More

  ‘ನನ್ನ ಹೆಂಡ್ತಿ ಹಾಗೇ.. ಅದು ಗೊತ್ತಾದಾಗ ಅವಳನ್ನು ಬಿಟ್ಟು ಹೋಗ್ಬೇಕು ಎನ್ನಿಸ್ತು’.. : ಪುರಿ ಜಗನ್ನಾಥ್ ಶಾಕಿಂಗ್ ಕಾಮೆಂಟ್

  ಹೈದರಾಬಾದ್​: ಡೇರಿಂಗ್ ಮತ್ತು ಡ್ಯಾಶಿಂಗ್ ನಿರ್ದೇಶಕ ಪೂರಿ ಜಗನ್ನಾಥ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಅವರು ಡಬಲ್ ಸ್ಮಾರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಈ ನಡುವೆ ಪೂರಿ ಜಗನ್ನಾಥ್ ಅವರು ತಮ್ಮ ಪತ್ನಿ ಲಾವಣ್ಯಾ ಬಗ್ಗೆ ಮಾಡಿರುವ ಕಾಮೆಂಟ್ ವೈರಲ್ ಆಗಿದೆ.

  ಇದನ್ನೂ ಓದಿ: ಮಾದರಿ ನೀತಿ ಸಂಹಿತೆ ಪಾಲನೆಯಿಂದ ಮಾತ್ರ ಪಾರದರ್ಶಕ ಚುನಾವಣೆ ಸಾಧ್ಯ!

  ಶೂಟಿಂಗ್ ವೇಳೆ ಸಂದರ್ಶನದಲ್ಲಿ ಭಾಗವಹಿಸಿದ್ದ ಪುರಿ ಜಗನ್ನಾಥ್ ತಮ್ಮ ವೈವಾಹಿಕ ಜೀವನದ ಬಗ್ಗೆ ಸ್ವಾರಸ್ಯಕರ ಕಾಮೆಂಟ್ ಮಾಡಿದರು.

  ನಿಮ್ಮ ಸಿನಿಮಾಗಳಲ್ಲಂತೂ ಮದುವೆ, ಮೂರು ಹಾಡು, ಮೂರು ಫೈಟ್ ಇರುತ್ತವೆ. ಅದೇ ನಿಮ್ಮ ನಿಜ ಜೀವನದಲ್ಲಿ ಹೇಗಿರುತ್ತದೆ ಎಂದು ಕೇಳಿದಾಗ, ಅದೂ ಹಾಗೆಯೇ..ಒಂದು ಹಂತದಲ್ಲಿ ಆಕೆಯನ್ನು ಬಿಟ್ಟುಬಿಡಬೇಕು ಎನಿಸಿತ್ತು ಎಂದರು.

  ನಾನು ಸಹಾಯಕ ನಿರ್ದೇಶಕನಾಗಿ ಸಿನಿಮಾ ಶೂಟಿಂಗ್ ಮಾಡುವಾಗ ಲಾವಣ್ಯಾ ಶೂಟಿಂಗ್ ನೋಡಲು ಬಂದಿದ್ದಳು. ಆಗ ಆಕೆ ನನಗೆ ತುಂಬಾ ಇಷ್ಟವಾದಳು. ಎರಡು ಗಂಟೆ ನಾನೇ ನೋಡಿದೆ. ಆದರೆ ಆಕೆ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಮದುವೆಗೆ ಈಕೆಯೇ ಸೂಕ್ತ ಎನಿಸಿ ನನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು, ನನ್ನನ್ನು ಮದುವೆಯಾಗುವ ಉದ್ದೇಶವಿದ್ದರೆ ಫೋನ್ ಮಾಡು…ಇಲ್ಲದಿದ್ದರೆ ಬೇಡ ಎಂದೆ.

  ನಂತರ ಅವಳು ಅಲ್ಲಿಂದ ಹೊರಟು ಹೋದಳು. ಒಂದು ವಾರದ ನಂತರ ಕರೆ ಮಾಡಿದಳು. “ಎಷ್ಟು ಜನಕ್ಕೆ ಹೀಗೆ ವಿಸಿಟಿಂಗ್​ ಕಾರ್ಡ್ ಕೊಟ್ಟಿದ್ದೀಯಾ? ಇದು ನಿನ್ನ ಅಭ್ಯಾಸನಾ? ಎಷ್ಟು ಜನಕ್ಕೆ ಮೋಸ ಮಾಡಿದ್ದೀಯಾ? ಎಂದು ಕೇಳಿದಳು.

  ಹಾಗೇನಿಲ್ಲ, ನೀನು ನನಗೆ ಇಷ್ಟವಾಗಿರುವೆ. ಒಪ್ಪಿದರೆ ಮದುವೆಯಾಗೋಣ ಎಂದೆ. ಬಳಿಕ ರಾಜೀಯಾದಳು. ಅಲ್ಲಿಂದ ಮುಂದೆ ಯಾವುದಾದರೂ ಹೋಟೆಲ್​ಗೆ ಊಟಕ್ಕೆ ಕರೆದುಕೊಂಡು ಹೋಗುವುದು ಮಾಡುತ್ತಿದ್ದೆ.

  ನನಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದುದರಿಂದ ಸಿನಿಮಾಗೆ 1ಸಾವಿರ ರೂ. ಸಿಗುತ್ತಿತ್ತು. ತುಂಬಾ ಕಷ್ಟದ ಕಾಲವದು. ಆ ಹುಡುಗಿ ಹೋಟೆಲ್​ಗೆ ಬಂದರೆ.. ನಾನು ಸ್ನೇಹಿತರ ಬಳಿ ಸಾಲ ಮಾಡುತ್ತಿದ್ದೆ. ಒಮ್ಮೆ ನಾವು ಯಾವುದೋ ಹೋಟೆಲ್‌ಗೆ ಹೋದೆವು. ವಾಸ್ತವವಾಗಿ ಹಣಕ್ಕೆ ಟೈಟ್​ ಆಗಿದ್ದೆ. ಕುಳಿತ ನಂತರ ಆರ್ಡರ್ ಮಾಡಿದಳು. ಅದೇನು ಗೊತ್ತಾ? ತಂದೂರಿ ಕೋಳಿ ಹೇಳಿದರು.

  ನಾನು ಬಿಲ್​ ಎಷ್ಟು ಬರಬಹುದೆಂದು ಹಿಂದೆ ಮುಂದೆ ನೋಡುವಂತಾದೆ. ನನ್ನ ಜೀವನದಲ್ಲಿ ನಾನು ಚಿಕನ್ ತಿಂದಿಲ್ಲ, ನಾನು ಐಸ್ ಕ್ರೀಮ್ ಕೂಡ ತಿನ್ನುವುದಿಲ್ಲ, ಸ್ವಲ್ಪವೇ ತೆಗೆದುಕೊಳ್ಳುತ್ತೇನೆ ಎಂದು ನಟಿಸಿದೆ. ಆದರೆ ಅವಳು ಇಡೀ ಕೋಳಿಯನ್ನು ತಿಂದು ಬಿಟ್ಟಳು. ಅದನ್ನು ನೋಡಿ ನಾನು ಶಾಕ್ ಆದೆ ಎಂದು ಪುರಿ ಹೇಳಿದ್ದಾರೆ.

  ಇನ್ನು ಇವಳನ್ನು ಸಾಕಲು ಆಗದು. ಅವರ ತಂದೆ ಕೋಳಿ ಅಂಗಡಿ ಇಟ್ಟಿರಬೇಕು, ಇಲ್ಲಾ ಕೋಳಿಗಳನ್ನು ಚೆನ್ನಾಗಿ ಸಾಕುತ್ತಿರಬೇಕು ಎನ್ನಿಸಿತು. ಮುಂದೆ ಪ್ರತಿ ಹೆಜ್ಜೆಯಲ್ಲೂ ಅವಮಾನ ಖಚಿತ, ಹಣಹೊಂದಿಸಲು ಪರದಾಡಬೇಕಾಗುತ್ತೆ. ಇವಳು ತಿನ್ನುವುದಕ್ಕೇ ಹುಟ್ಟಿದಂತಿದೆ. ಇವಳು ಅಂತಹವಳೇ, ಈಗಲೇ ಗೊತ್ತಾದದ್ದು ಒಳ್ಳೇಯದಾಯಿತು ಎಂದುಕೊಂಡೆ.

  ಹೋಟೆಲ್​ನಿಂದ ಹೊರಡುವುದಕ್ಕೆ ಮುನ್ನ, ”ಮದುವೆ ಮಾಡಿಕೊಂಡುಬಿಡೋಣ, ಇನ್ನು ಮುಂದೆ ಹೋಟೆಲ್​ಗಳಿಗೆ ತುರುಗಾಡವುದು ಬೇಡ ಎಂದೆ.

  ಹೀಗೆನ್ನುತ್ತಿದ್ದಂತೆ ಓಕೆ ಎಂದು ಬಿಟ್ಟಳು. ಆ ನಂತರ ಹಿರಿಯರು ಮದುವೆ ಮಾಡಿದರು. ನನ್ನ ಬಳಿ ಹಣವಿಲ್ಲ.. ನಿರ್ದೇಶಕನಾಗುವ ಪ್ರಯತ್ನದಲ್ಲಿದ್ದೇನೆ ಎಂದಾಗ ಓಕೆ ಎಂದು ಬೆನ್ನಿಗೆ ನಿಂತಳು.

  ನಾನು ರಾಮ್ ಗೋಪಾಲ್ ವರ್ಮಾ ಬಳಿ 1500 ರೂಪಾಯಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಹೋಟೆಲ್ ಗೆ ಹೋಗಿ ಊಟ ಮಾಡೋಣ ಎಂದೆ. ಬೇಡ ಎಂದಳು. ಆದರೆ ಜೀವನ ಈಗ ಸಾಕಷ್ಟು ದೂರ ಸಾಗಿದೆ. ಇಷ್ಟು ವರ್ಷಗಳಲ್ಲಿ ಆ ದಿನ ತಂದೂರಿ ಕೋಳಿ ತಿಂದಿದ್ದು ಮಾತ್ರ ಮೆಯಲು ಸಾಧ್ಯವಾಗ್ತಿಲ್ಲ. ಏಕೆಂದರೆ ಅವಳು ಮತ್ತೆ ಹಾಗೆ ತಿಂದಿದ್ದನ್ನು ನಾನು ಎಂದೂ ನೋಡಿಲ್ಲ ಎಂದಿದ್ದಾರೆ ಪುರಿ ಜಗನ್ನಾಥ್. ಇದೀಗ ಈ ವಿಡಿಯೋ ವೈರಲ್ ಆಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts