ಪೊಲೀಸರಿಗೆ ಕ್ರಿಸ್‌ಮಸ್ ಬಂಪರ್ ಕೊಡುಗೆ; ಚುನಾವಣೆ ಗೌರವಧನ ಪರಿಷ್ಕೃತ

09 Nela Ph 01 Police Bandobasth
Published on

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ-ಸಿಬ್ಬಂದಿಗೆ ನೀಡಲಾಗುತ್ತಿದ್ದ ಗೌರವ ಧನವನ್ನು ಪರಿಷ್ಕರಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಡಿವೈಎಸ್‌ಪಿ ಮೇಲ್ಪಟ್ಟ ಅಧಿಕಾರಿಗಳಿಗೆ ಪ್ರತಿದಿನಕ್ಕೆ 2,500 ರೂ., ಇನ್‌ಸ್ಪೆಕ್ಟರ್‌ಗೆ 350 ರೂ., ಪಿಎಸ್‌ಐ, ಎಎಸ್‌ಐ, ಮುಖ್ಯಪೇದೆ, ಪೇದೆಗಳಿಗೆ 250 ರೂ. ಹಾಗೂ ಹೋಂ ಗಾರ್ಡ್, ಮಾಜಿ ಸೈನಿಕ, ಗ್ರಾಮ ರಕ್ಷಕ ದಳ, ಎನ್‌ಸಿಸಿ ಕೇಡರ್ ಇತರರಿಗೆ ದಿನಕ್ಕೆ 150 ರೂಪಾಯಿಯನ್ನು ನಿಗದಿ ಮಾಡಿ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಇದು ಪೊಲೀಸ್ ಇಲಾಖೆಯ ಎಲ್ಲ ಘಟಕಗಳಿಗೆ ಅನ್ವಯ ಆಗಲಿದ್ದು, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ನೀಡಲಾಗುತ್ತದೆ. ಚುನಾವಣೆ ಕರ್ತವ್ಯನಿರತ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಈ ಆದೇಶದನ್ವಯ 3 ದಿನದ ಗೌರವ ಧನವನ್ನು ಬಿಡುಗಡೆ ಮಾಡುವಂತೆ ಆಯಾ ಘಟಕದ ಅಧಿಕಾರಿಗಳಿಗೆ ಡಿಜಿಪಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net