ಸಿನಿಮಾ

ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ; ಫಲಿತಾಂಶದ ಮುನ್ನಾ ದಿನವೇ ಮಹತ್ವದ ಬೆಳವಣಿಗೆ

ಹೊಸಪೇಟೆ: ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್​ ಮೂಡಿಗೆ ಜಾರಿರುವ ರಾಜಕೀಯ ಪಕ್ಷಗಳ ನಾಯಕರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಮತದಾನೋತ್ತರ ಸಮೀಕ್ಷೆಗಳನ್ನು ಆಧರಿಸಿ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಾರ್ಟಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಮಹತ್ವದ ಬೆಳವಣಿಗೆ

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಮುನ್ನದಿನವಾದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ ಅವರಿಗೆ ಫೋನ್ ಕರೆ ಮಾಡಿರುವುದು ಜಿಲ್ಲೆಯ ರಾಜಕಾರಣದಲ್ಲಿ ಮಹತ್ವ ಪಡೆದಿದೆ.

ಬಳ್ಳಾರಿ ಮತ್ತು ನೂತನ ವಿಜಯನಗರ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಹರಪನಹಳ್ಳಿಯೂ ಒಂದು. ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಎಂ.ಪಿ.ಲತಾ ಮತ್ತು ಎಂ.ಪಿ.ವೀಣಾ ಸಹೋದರಿಯರು ಕಳೆದ ಎರಡು ವರ್ಷಗಳಿಂದ ನಿರಂತರ ಪಕ್ಷ ಸಂಘಟನೆ ಮತ್ತು ಜನ ಸೇವೆಯಲ್ಲಿ ತೊಡಗಿದ್ದರು.

ಬಂಡಾಯದ ಬಾವುಟ

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ವರಿಷ್ಠರು ಎನ್.ಕೊಟ್ರೇಶಿ ಅವರಿಗೆ ಮಣೆ ಹಾಕಿದರು. ಇದರಿಂದ ಆಕ್ರೋಶಗೊಂಡಿದ್ದ ಇಬ್ಬರೂ ಸಹೋದರಿಯರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.

ಇದನ್ನೂ ಓದಿ: VIDEO| ಕಾರನ್ನು ನಿಲ್ಲಿಸಲು ಹೋಗಿ ಸರಣಿ ಅಪಘಾತ ಮಾಡಿದ ಮಹಿಳೆ!

ಎಂ.ಪಿ.ವೀಣಾ ನಾಮಪತ್ರ ವಾಪಸ್ ಪಡೆದು, ಲತಾಗೆ ಬೆಂಬಲವಾಗಿ ನಿಂತರು. ಅಪಾರ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ನಡೆಸಿರುವ ಪಕ್ಷೇತರ ಅಭ್ಯರ್ಥಿ ಎಂ.ಪಿ.ವೀಣಾ, ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಮತದಾನೋತ್ತರ ವಿವಿಧ ಸಮೀಕ್ಷೆಗಳಲ್ಲಿ ಹರಪನಹಳ್ಳಿಯಲ್ಲಿ ಎಂ.ಪಿ.ಲತಾ ಗೆಲುವಿನ ಸಾಧ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕೆಲ ಸ್ಥಾನಗಳ ಕೊರತೆಯಾಗುವ ಬಗ್ಗೆ ಮುನ್ಸೂಚನೆ ನೀಡಿವೆ.

MPL

ಸಿದ್ದರಾಮಯ್ಯ ಕರೆ

ಈ ನಡುವೆ ಫಲಿತಾಂಶ ಪ್ರಕಟಗೊಳ್ಳುವ ಒಂದು ದಿನ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿದ್ದಾರೆ. ಅಲ್ಲದೇ, ಚುನಾವಣೆಯಲ್ಲಿ ತಮಗೆ ಗೆಲುವಾಗಲಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಲಿಸುವAತೆ ಕೋರಿದ್ದಾರೆ ಎಂಬ ವಿಚಾರ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ತಂದೆ ಎಂ.ಪಿ.ಪ್ರಕಾಶ್ ಕಾಲದಿಂದಲೂ ನಮ್ಮ ಕುಟುಂಬದ ಆಪ್ತರಾಗಿದ್ದರು. ಮಗಳೆಂಬ ಭಾವನೆಯಿಂದ ಆಗಾಗ ನಮಗೆ ಕರೆ ಮಾಡಿ, ಕುಶಲೋಪರಿ ವಿಚಾರಿಸುತ್ತಾರೆ.

ಏನನ್ನೂ ಪ್ರಸ್ತಾಪಿಸಿಲ್ಲ

ಅದರಂತೆ ಇಂದು ಕೂಡಾ ಕರೆ ಮಾಡಿ ಮಾತನಾಡಿದರು. ಚುನಾವಣೆ ಹೇಗಾಯಿತು ಎಂದು ವಿಚಾರಿಸಿದರು. ಆದರೆ, ಬೆಂಬಲ ಕೊಡುವ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ. ಫಲಿತಾಂಶ ಪ್ರಕಟಗೊಳ್ಳದೇ ನಾನು ಗೆದ್ದಿದ್ದೇನೆ ಎಂದು ಭಾವಿಸುವವಳಲ್ಲ.

ಮತದಾರರ ಇಚ್ಛೆಯಂತೆ ಚುನಾವಣೆಯಲ್ಲಿ ಗೆದ್ದರೂ, ಮುಂದಿನ ರಾಜಕಿಯ ನಡೆ ಬಗ್ಗೆ ಕ್ಷೇತ್ರದ ಮತದಾರರು, ನಮ್ಮ ಬೆಂಬಲಿಗರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು. ಈ ಮೂಲಕ ನಾನಾ ರೀತಿಯ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Latest Posts

ಲೈಫ್‌ಸ್ಟೈಲ್