More

    ಬಿಸಿಲಿನ ಝಳದಿಂದ ದೇಹವನ್ನು ಹೈಡ್ರೇಟೆಡ್ ಆಗಿಡುವ ಹಣ್ಣುಗಳಿವು; ನಿರಂತರ ಸೇವನೆಯಿಂದ ಹಲವಾರು ಪ್ರಯೋಜನಗಳು

    ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ಮಾತನಾಡುವುದಾದರೆ ಬೇಸಿಗೆಯ ಬೇಗೆ ಈ ಬಾರಿ ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚಿದೆ ಎಂದು ಹೇಳಬಹುದಾಗಿದೆ. ಬಿರು ಬಿಸಿಲಿಗೆ ಜನರು ಬಸವಳಿದು ಹೋಗಿದ್ದು, ಜನರು ನೀರು ತಂಪು ಪಾನೀಯ ಹಾಗೂ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.

    ಬೇಸಿಗೆಯಲ್ಲಿ ನಮಗೆ ಹಲವು ಬಗೆಯ ಹಣ್ಣುಗಳು ಸಿಗುತ್ತವೆ. ಆದರೆ, ಜನರು ಹೆಚ್ಚಾಗಿ ನೀರಿನಂಶ ಇರುವ ಹಣ್ಣುಗಳನ್ನು ಸೇವಿಸುತ್ತಾರೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಬೇಸಿಗೆ ಸಮಯದಲ್ಲಿ ನಾವು ಹೆಚ್ಚು ಜ್ಯೂಸ್ ಇರುವ ಹಣ್ಣುಗಳನ್ನು ಸೇವಿಸಬೇಕು.  ಏಕೆಂದರೆ ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಹೆಚ್ಚು ದ್ರವ ಪದಾರ್ಥಗಳು ಬೇಕಾಗುತ್ತವೆ. ಬೇಸಿಗೆ ಸಮಯದಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯೂ ಹೆಚ್ಚಿದೆ ಎಂದು ಹೇಳಲಾಗಿದೆ.

    ಸೀಬೆಹಣ್ಣು: ಬಡವರ ಪಾಲಿನ ಆ್ಯಪಲ್​ ಎಂದು ಕರೆಯಲ್ಪಡುವ ಸೀಬೆಹಣ್ಣನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ಸೇವಿಸಿದರೆ ನಮ್ಮ ದೇಹದಲ್ಲಿ ಯಾವುದೇ ಖಾಯಿಲೆಗೆ ಜಾಗ ಇರುವುದಿಲ್ಲ ಎಂದು ವೈದ್ಯರು ಹಾಗೂ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಸೀಬೆಹಣ್ಣು ಸೇಬಿನಲ್ಲಿರುವ ಫೋಷಕಾಂಷಗಳನ್ನು ಹೊಂದಿದ್ದು, ವಿಟಮಿನ್ ಸಿ ಅಂಶ ಹೆಚ್ಚಿದೆ. ಕಾಲಮಾನಕ್ಕೆ ತಕ್ಕಂತೆ ಸಿಗುವ ಈ ಹಣ್ಣನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದ್ದು ಎಂದು ಹೇಳಲಾಗಿದೆ.

    ಕಲ್ಲಂಗಡಿ: ಬೇಸಿಗೆ ಎಂದಾಕ್ಷಣ ನಮಗೆ ನೆನಪಾಗುವುದು ಕಲ್ಲಂಗಡಿ ಹಣ್ಣುಗಳು. ಇವುಗಳಲ್ಲಿ 90 ಪ್ರತಿಶತ ನೀರು, ವಿಟಮಿನ್ ಎ, ಸಿ ಮತ್ತು ಪೊಟ್ಯಾಷಿಯಂ ಸಹ ಲಭ್ಯವಿದೆ. ಆದ್ದರಿಂದ ಬೇಸಿಗೆಯಲ್ಲಿ ಕಲ್ಲಂಗಡಿಗಳನ್ನು ಸೇವಿಸಬೇಕು. ಇದು ದೇಹವನ್ನು ಹೈಡ್ರೇಟ್ ಆಗಿಡುವುದಕ್ಕೆ ಸಹಾಯಕವಾಗಿದೆ. ಇದರಲ್ಲಿ ಪೊಟ್ಯಾಷಿಯಂ​ ಮತ್ತು ಮೆಗ್ನೀಷಿಯಮ್ ಪ್ರಮಾಣವಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.ಹೃದಯಕ್ಕೆ ಸಂಬಂಧಪಟ್ಟ ಕೆಲವೊಂದು ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ, ಹೆಚ್ಚು ಸೇವಿಸಿದರೆ ಸುಕ್ರೋಸ್ ಅಂಶ ಹೆಚ್ಚಾಗಿದ್ದು ಹೊಟ್ಟೆನೋವು ಬರುವ ಅಪಾಯವಿದೆ.

    Fruits

    ಇದನ್ನೂ ಓದಿ: 593 ಕೋಟಿ ರೂ. ಒಡೆಯನಾದ್ರು ಸ್ವಂತ ಕಾರಿಲ್ಲ; ಡಿ.ಕೆ. ಸುರೇಶ್​ ಹೆಸರಿನಲ್ಲಿದೆ 150 ಕೋಟಿ ರೂ. ಸಾಲ

    ಪಪ್ಪಾಯ: ಈ ಹಣ್ಣು ಹೆಚ್ಚಾಗಿ ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡಿದ್ದು ಇದರಲ್ಲಿ ಫ್ಲೆವನಾಯ್ಡ್, ಪೊಟ್ಯಾಷಿಯಂ​, ಮಿನರಲ್ಸ್, ಕಾಪರ್, ಮೆಗ್ನಿಷಿಯಂ, ಫೈಬರ್ ಅಂಶವನ್ನು ಒಳಗೊಂಡಿದೆ. ನಿರಂತರವಾಗಿ ಪಪ್ಪಾಯ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ರಕ್ತ ಕಣಗಳನ್ನು ಜಾಸ್ತಿ ಮಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಆರೋಗ್ಯ ಚೆನ್ನಾಗಿ ಇಡುತ್ತದೆ.

    ಮಾವು: ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನಹಣ್ಣನ್ನು ಬೇಸಿಗೆ ಸಮಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ,ವಿಟಮಿನ್ ಕೆ ಮಿನರಲ್ಸ್, ಆ್ಯಂಟಿ ಓಕ್ಸಿಡೆಂಟ್ ಮೆಗ್ನೇಷಿಯಮ್, ಪೊಟ್ಯಾಷಿಯಂ ಅಂಶಗಳು ಇರುವುದರಿಂದ ಕ್ಯಾನ್ಸರ್​ನಂತಹ ರೋಗಗಳು ಬರುವುದನ್ನು ತಡೆಯುತ್ತದೆ. ಬೇಸಿಗೆ ಸಮಯದಲ್ಲಿ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದ್ದು, ಇದರ ಬೆಲೆಯೂ ಆಗಿಂದಾಗೆ ಜನರ ತಲೆ ಬಿಸಿ ಮಾಡುತ್ತಿರುತ್ತದೆ.

    ಮೋಸಂಬಿ: ಮೋಸಂಬಿಯು ಒಂದು ಸಿಟ್ರಸ್ ಹಣ್ಣಾಗಿದ್ದು ಇದನ್ನು ಸಿಹಿಯಾದ ನಿಂಬೆ ಎಂದು ಕರೆಯುತ್ತಾರೆ. ಆರೋಗ್ಯಕ್ಕೆ ಸಹಾಯಕವಾಗುವಂತಹ ಅಂಶವನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಸರಾಗವಾಗಿಸಲು ಸಹಾಯಕವಾಗಿದೆ. ಅದು ಅಲ್ಲದೇ ಇದರ ಜ್ಯೂಸ್​​ನ ಸೇವನೆಯಿಂದ ಅಜೀರ್ಣ ಮತ್ತು ಗ್ಯಾಸ್ಟಿಕ್ ಸಮಸ್ಯೆಯು ದೂರಮಾಡುತ್ತದೆ. ಮಲಬಧ್ದತೆಯ ತೊಂದರೆಯು ನಿವಾರಣೆಯಾಗುತ್ತದೆ. ಈ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶ ಅತಿಸಾರ, ನಿರ್ಜಲಿಕರಣ, ಹೊಟ್ಟೆ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

    ಈಗ ನಾವು ಹೇಳಿದ ಹಣ್ಣುಗಳು ಬೇಸಿಗೆಯಲ್ಲಿ ಲಭ್ಯ. ಇವುಗಳಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ.. ಇವುಗಳನ್ನು ತಿನ್ನುವುದರಿಂದ ನಮಗೆ ಬಾಯಾರಿಕೆ ಕಡಿಮೆ ಆಗುತ್ತದೆ. ಶಕ್ತಿ ಬರುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವ ಹಣ್ಣುಗಳನ್ನು ತಿನ್ನಬೇಕು ಎಂಬುದರ ಕುರಿತು ತಮ್ಮ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts