More

    ರಾಜಸ್ಥಾನ ವಿರುದ್ಧ ಸೋತರೂ ಡೆಲ್ಲಿ ಕ್ಯಾಪಿಟಲ್ಸ್​ ಪರ ವಿಶೇಷ ದಾಖಲೆ ಬರೆದ ರಿಷಭ್​ ಪಂತ್

    ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಮಾರ್ಚ್​ 28ರಂದು ನಡೆದ  ಐಪಿಎಲ್​ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಎದುರು ಜಯ ಸಾಧಿಸಿದೆ. ಇತ್ತ ಸೋಲಿನ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ರಿಷಭ್​ ಪಂತ್​ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

    2022ರ ವರ್ಷಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದ ರಿಷಭ್​ ಪಂತ್​ ಒಂದು ವರ್ಷದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿದಿದ್ದಾರೆ. ಇತ್ತ ರಿಷಬ್ ಪಂತ್​ಗೆ ಡೆಲ್ಲಿ ತಂಡದ ಪರ ಇದು ನೂರನೇ ಪಂದ್ಯ. ಈ ಮೂಲಕ ಪಂತ್, ಈ ಫ್ರಾಂಚೈಸಿಯ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಇದನ್ನೂ ಓದಿ: ತಮಾಷೆಗಾಗಿ ಸ್ನೇಹಿತನ ಗುದನಾಳಕ್ಕೆ ಗಾಳಿ ಬಿಟ್ಟ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

    2016ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ರಿಷಭ್​ ಪಂತ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ನಿರಂತರವಾಗಿ ಪ್ರತಿನಿಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್​ ವಿರುದ್ಧ ಕಣಕ್ಕಿಳಿದ ರಿಷಭ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಿಷಭ್​ ಪಂತ್ 34.33ರ ಸರಾಸರಿಯಲ್ಲಿ 15 ಅರ್ಧಶತಕ, 1 ಶತಕ ಒಳಗೊಂಡಂತೆ 99 ಇನ್ನಿಂಗ್ಸ್​ನಲ್ಲಿ 2884 ರನ್​ ಗಳಿಸಿದ್ದಾರೆ. ರಿಷಭ್​ ಪಂತ್​ ನಂತರದ ಸ್ಥಾನದಲ್ಲಿ ಅಮಿತ್​ ಮಿಶ್ರಾ (99), ಶ್ರೇಯಸ್​ ಅಯ್ಯರ್ (87)​ ಹಾಗೂ ಡೇವಿಡ್​ ವಾರ್ನರ್​ (82) ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts