More

    ಕೈಕುಲುಕಲು ನಿರಾಕರಿಸಿದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ರಿ..ಕಂಟೆಂಟ್ ಕ್ರಿಯೇಟರ್ ರುಚಿಕಾ ಮೇಲೆ ಕೇಸ್​ ಹಾಕುವ ಬೆದರಿಕೆ!

    ಮುಂಬೈ: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಾಮಣಿ ಅಕಾ ಓರ್ರಿ ವಿರುದ್ಧ ಅಸಭ್ಯ ಮತ್ತು ವರ್ಗೀಯ ವರ್ತನೆಯ ಆರೋಪ ಮಾಡಿದ ಕಂಟೆಂಟ್ ಕ್ರಿಯೇಟರ್ ರುಚಿಕಾ ಲೋಹಿಯಾ ವಿರುದ್ಧ ಓರ್ರಿ ಕಾನೂನು ಕ್ರಮದ ಬೆದರಿಕೆ ಹಾಕಿದ್ದಾರೆ.

    ಇದನ್ನೂ ಓದಿ: ಕೇಜ್ರಿವಾಲ್​ಗೆ ಬೆಂಬಲ ಪಡೆಯಲು ಪತ್ನಿ ವಾಟ್ಸಾಪ್ ಅಭಿಯಾನ!

    ರುಚಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಕುಲುಕಲು ಓರ್ರಿ ನಿರಾಕರಿಸಿದರು. ಅವರೊಂದಿಗೆ ಚಿತ್ರ ತೆಗೆದುಕೊಳ್ಳಲು ಸಹ ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ 3.7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ವೈರಲ್​ ಆಗುತ್ತಿದ್ದಂತೆ ಓರ್ರಿ ಕುಪಿತಗೊಂಡಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವ ಬೆದರಿಕೆ ಹಾಕಿದ್ದಾರೆ.

    ರುಚಿಕಾ ಪ್ರಕಾರ, ಒರ್ರಿ ಮ್ಯಾನೇಜರ್ ಓರ್ರಿಯೊಂದಿಗೆ ಯಾವುದೇ ಫೋಟೋ ತೆಗೆದುಕೊಳ್ಳದಂತೆ ಸೂಚಿಸಿದರು. ಒರ್ರಿಗೆ ವಿದಾಯ ಹೇಳುವಾಗ ಹಸ್ತಲಾಘವಕ್ಕಾಗಿ ತನ್ನ ಕೈಯನ್ನು ಚಾಚಿದರೂ, ಓರ್ರಿ ಮುಷ್ಟಿ ಹಿಡಿದು ಗುದ್ದು ಕೊಟ್ಟಂತೆ ಪ್ರತಿಕ್ರಿಯಿಸಿದರು ಎಂದು ವೀಡಿಯೋದಲ್ಲಿ ಹೇಳಿದ್ದಾಳೆ.

    ರುಚಿಕಾ ಪೋಸ್ಟ್‌ಗೆ ಕೋಪಗೊಂಡ ಒರ್ರಿ, ಕಾಮೆಂಟ್ ಮಾಡಿದ್ದು, ರುಚಿಕಾಳನ್ನು ‘ಮೋಸ’ ಮತ್ತು ‘ನಾಚಿಕೆಯಿಲ್ಲದ’ ಎಂದು ಲೇಬಲ್ ಮಾಡಿದ್ದಾರೆ. ಆಕೆ ನಮ್ಮ ಮ್ಯಾನೇಜರ್‌ಗೆ ಅಗೌರವ ತೋರಿದ್ದಾಳೆ ಎಂದು ಆರೋಪಿಸಿದ್ದಾರೆ.

    ಓರ್ರಿ ತನ್ನ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಹೀಗೆ ಬರೆದಿದ್ದಾರೆ, “ಬೇಬ್, ನನಗೆ ನೀನು ಗೊತ್ತಿಲ್ಲ, ನೀನು ನನ್ನ ಮನೆತನವಲ್ಲ, ನಿನ್ನ ಕೈಯಿಂದ ಯಾವ ಸೂಕ್ಷ್ಮಜೀವಿಗಳು ಒಯ್ಯುತ್ತವೆ ಎಂದು ನನಗೆ ತಿಳಿದಿಲ್ಲ, ಅಭಿಮಾನಿಗಳು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ನಾನು ಯಾವಾಗಲೂ ಸಂತೋಷಪಡುತ್ತೇನೆ. ಟೈಮ್ ಪರ್ಮಿಟ್ ಮಾಡದಿರುವಾಗ ಸಾರ್ವಜನಿಕ ಸಮಾರಂಭದಲ್ಲಿ ನನ್ನ ಬಳಿಗೆ ಬೈಫೋರ್ಸ್​ ಆಗಿ ಬರುವುದು ನನ್ನ ಮ್ಯಾನೇಜರ್ ಅನ್ನು ಅಗೌರವಗೊಳಿಸುವುದು ಸರಿಯಲ್ಲ. ನೀವು ನನಗೆ ಹತ್ತಿರವಾಗಿದ್ದೀರಿ ಮತ್ತು ನಯವಾಗಿ ಸ್ವಾಗತಿಸಿದ್ದೀರಿ, ಅಪರಿಚಿತರು ನಿಮ್ಮನ್ನು ಮುಟ್ಟುತ್ತಾರೆ ಎಂದು ನಿರೀಕ್ಷಿಸಬೇಡಿ, ನೀವು ಸ್ನೇಹಪರ ಮುಷ್ಟಿಯನ್ನು ಪಡೆದುಕೊಂಡಿದ್ದೀರಿ, ಆದರೆ ಅದು ಕೂಡ ಸಾಕಾಗುವುದಿಲ್ವಾ??? ಮತ್ತು ನೀವು ನಿಜವಾಗಿಯೂ ಮುಜುಗರಕ್ಕೊಳಗಾಗಿದ್ದರೆ ಈ ಕ್ಲೌಟ್ ಚೇಸಿಂಗ್ ವೀಡಿಯೊದ ಅಗತ್ಯವೇನು ??? ಕುತಂತ್ರಿ ನಿನಗೆ ನಾಚಿಕೆಯಿಲ್ಲವೇ?”ಎಂದು ಓರ್ರಿ ಕಾಮೆಂಟ್​ ಮಾಡಿದ್ದಾರೆ.

    ಇದಲ್ಲದೆ, ರುಚಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಓರ್ರಿ ಘೋಷಿಸಿದರು, “ಆಕೆ ಸಿಂಪತಿ ಗಿಟ್ಟಿಸಲು ಕಥೆ ಕಟ್ಟಿದ್ದಾಳೆ ಮತ್ತು ಮಾನನಷ್ಟ ಮೊಕದ್ದಮೆಯನ್ನು ಸಹ ಪಡೆಯುತ್ತಿದ್ದಾಳೆ. ಆಕೆ ಬಯಸಿದ್ದಕ್ಕಿಂತ ಹೆಚ್ಚಿನದನ್ನು ಪಡೆದಳು! ನಾನು ಅವಳಿಗೆ ಏನನ್ನೂ ಕೊಡಲಿಲ್ಲ ಎಂದು ಈಗ ಅವಳು ಹೇಳಲಾರಳು ಎಂದು ಓರ್ರಿ ಕಾಮೆಂಟ್​ ಮಾಡಿದ್ದಾರೆ.

    ಕಳೆದ ನವೆಂಬರ್‌ನಲ್ಲಿ, ಸಲ್ಮಾನ್ ಖಾನ್ ಅವರೊಂದಿಗೆ ಓರ್ರಿ ಬಿಗ್ ಬಾಸ್ 17 ವೇದಿಕೆಯಲ್ಲಿ ಕಾಣಿಸಿಕೊಂಡಾಗ ತನ್ನ ಆದಾಯದ ಮೂಲವನ್ನು ಬಹಿರಂಗಪಡಿಸಿದರು. ತಾನು ಯಾರ ಜೊತೆಗಾದರೂ ಫೋಟೋಗಳಿಗೆ ಪೋಸ್ ನೀಡಿದರೆ ಅವರು ಹಣ ಕೊಡಬೇಕಾಗುತ್ತದೆ. ಆ ಮೂಲಕ ಹಣ ಗಳಿಸುತ್ತೇನೆ ಎಂದು ಬಹಿರಂಗಪಡಿಸಿದರು, ಹೀಗೆ ನಾನು ಒಂದು ರಾತ್ರಿಗೆ 20-30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಹೇಳಿಕೊಂಡಿದ್ದರು.

    ‘ನನ್ನ ಹೆಂಡ್ತಿ ಹಾಗೇ.. ಅದು ಗೊತ್ತಾದಾಗ ಅವಳನ್ನು ಬಿಟ್ಟು ಹೋಗ್ಬೇಕು ಎನ್ನಿಸ್ತು’.. : ಪುರಿ ಜಗನ್ನಾಥ್ ಶಾಕಿಂಗ್ ಕಾಮೆಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts