2021ರಲ್ಲಿ ಹೆಚ್ಚು ಸರ್ಚ್​​ ಮಾಡಲಾದ ವಿಚಾರ, ವ್ಯಕ್ತಿಗಳು... ಶಾರುಖ್​ ಪುತ್ರನಿಗೂ ಸ್ಥಾನ!

google
Published on

ನವದೆಹಲಿ: ಇಂಟರ್​ನೆಟ್​ ಸರ್ಚ್​ ಇಂಜಿನ್​ ಗೂಗಲ್​​ ಮೂಲಕ ಹುಡುಕಲ್ಪಟ್ಟ 2021ರ ಟಾಪ್​ ಟ್ರೆಂಡಿಂಗ್​ ಸರ್ಚ್​​ಗಳ ವಿವರವನ್ನು ಕಂಪೆನಿ ಪ್ರಕಟಿಸಿದೆ. ಈ ವರ್ಷ ಭಾರತದಲ್ಲಿ ಗೂಗಲ್​​ ಟಾಪ್​ ಟ್ರೆಂಡಿಂಗ್​ ಸರ್ಚ್​ ಎಂದರೆ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಆಗಿದೆ. ಟಾಪ್​​ ಟ್ರೆಂಡಿಂಗ್​ ಪರ್ಸನಾಲಿಟಿಗಳ ಪಟ್ಟಿಯಲ್ಲಿ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದ ನೀರಜ್​ ಚೋಪ್ರ ಮೊದಲಿಗರಾಗಿದ್ದಾರೆ. ಹಾಗೇ ಡ್ರಗ್ಸ್​​ ಕೇಸಿನಲ್ಲಿ ಬಂಧನಕ್ಕೊಳಗಾಗಿ ವಿವಾದಕ್ಕೆ ಸಿಕ್ಕ ಬಾಲಿವುಡ್​ ಸ್ಟಾರ್​ ಶಾರುಖ್​ ಪುತ್ರ ಆರ್ಯನ್​ ಖಾನ್ ಕೂಡ ಭಾರತದ ಟಾಪ್​ ಟೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.​

ಟ್ರೆಂಡಿಂಗ್​ ಟಾಪಿಕ್​ಗಳ ಟಾಪ್​ ಲಿಸ್ಟ್​ನಲ್ಲಿ ಕರೊನಾ ಕಾರಣದಿಂದಾಗಿ ಎರಡು ಕಂತುಗಳಲ್ಲಿ ನಡೆದ ಐಪಿಎಲ್​​ ಮೊದಲ ಸ್ಥಾನ ಗಳಿಸಿದರೆ, ಎರಡನೇ ಸ್ಥಾನದಲ್ಲಿ ಕೋವಿನ್​ ಕಂಡುಬಂದಿದೆ. ತದನಂತರದಲ್ಲಿ ಐಸಿಸಿ ಟಿ20 ವರ್ಲ್ಡ್​ ಕಪ್​, ಯೂರೋ ಕಪ್​ ಮತ್ತು ಟೋಕಿಯೋ ಒಲಿಂಪಿಕ್ಸ್​​ ಸ್ಥಾನ ಪಡೆದಿವೆ. ಕೋವಿಡ್​ ವ್ಯಾಕ್ಸಿನ್​​ ಆರನೇ ಅತಿಹೆಚ್ಚು ಸರ್ಚ್​ ಮಾಡಲಾದ ವಿಷಯವಾಗಿದೆ. ಏಳನೇ ಸ್ಥಾನದಲ್ಲಿ ಫ್ರೀ ಫೈರ್​ ರೀಡೀಮ್​ ಕೋಡ್​ ಮತ್ತು ಕೋಪಾ ಅಮೆರಿಕ ಕಂಡುಬಂದರೆ, ನೀರಜ್​ ಚೋಪ್ರ ಮತ್ತು ಆರ್ಯನ್​ ಖಾನ್​ ಕ್ರಮವಾಗಿ 9ನೇ ಮತ್ತು 10ನೇ ಅತಿಹೆಚ್ಚು ಸರ್ಚ್​ ಆದ ಟಾಪಿಕ್​ಗಳಲ್ಲಿದ್ದಾರೆ.

ಇನ್ನು ಟಾಪ್​ ಟ್ರೆಂಡಿಂಗ್ ಪರ್ಸನಾಲಿಟಿಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದ ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್​ ಜೊತೆಗೂ ನೀರಜ್​ ಚೋಪ್ರಾರ ಹೆಸರು ಎದ್ದುಕಂಡಿದೆ. ಜೊತೆಗೆ, ಆರ್ಯನ್​ ಖಾನ್ ಮತ್ತು ರೂಪದರ್ಶಿ-ನಟಿ ಶಹನಾಜ್​ ಗಿಲ್​, ಬಾಲಿವುಡ್​ ನಟ ವಿಕಿ ಕೌಶಲ್​ ಮತ್ತು ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ಹೆಸರುಗಳು ಕಂಡುಬಂದಿವೆ.

ಕೋವಿಡ್​-19 ಸಂಬಂಧಿತ ಸರ್ಚ್​ಗಳು ಗೂಗಲ್​ನ 'ಹೌ ಟು' ಕ್ಯಾಟಗರಿಯಲ್ಲಿ ಅಗ್ರಸ್ಥಾನ ಪಡೆದಿದೆ. ಕೋವಿಡ್​ ಲಸಿಕೆಗೆ ನೋಂದಾಯಿಸಿಕೊಳ್ಳುವುದು ಹೇಗೆ? ಲಸಿಕೆ ಸರ್ಟಿಫಿಕೇಟ್​ ಡೌನ್​ಲೋಡ್ ಮಾಡೋದು ಹೇಗೆ? ಮತ್ತು ಆಕ್ಸಿಜನ್​ ಮಟ್ಟ ಹೆಚ್ಚಿಸಿಕೊಳ್ಳುವುದು ಹೇಗೆ? - ಎಂಬ ಸರ್ಚ್​ಗಳು ಈ ವಿಭಾಗದಲ್ಲಿ ಟಾಪ್​ 3. ಎಲಾನ್​ ಮಸ್ಕ್​​ರಿಂದ ಹೆಚ್ಚು ಜನಪ್ರಿಯತೆ ಕಂಡ ಕ್ರಿಪ್ಟೊ ಕರೆನ್ಸಿ ಕೂಡ ಈ ವಿಭಾಗದಲ್ಲಿ ಕಂಡುಬಂದಿದ್ದು, ಬಿಟ್​ಕಾಯಿನ್​ನಲ್ಲಿ ಹೂಡಿಕೆ ಮಾಡುವುದು ಹೇಗೆ ? ಎಂಬ ಪ್ರಶ್ನೆ 9ನೇ ಅತಿಹೆಚ್ಚು ಟ್ರೆಂಡಿಂಗ್​ ಹೌ ಟು ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net