More

  ಕುಖ್ಯಾತ ಮಾಫಿಯಾ ಡಾನ್​​​​, ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು

  ಉತ್ತರ ಪ್ರದೇಶ: ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್​​​​ ಮುಖ್ತಾರ್ ಅನ್ಸಾರಿ ಗುರುವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜೈಲಿನಲ್ಲಿದ್ದ ಮುಖ್ತಾರ್ ಅವರ ಆರೋಗ್ಯ ಹದಗೆಟ್ಟ ನಂತರ ಬಂದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಮುಖ್ತಾರ್ ಅವರ ಸಾವಿನೊಂದಿಗೆ ಅಪರಾಧದ ಯುಗ ಮತ್ತು ರಾಜಕೀಯದೊಂದಿಗಿನ ಅದರ ಸಂಬಂಧದ ಒಂದು ಅಧ್ಯಾಯವು ಕೊನೆಗೊಂಡಿದೆ. ಕಳೆದ ಹಲವು ದಶಕಗಳಿಂದ ಮುಖ್ತಾರ್ ಅವರ ವಿರುದ್ಧ ಕೊಲೆಯಿಂದ ಹಿಡಿದು ಸುಲಿಗೆವರೆಗಿನ ಅನೇಕ ಇತರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

  15 ನೇ ವಯಸ್ಸಿನಲ್ಲಿಯೇ ಅಪರಾಧ
  ಮುಖ್ತಾರ್ ಅನ್ಸಾರಿ 1963 ರಲ್ಲಿ ಪ್ರಭಾವಿ ಕುಟುಂಬದಲ್ಲಿ ಜನಿಸಿದರು. ಸರ್ಕಾರಿ ಗುತ್ತಿಗೆ ಮಾಫಿಯಾದಲ್ಲಿ ತೊಡಗಿಸಿಕೊಳ್ಳಲು ಅವರು ಅಪರಾಧದ ಜಗತ್ತಿಗೆ ಪ್ರವೇಶಿಸಿದರು. 1978 ರ ಆರಂಭದಲ್ಲಿ ಕೇವಲ 15 ನೇ ವಯಸ್ಸಿನಲ್ಲಿ ಅನ್ಸಾರಿ ಅಪರಾಧ ಜಗತ್ತಿಗೆ ಪ್ರವೇಶಿಸಿದರು. ನಂತರ ಅವರ ವಿರುದ್ಧ ಗಾಜಿಪುರದ ಸೈದ್‌ಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 506 ರ ಅಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. 1986 ರ ಹೊತ್ತಿಗೆ ಅವರ ವಿರುದ್ಧ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಯಿತು.

  ಹಲವಾರು ಪ್ರಕರಣಗಳಲ್ಲಿ ಹೆಸರು
  2005ರ ನವೆಂಬರ್ 29ರಂದು ಗಾಜಿಪುರ ಜಿಲ್ಲೆಯಲ್ಲಿ ಅಂದಿನ ಶಾಸಕ ಕೃಷ್ಣಾನಂದ ರೈ ಹತ್ಯೆ ಹಾಗೂ 1997ರ ಜನವರಿ 22ರಂದು ವಾರಣಾಸಿಯಲ್ಲಿ ಉದ್ಯಮಿ ನಂದ ಕಿಶೋರ್ ರುಂಗ್ತಾ ಅಲಿಯಾಸ್ ನಂದುಬಾಬು ಅವರನ್ನು ಅಪಹರಿಸಿ ಹತ್ಯೆಗೈದ ಪ್ರಕರಣಗಳಲ್ಲಿ ಮುಖ್ತಾರ್ ಅನ್ಸಾರಿ ವಿರುದ್ಧ ದರೋಡೆಕೋರರ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರ ಹಿರಿಯ ಸಹೋದರ ಅವಧೇಶ್ ರೈ ಹತ್ಯೆ ಪ್ರಕರಣದಲ್ಲಿ ಅನ್ಸಾರಿ ದೋಷಿ. 2003 ರಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್‌ಗೆ ಬೆದರಿಕೆ ಹಾಕಿದ್ದಕ್ಕಾಗಿಯೂ ಶಿಕ್ಷೆ ವಿಧಿಸಲಾಯಿತು. 2005 ರಿಂದ ಜೈಲಿನಲ್ಲಿದ್ದಾಗ ಅವರ ವಿರುದ್ಧ ಕೊಲೆ ಮತ್ತು ದರೋಡೆಕೋರ ಕಾಯ್ದೆಯಡಿಯಲ್ಲಿ 28 ಪ್ರಕರಣಗಳು ದಾಖಲಾಗಿದ್ದವು ಮತ್ತು ಸೆಪ್ಟೆಂಬರ್ 2022 ರಿಂದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು. ಪ್ರಸ್ತುತ ಮುಖ್ತಾರ್ ಅನ್ಸಾರಿ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 21 ಪ್ರಕರಣಗಳು ಬಾಕಿ ಉಳಿದಿವೆ.

  See also  VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

  ರಾಜಕೀಯದಲ್ಲೂ ದೊಡ್ಡ ಹಿಡಿತ
  ಮುಖ್ತಾರ್ ಅನ್ಸಾರಿ 1996 ರಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅವರು 2002 ಮತ್ತು 2007 ರ ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು. 2012 ರಲ್ಲಿ ಅನ್ಸಾರಿ ಕ್ವಾಮಿ ಏಕತಾ ದಳ (QED) ಅನ್ನು ಸ್ಥಾಪಿಸಿ ಮತ್ತೊಮ್ಮೆ ಗೆದ್ದರು. 2017ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಕಳೆದ 19 ವರ್ಷಗಳಿಂದ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದರು ಅನ್ಸಾರಿ.

  ಇತ್ತೀಚೆಗೆ ಶಸ್ತ್ರಾಸ್ತ್ರ ಪರವಾನಗಿ ಪಡೆದು ವಂಚಿಸಿದ ಪ್ರಕರಣದಲ್ಲಿ ಮುಕ್ತಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸೆಪ್ಟೆಂಬರ್ 2022 ರಿಂದ ಕಳೆದ 18 ತಿಂಗಳುಗಳಲ್ಲಿ ಇದು ಎಂಟನೇ ಪ್ರಕರಣವಾಗಿದ್ದು, ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಮುಖ್ತಾರ್‌ಗೆ ಶಿಕ್ಷೆ ವಿಧಿಸಿವೆ.

  ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್​ ಅಧಿಕಾರಿ ಬಳಿಯಿರುವ ಒಟ್ಟು ಆಸ್ತಿ ಎಷ್ಟು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts