುಕೊಂಡು ತಿರುಗಾಡುತ್ತೇವೆ. ಈ ಸಮಯದಲ್ಲಿ ಅವರನ್ನು ಕಾಂಗರೂಗಳಂತೆ ಹಿಡಿದುಕೊಳ್ಳುವುದು ಒಳ್ಳೆಯದು. ಆದರೆ ಇತ್ತೀಚೆಗೆ, ಕೆಲ ತಾಯಂದಿರು ಬ್ಯಾಗ್ಗಳನ್ನು ಬಳಸುತ್ತಿದ್ದಾರೆ. ಮಕ್ಕಳನ್ನು ಬ್ಯಾಗ್ನಲ್ಲಿ ಕೂರಿಸಿ ಬೆನ್ನಿಗೆ ಅಥವಾ ಹೊಟ್ಟೆಗೆ ಕಟ್ಟಿಕೊಂಡು ತಿರುಗಾಡುತ್ತಾರೆ. ಇನ್ನು ಕೆಲವರು ನಾಲ್ಕು ಚಕ್ರದ ಬಂಡಿಯಲ್ಲಿ ಕೂರಿಸಿಕೊಂಡು ಓಡಾಡುತ್ತಾರೆ. ಇದರಿಂದಾಗಿ, ಮಕ್ಕಳಿಗೆ ತಾಯಿಯ ಸ್ಪರ್ಶ ಸಿಗುತ್ತಿಲ್ಲ. ಹೀಗಿರುವಾಗ ಅವರು ಹೇಗೆ ಬೆಳೆಯುತ್ತಾರೆ? ಆದ್ದರಿಂದ, ನಿಮ್ಮ ಮಕ್ಕಳನ್ನು ತಾಳ್ಮೆಯಿಂದ ಹೊತ್ತುಕೊಂಡು ಹೋಗಲು ಕಲಿಯಿರಿ. ಇದರಿಂದ ನಿಮ್ಮ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.