More

    ನನ್ನ ತಂದೆಗೆ ಸ್ಲೋ ಪಾಯ್ಸನ್​ ನೀಡಲಾಗಿದೆ; ಮುಖ್ತಾರ್​ ಪುತ್ರನ ಆರೋಪದ ಬೆನ್ನಲ್ಲೇ ತನಿಖೆಗೆ ಆದೇಶಿಸಿದ ಸರ್ಕಾರ

    ಲಖನೌ: ಗುರುವಾರ (ಮಾರ್ಚ್​ 28) ಹೃದಯಾಘಾತದಿಂದ ನಿಧನರಾದ ಕುಖ್ಯಾತ ಮಾಫಿಯಾ ಡಾನ್​, ರಾಜಕಾರಣಿ ಮುಖ್ತಾರ್​ ಅನ್ಸಾರಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಆತನ ಪುತ್ರ ಉಮರ್ ಅನ್ಸಾರಿ ಜೈಲಿನಲ್ಲಿ ತಮ್ಮ ತಂದೆಗೆ ಸ್ಲೋ ಪಾಯ್ಸನ್ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾನೆ.

    ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮುಖ್ತಾರ್​ 2005ರಿಂದಲೂ ಸೆರೆವಾಸದಲ್ಲಿದ್ದ. ಈತನ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಇತ್ತ ಆತನ ಪುತ್ರ ಉಮರ್ ಅನ್ಸಾರಿ ಸ್ಲೋ ಪಾಯ್ಸನ್​ ಕುರಿತು ಆರೋಪಿಸುತ್ತಿದ್ದಂತೆಯೇ ವಿವಾದ ಭುಗಿಲೆದಿದ್ದು, ವಿಪಕ್ಷಗಳ ನಾಯಕರು ತನಿಖೆಗೆ ಆಗ್ರಹಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅನ್ಸಾರಿ ಪುತ್ರ ಉಮರ್​, ನನ್ನ ತಂದೆ ಜೈಲಿನಲ್ಲಿದ್ದಾಗ ತಮಗೆ ವಿಷ ನೀಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂಬಂಧ ನ್ಯಾಯಾಲಯದ ಗಮನಕ್ಕೂ ತರಲಾಗಿತ್ತು. ಮರಣೋತ್ತರ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಇಲ್ಲ. ಇಂದು ರಾತ್ರಿಯೇ ಶವ ಪರೀಕ್ಷೆ ನಡೆಸಿ, ಬೆಳಿಗ್ಗೆ ಶವ ನೀಡಬಹುದು ಎಂಬ ವಿಶ್ವಾಸವಿದೆ. ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಸಹೋದರಿ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ Zomato ಐಡಿ ಬ್ಲಾಕ್​; ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ

    ಇತ್ತ ಮುಖ್ತಾರ ಸಾವಿನ ಕುರಿತು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರ್ಕಾರವು ಮೂವರು ಮ್ಯಾಜಿಸ್ಟ್ರೇಟ್​ಗಳಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದೆ. ಏತನ್ಮಧ್ಯೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

     ಬಾಂಡಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ಮುಖ್ತಾರ್​ ಶವ ಪರೀಕ್ಷೆ ನಡೆಯಲಿದ್ದು, ಇದನ್ನು ವಿಡಿಯೋಗ್ರಾಫ್​ ಮಾಡಲಾಗುವುದು. ಅಗತ್ಯವಿದ್ದರೆ ಅವನ ಒಳಾಂಗಗಳನ್ನು ಸಂರಕ್ಷಿಸಲಾಗುವುದು. ಮೊಹಮದಾಬಾದ್​ನಲ್ಲಿ ಈತನ ಅಂತ್ಯೆಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts