ಸಿನಿಮಾ

ಪೊರಕೆಯಲ್ಲಿ ಹೆರಾಯಿನ್​ ಸಾಗಾಟ; ಇಬ್ಬರ ಬಂಧನ

ಅಮೃತಸರ: ಪಂಜಾಬ್​ ಪೊಲೀಸ್ ಮಿಂಚಿನ ಕಾರ್ಯಾಚರಣೆಯ ಫಲವಾಗಿ ಅಫ್ಘಾನ್​ ಪೊರಕರಗಳಲ್ಲಿ ಸಾಗಿಸಲಾಗುತ್ತಿದೆ ಎನ್ನಲಾದ ಹೆರಾಯಿನ್​ ಅನ್ನು ಅಮೃತಸರದಲ್ಲಿ ವಶಕ್ಕೆ ಪಡೆಯಲಾಗಿದೆ.

ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಹೆಯಾಯಿನ್​ಅನ್ನು 4,000 ಸಾವಿರ ಪೊರಕೆಗಳಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಗುಪ್ತಚರ ಇಲಾಖೆ ಮಾಹಿತಿ

ಪಂಜಾಬ್​ ರಾಜ್ಯ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಅಮೃತಸರದ ಇಂಟಿಗ್ರೇಟೆಡ್​ ಚೆಕ್​ಪೋಸ್ಟ್​ನಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಡ್ರಗ್ಸ್​ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಸುಮಾರು 40 ಕೋಟಿ ರೂಪಾಯಿ ಮೌಲ್ಯದ 5.48ಕೆಜಿ ಹೆರಾಯಿನ್​ಅನ್ನು ವಶಕ್ಕೆ ಪಡೆದಿದ್ದಾರೆ.

Heroin

ಇದನ್ನೂ ಓದಿ: ಅಪಾರ್ಟ್​​ಮೆಂಟ್​ ಪೇಂಟಿಂಗ್​ ವೇಳೆ ಆಕಸ್ಮಿಕವಾಗಿ ಕಳೆಗೆ ಬಿದ್ದ ಪೇಂಟರ್​ ಮೃತ್ಯು..!

ಬಿದಿರಿನಲ್ಲಿ ಸಾಗಾಟ

ಬಂಧಿತ ಆರೋಪಿಗಳು ಅನುಮಾನ ಬಾರದೆ ಇರಲಿ ಎಂದು ಪೊರಕೆಯ ನಡುವೆ ಬಿದಿರನ ತುಂಡುಗಳಲ್ಲಿ ಹೆರಾಯಿನ್​ಅನ್ನು ಇಟ್ಟು ಸಾಗಿಸಲಾಗುತ್ತಿತ್ತು.

ತಪಾಸಣೆ ನಡೆಸಿದ ವೇಳೆ 442 ಬಿದಿರಿನ ತುಂಡುಗಳಲ್ಲಿ ಹೆರಾಯಿನ್​ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಆರೋಪಿಗಳ ಬಂಧನ

ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದು ನಕಲಿ ಗುರುತಿನ ಚೀಟಿಯ ಮೂಲಕ ಭಾರತ ಪ್ರಜೆ ಎಂದು ಹೇಳಿಕೊಂಡಿದ್ದ ಅಫ್ಘಾನಿಸ್ತಾನ ಮೂಲದ ವ್ಯಕ್ತಿ ಹಾಗೂ ಪಂಜಾಬ್​ ಮೂಲದವಳಾದ ಆತನ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ 1985ರ ನಾರ್ಕೋಟಿಕ್-ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Sealed bamboo

Latest Posts

ಲೈಫ್‌ಸ್ಟೈಲ್