ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಮದ್ಯಪಾನ; ಆರೋಪಿ ಬಂಧನ, ಅಧಿಕಾರಿ ಅಮಾನತು

Up Police
Published on

ಲಖನೌ: ಪೊಲೀಸ್​ ಠಾಣೆಯೊಳಗೆ ಕುಳಿತು ವ್ಯಕ್ತಿ ಒಬ್ಬ ಮದ್ಯಪಾನ ಮಾಡುತ್ತಿರುವ ಘಟನೆ ಉತ್ತರಪ್ರದೇಶದ ಸಹರಾನ್​ಪುರದಲ್ಲಿ ನಡೆದಿದೆ.

ಆರೋಪಿ ಮದ್ಯಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿ್ಗರು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.

ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಕೃತ್ಯ

ಸಹರಾನ್​ಪುರದ ಖಾತಾ ಖೇರಿ ಪೊಲೀಸ್​ ಠಾಣೆಯಲ್ಲಿ ಘಟನೆ ನಡೆದಿದ್ದು ಇದೆ ಸಂಬಂಧ ಆರೋಪಿ ಇಮ್ರಾನ್​ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Up Police

ಬಂಧಿತ ಆರೋಪಿ ಇಮ್ರಾನ್​ ಠಾಣಾಧಿಕಾರಿ ಕುರ್ಚಿಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿರುವುದು ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ಕಂಡು ಬರುತ್ತದೆ.

ಠಾಣಾಧಿಕಾರಿ ಅಮಾನತು

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಪಿನ್​ ತಾಡಾ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಇಮ್ರಾನ್​ನನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಕರ್ತವ್ಯ ಲೋಪ ಎಸಗಿದ ಕಾರಣ ಖಾತಾ ಖೇರಿ ಪೊಲೀಸ್​ ಠಾಣಾಧಿಕಾರಿ ಸಚಿನ್​ ತ್ಯಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net