More

    ಕ್ರಿಸ್​ ಗೇಲ್​-ಎಬಿಡಿ ಹೆಸರಿನಲ್ಲಿರುವ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​; ಏನದು?

    ಬೆಂಗಳೂರು: ಮಾರ್ಚ್​ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 10ನೇ ಐಪಿಎಲ್ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಕಲ್ಕತ್ತಾ ನೈಟ್​ರೈಡರ್ಸ್​ ಮುಖಾಮುಖಿಯಾಗಲಿದ್ದು, ಹೈಮೋಲ್ಟೇಜ್​ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಮತ್ತೊಂದು ದಾಖಲೆ ಬರೆಯುವ ತವಕದಲ್ಲಿದ್ದು, ಕ್ರಿಸ್​ ಗೇಲಗ್​ ಹೆಸರಿನಲ್ಲಿರುವ ದಾಖಲೆಯನ್ನು ಮುರಿದ ಮೊದಲ ಕ್ರಿಕೆಟಿಗನಾಗಲಿದ್ದಾರೆ.

    ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಪರ ಒಟ್ಟು 239 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್​ ಕೊಹ್ಲಿ ಈವರೆಗೆ 237 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಇತ್ತ ಆರ್​ಸಿಬಿ ಪರ ಕ್ರಿಸ್​ ಗೇಲ್​ 239 ಸಿಕ್ಸರ್‌ಗಳನ್ನು ಸಿಡಿಸಿದ್ದು, ಯೂನಿವರ್ಷ್​ ಬಾಸ್​ ಹೆಸರಿನಲ್ಲಿರುವ ದಾಖಲೆಯನ್ನು ಮುರಿದ ಮೊದಲ ಕ್ರಿಕೆಟಿಗನಾಗಲು ವಿರಾಟ್​ ಕೊಹ್ಲಿಗೆ ಮೂರು ಸಿಕ್ಸರ್‌ಗಳ ಅಗತ್ಯವಿದೆ.

    ABD Kohli Gayle

    ಇದನ್ನೂ ಓದಿ: ರಾಜಸ್ಥಾನ ವಿರುದ್ಧ ಸೋತರೂ ಡೆಲ್ಲಿ ಕ್ಯಾಪಿಟಲ್ಸ್​ ಪರ ವಿಶೇಷ ದಾಖಲೆ ಬರೆದ ರಿಷಭ್​ ಪಂತ್

    ಆರ್​ಸಿಬಿ ಪರ 85 ಪಂದ್ಯಗಳನ್ನು ಆಡಿರುವ ಕ್ರಿಸ್​ ಗೇಲ್​ 239 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. 156 ಐಪಿಎಲ್ ಪಂದ್ಯಗಳಲ್ಲಿ 238 ಸಿಕ್ಸರ್‌ಗಳೊಂದಿಗೆ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ. 239 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್​ ಕೊಹ್ಲಿ ಈವರೆಗೆ 237 ಸಿಕ್ಸರ್​ಗಳನ್ನು ಸಿಡಿಸಿದ್ದು, ನೂತನ ದಾಖಲೆ ಬರೆಯುವ ಅವಕಾಶ ಈ ಪಂದ್ಯದಲ್ಲಿದೆ.

    ಐಪಿಎಲ್​ನಲ್ಲಿ ಈವರೆಗೂ ತಂಡ ಒಂದರ ಪರ ಆರು ಆಟಗಾರರು 200ಕ್ಕೂ ಅಧಿಕ ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಗೇಲ್, ಡಿವಿಲಿಯರ್ಸ್, ಕೊಹ್ಲಿ, ಕೀರನ್ ಪೊಲಾರ್ಡ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ತಾವು ಪ್ರತಿನಿಧಿಸುವ ತಂಡದ ಪರ 200ಕ್ಕೂ ಅಧಿಕ ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಕೆಕೆಆರ್​ ಆ್ಯಂಡ್ರೆ ರಸೆಲ್​ 3 ಸಿಕ್ಸರ್​ಗಳನ್ನು ಬಾರಿಸಿದರೆ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts