ಕೈನಡುಕ, ತೊದಲು ಮಾತು! ನಟ ವಿಶಾಲ್​ಗೆ ವೈದ್ಯರು ಬರೆದು ಕೊಟ್ಟ ಪ್ರಿಸ್ಕ್ರಿಪ್ಷನ್ ​ಇದು, ಚೀಟಿಯಲ್ಲಿದೆ ಸಲಹೆ | Actor Vishal

ವಿಜಯವಾಣಿ (60)
Published on

Actor Vishal: ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಆಪ್ತ ಸ್ನೇಹಿತ, ತಮಿಳು ನಟ​ ವಿಶಾಲ್​ ಯಾವುದೋ ದೀರ್ಘ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಶಂಕೆಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ನಟನಿಗೆ ಸಂಬಂಧಿಸಿದ ವಿಡಿಯೋವೊಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

12 ವರ್ಷಗಳ ಹಿಂದೆ ವಿಶಾಲ್ ಅಭಿನಯದ 'ಮದಗಜರಾಜ' ಚಿತ್ರವು ಈಗ ತೆರೆಗೆ ಬರಲು ಸಿದ್ಧವಾಗಿದೆ. ಇದರ ಹಿನ್ನೆಲೆ ನಿನ್ನೆ ಚೆನ್ನೈನಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ತನ್ನ ಸಿನಿಮಾದ ಬಗ್ಗೆ ಮಾತನಾಡಲು ಮೈಕ್​ ಹಿಡಿದ ವಿಶಾಲ್​, ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ದೃಶ್ಯಗಳಲ್ಲಿ ಕಾಣಿಸಿದೆ. ಮೈಕ್​ ಹಿಡಿದು ಮಾತನಾಡುವಾಗ ಕೈ ನಡುಗುತ್ತಿರುವುದು ಮತ್ತು ಮಾತುಗಳು ತೊದಲಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಮತ್ತು ನೆಟ್ಟಿಗರು ವಿಶಾಲ್​ಗೆ ಏನಾಯಿತು ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ನೆಟ್ಟಿಗರಲ್ಲಿ ಅನುಮಾನ

ಕೆಲವರು ನಟನಿಗೆ ಯಾವುದೋ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅವರಿಗೆ ಮಾತನಾಡಲು ಹಾಗೂ ಮೈಕ್​ ಹಿಡಿಯದಿರುವಂತ ಪರಿಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಿಸಿದರೆ, ಇನ್ನೂ ಕೆಲವರು ವಿಶಾಲ್​ ಅವರ ಕುತ್ತಿಗೆಯಲ್ಲಿ ಯಾವುದೋ ಗುರುತು ಕಾಣಿಸುತ್ತಿದೆ. ಅವರ ಕೈಯಲ್ಲಿ ಮೈಕ್​ ಹಿಡಿಯಲು ಆಗ್ತಿಲ್ಲ, ಸ್ಪಷ್ಟವಾಗಿ ಮಾತನಾಡಲು ಆಗ್ತಿಲ್ಲ ಮತ್ತು ದೇಹದ ತೂಕ ಬಹಳ ಇಳಿದುಹೋಗಿದೆ. ಇದೆಲ್ಲವೂ ಯಾವುದೋ ಸಮಸ್ಯೆಯನ್ನು ಒತ್ತಿ ಹೇಳುತ್ತಿದೆ ಎಂದು ತಿಳಿಸಿದ್ದಾರೆ. ಅಸಲಿಗೆ ಚೆನೈನ ಅಪೋಲೋ ಆಸ್ಪತ್ರೆ ವೈದ್ಯರು ವಿಶಾಲ್​ಗೆ ಏನಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯರ ಸ್ಪಷ್ಟನೆ ಹಾಗೂ ಸಲಹೆ

ಭಯ ಪಡುವ ಅಥವಾ ಏನೋ ಆಗಿದೆ ಎಂದು ಚಿಂತಿಸುವ ಅಗತ್ಯವಿಲ್ಲ. ವಿಶಾಲ್​ಗೆ ವೈರಲ್ ಜ್ವರ ಕಾಡಿದೆ. ಹೀಗಾಗಿ ತೀವ್ರ ಬಳಲುತ್ತಿದ್ದಾರೆ ಅಷ್ಟೇ. ಸದ್ಯದ ಮಟ್ಟಿಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿರುವ ವಿಶಾಲ್​ಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ. ಇದರ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಚಿತ್ರದ ಕೆಲಸಗಳಿಂದ ದೂರ ಉಳಿದು, ಬೆಡ್​ ರೆಸ್ಟ್​ ಪಡೆಯುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net