More

    ಡೆಲ್ಲಿ ಕ್ಯಾಪಿಟಲ್ಸ್​ ಎದುರು ಆಲ್ರೌಂಡ್​ ಪ್ರದರ್ಶನ; ರಾಜಸ್ಥಾನ ರಾಯಲ್ಸ್​ಗೆ ಸತತ ಎರಡನೇ ಜಯ

    ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಎದುರು ಜಯ ಸಾಧಿಸಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡವು ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ರಿಯಾನ್​ ಪರಾಗ್​ (84 ರನ್, 45 ಎಸೆತ, 7 ಬೌಂಡರಿ, 6 ಸಿಕ್ಸರ್​) ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 185 ರನ್​ ಗಳಿಸಿತ್ತು.

    ಡೆಲ್ಲಿ ಕ್ಯಾಪಿಟಲ್ಸ್​ ಪರ ಖಲೀಲ್​ ಅಹ್ಮದ್​ (4-0-24-1), ಮುಖೇಶ್​ ಕುಮಾರ್​ (4-0-49-1), ಎನ್ರಿಚ್​ ನೋಕಿಯಾ (4-0-48-1), ಅಕ್ಷರ್​ ಪಟೇಲ್ (4-0-21-1), ಕುಲದೀಪ್ ಯಾದವ್​ (4-0-41-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ; ಆಸ್ತಿ ಮೌಲ್ಯ ನಾಲ್ಕು ಪಟ್ಟು ಹೆಚ್ಚಳ

    186 ರನ್​ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಡೇವಿಡ್​ ವಾರ್ನರ್​ (49 ರನ್, 34 ಎಸೆತ, 5 ಬೌಂಡರಿ, 3 ಸಿಕ್ಸರ್), ಟ್ರಿಸ್ಟನ್​ ಸ್ಟಬ್ಸ್​ (44 ರನ್, 23 ಎಸೆತ, 2 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ಹೊರತ್ತಾಗಿಯೂ ಅಂತಿಮವಾಗಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 173 ರನ್​ ಗಳಿಸಿ 12 ರನ್​ಗಳ ಸೋಲೊಪ್ಪಿಕೊಂಡಿತ್ತು.

    ರಾಜಸ್ಥಾನ ಪರ ನಂಡ್ರೆ ಬರ್ಗರ್​ (3-0-29-2), ಯಜುವೇಂದ್ರ ಚಹಲ್ (3-0-19-2), ಆವೇಶ್​ ಖಾನ್ (4-0-29-1), ಟ್ರೆಂಟ್​ ಬೌಲ್ಟ್​ (3-0-29-0), ರವಿಚಂದ್ರನ್​ ಅಶ್ವಿನ್ (3-0-30-0), ಸಂದೀಪ್​ ಶರ್ಮಾ (4-0-36-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts