More

    ಸಹೋದರಿ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ Zomato ಐಡಿ ಬ್ಲಾಕ್​; ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ

    ಮುಂಬೈ: ಭಾರತದ ಜನಪ್ರಿಯ ಫುಡ್​ ಡೆಲಿವರಿ ಆ್ಯಪ್​ ಜೊಮ್ಯಾಟೋ ಗ್ರಾಹಕರನ್ನು ತನ್ನತ್ತ ಸೆಳೆಯಲು ವಿವಿಧ ಆಫರ್​ಗಳನ್ನು ನಿರಂತರವಾಗಿ ಘೋಷಿಸುತ್ತಿರುತ್ತದೆ. ಅದಕ್ಕೆ ತಕ್ಕಂತೆ ಡೆಲಿವರಿ ಬಾಯ್ಸ್​ ಸಹ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಆರ್ಡರ್​ ತಲುಪಿಸುತ್ತಿದ್ದು, ಕಂಪನಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

    ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜೊಮ್ಯಾಟೋ ತನ್ನ ಫುಡ್​ ಡೆಲಿವರಿ ಬಾಯ್​ ಒಬ್ಬರ ಖಾತೆಯನ್ನು ಅಮಾನತು ಮಾಡಿದ್ದು, ಇದು ಹಲವರ ಕಣ್ಣು ಕೆಂಪಗಾಗಿಸಿದೆ. ತನ್ನ ಸಹೋದರಿ ಮದುವೆಗೆ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಈ ರೀತಿ ಆಗಿದ್ದು, ನೆಟ್ಟಿಗರು ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಬಿಸಿಲಿನ ಝಳದಿಂದ ದೇಹವನ್ನು ಹೈಡ್ರೇಟೆಡ್ ಆಗಿಡುವ ಹಣ್ಣುಗಳಿವು; ನಿರಂತರ ಸೇವನೆಯಿಂದ ಹಲವಾರು ಪ್ರಯೋಜನಗಳು

    ಈ ಕುರಿತು ಪೋಸ್ಟ್​ ಮಾಡಿರುವ ವಕೀಲ ಸಮೀರ್​ ಭಟ್ಟಾಚಾರ್ಯ ಮುಂಬೈನಲ್ಲಿ ಡೆಲಿವರಿ ಏಜೆಂಟ್​ಆಗಿ ಕೆಲಸ ಮಾಡುತ್ತಿರುವ ಆಯುಷ್​ ಸೈನಿ ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ ಆತ ತನ್ನ ಸಹೋದರಿಯ ಮದುವೆ ಕೆಲವೇ ದಿನಗಳು ಬಾಕಿಯಿದ್ದು, ಈಗಿರುವಾಗಲೇ ಜೊಮ್ಯಾಟೋ ತನ್ನ ಐಡಿಯನ್ನು ಬ್ಲಾಕ್​ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಆತ ಎಷ್ಟರ ಮಟ್ಟಿಗೆ ನಿಜ ಹೇಳುತ್ತಿದ್ದಾನೆ ಎಂಬುದು ನನಗೆ ತಿಳಿಯಲಿಲ್ಲ. ಆತ ಆಳುತ್ತಿದದ್ದು ಮಾತ್ರ ನಿಜ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಜೊಮ್ಯಾಟೋ, ನಾವು ಗ್ರಾಹಕರ ಜೊತೆಜೊತೆಗೆ ಡೆಲಿವರಿ ಏಜೆಂಟ್​ಗಳಿಗೂ ಹೆಚ್ಚು ಗೌರವವನ್ನು ನೀಡುತ್ತೇವೆ. ಆತನ ಐಡಿ ಬ್ಲಾಕ್​ ಆಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಕಂಪನಿಯೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts