More

    ತಮಾಷೆಗಾಗಿ ಸ್ನೇಹಿತನ ಗುದನಾಳಕ್ಕೆ ಗಾಳಿ ಬಿಟ್ಟ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಸಾಮಾಜಿಕ ಜಾಲತಾಣಗಳನ್ನು ನೋಡಿ ಹೆಚ್ಚು ಪ್ರಭಾವಿತರಾಗುತ್ತಿದ್ದು, ವೈರಲ್​ ಆಗುವ ಭರದಲ್ಲಿ ಹುಚ್ಚಾಟವಾಡಿ ತಮ್ಮ ಮೈಮೇಲೆ ಗಂಡಾಂತರವನ್ನು ಎಳೆದುಕೊಳ್ಳುತ್ತಿದ್ದಾರೆ. ಇದೀಗ ಅದಕ್ಕೆ ಸಂಬಂಧಿಸಿದಂತೆ ಸ್ನೇಹಿತನ ಹುಚ್ಚಾಟಕ್ಕೆ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ ನಡೆದಿದೆ.

    ಮಾರ್ಚ್​ 25ರಂದು ಘಟನೆ ನಡೆದಿದ್ದು, ಮೃತ ಯುವಕನನ್ನು ಯೋಗೇಶ್​ (24) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮುರಳಿ (25) ಯನ್ನು ವಶಕ್ಕೆ ಪಡೆದಿದ್ದಾರೆ. ಏರ್​​ಪ್ರೆಷರ್‌ ಪೈಪ್‌ನಿಂದ ಗುದನಾಳಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗೆ ಕರುಳು ಬ್ಲಾಸ್ಟ್‌ ಆಗಿ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಲಕ್ಷ್ಮೀ ಪ್ರಸಾದ್, ಮೃತ ಯೋಗೇಶ್ ಮೂಲತಃ ವಿಜಯಪುರದವನು. ಡೆಲವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ಥಣಿಸಂದ್ರದಲ್ಲಿ ವಾಸವಿದ್ದ. ಮಾರ್ಚ್ 25ರಂದು ಬೈಕ್‌ ರಿಪೇರಿ ಮಾಡಿಸಲು ಯೋಗೇಶ್​ ಸಂಪಿಗೆಹಳ್ಳಿ ಅಲ್ಲಿರುವ ಸಿಎನ್‌ಸಿ ಸರ್ವೀಸ್​ ಸೆಂಟರ್​ಗೆ ತೆರಳಿದ್ದ. ಯೋಗೇಶ್​ ಸ್ನೇಹಿತ ಮುರಳಿ ಸಹ ಸಿಎನ್​ಎಸ್ ಸರ್ವೀಸ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ.

    ಇದನ್ನೂ ಓದಿ: ಬಿಜೆಪಿಯವರು ನನ್ನ ಶವದ ಮೇಲೆ ಚುನಾವಣೆ ನಡೆಸಲು ಮುಂದಾಗಿದ್ದಾರೆ: ಪ್ರಿಯಾಂಕ್ ಖರ್ಗೆ

    ಇವರಿಬ್ಬರು ಹಳೆಯ ಸ್ನೇಹಿತರಾಗಿದ್ದು, ಸರ್ವೀಸ್‌ ಸೆಂಟರ್‌ನಲ್ಲಿದ್ದ ಏರ್​​ಪ್ರೆಷರ್​ ಪೈಪ್‌ನಿಂದ ಇಬ್ಬರು ಆಟ ಆಡಲು ಮುಂದಾಗಿದ್ದರು. ಮೊದಲಿಗೆ ಮುರುಳಿ, ಯೋಗೇಶ್‌ನ ಮುಖ ಹಾಗೂ ಹೊಟ್ಟೆಗೆ ಗಾಳಿ ಬಿಟ್ಟಿದ್ದ. ಇದಾದ ಬಳಿಕ ಯೋಗೇಶ್​ ಗುದನಾಳಕ್ಕೆ ಏರ್​ಪ್ರೆಷರ್​​ನಿಂದ ಗಾಳಿ ಬಿಟ್ಟಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದ ಕಾರಣ ಆಟ ಆಡಲು ಹೋಗಿ ಘಟನೆ ಸಂಭವಿಸಿದೆ. 

    ಈ ವೇಳೆ ಗುದನಾಳಕ್ಕೆ ಗಾಳಿ ಬಿಟ್ಟಿದ್ದರಿಂದ ಯೋಗೇಶ್‌ ಹೊಟ್ಟೆ ಊದಿಕೊಂಡು ಕರುಳು ಬ್ಲಾಸ್ಟ್ ಆಗಿದೆ. ತಕ್ಷಣ ಯೋಗೀಶ್ ನರಳಾಟ ಕಂಡು ಮುರಳಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್‌ ಮೃತಪಟ್ಟಿದ್ದಾನೆ. ಸದ್ಯ ಮೃತ ಯೋಗೇಶ್‌ ಪೋಷಕರು ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 304 ಅಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಮುರಳಿಯನ್ನು ವಶಲ್ಲೆ ಪಡೆದಿರುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts