ಸಿನಿಮಾ

ನಿದ್ರಾಹೀನತೆಯನ್ನು ಹೋಗಲಾಡಿಸಲು ಇಲ್ಲಿವೆ ಕೆಲವು ಆರೋಗ್ಯಕರ ಟಿಪ್ಸ್​

ಬೆಂಗಳೂರು: ಇಂದಿನ ಗ್ಯಾಜೆಟ್​ಗಳಿಂದಾಗಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಶೈಲಿಯು ಕಾರಣವಾಗಿದ್ದು, ಇದನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಉತ್ತಮ ನಿದ್ದೆ ಮಾಡಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕಾಗಿದ್ದು, ನಿದ್ರಾಹೀನತೆಯನ್ನು ಹೋಗಲಾಡಿಸಲು ಕೆಲವು ಸಲಹೆಗಳು ಇಲ್ಲಿವೆ.

1. ಪ್ರತಿದಿನ ಒಂದೇ ಸಮಯಕ್ಕೆ ಏಳುವುದು: ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ನಿಮ್ಮ ದೇಹಕ್ಕೆ ತರಬೇತಿಯನ್ನು ನೀಡಿ, ಒಂದೇ ಸಮಯದಲ್ಲಿ ಎಚ್ಚರಗೊಳಿಸುವಂತೆ ತರಬೇತಿ ನೀಡಿ. ಇದು ರಾತ್ರಿ ಉತ್ತಮ ನಿದ್ರೆ ಬರಲು ಸಹಾಯಕವಾಗಿದೆ.

2. ಆಲ್ಕೋಹಾಲ್ ಮತ್ತು ನಿಕೋಟಿನ್​ನಿಂದ ದೂರವಿರಿ: ಇವುಗಳ ಪರಿಣಾಮ ಹಲವಾರು ಗಂಟೆಗಳವರೆಗೆ ಇರುವುದರಿಂದ ಇವು ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಜಾಸ್ತಿ. ಅಲ್ಕೊಹಾಲಿನಿಂದ ಮಂಪರು ಬಂದರೂ ಸಹ ಇದು ಆ ಕ್ಷಣಕ್ಕೆ ಮಾತ್ರ ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಬರೋಬ್ಬರಿ 324 ರನ್​ ಗಳಿಸಿದ ತಂಡ..!

3. ಹಗಲಿನಲ್ಲಿ ನಿದ್ರೆ ಮಾಡಬೇಡಿ: ಹಗಲಿನ ನಿದ್ರೆಯು ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಹಗಲಿನಲ್ಲಿ ನಿದ್ರೆ ಕಡಿಮೆ ಮಾಡಿ.

4. ನಿಯಮಿತ ವ್ಯಾಯಾಮ: ನಿಯಮಿತ ವ್ಯಾಯಾಮವು ನಿದ್ರೆಯ ಗುಣಮಟ್ಟ ಮತ್ತು ಅವಧಿಯನ್ನು ಸುಧಾರಿಸುತ್ತದೆ. ನೀವು ರಾತ್ರಿಯಲ್ಲಿ ಮಲಗುವ ಮುಂಚೆ ಕನಿಷ್ಠ ಮೂರು ಗಂಟೆಗಳ ಮೊದಲು ವ್ಯಾಯಾಮ ಮಾಡಿ ಮುಗಿಸಿದ್ದರೆ ಉತ್ತಮ ನಿದ್ರೆ ಬರುತ್ತದೆ.

5. ಹಾಸಿಗೆಯಲ್ಲಿನ ಇತರ ಚಟುವಟಿಕೆ ನಿಯಂತ್ರಣ ಮಾಡಿ: ಹಾಸಿಗೆ ಅಥವಾ ಮಲಗುವ ಕೋಣೆಯಲ್ಲಿ ದೂರದರ್ಶನವನ್ನು ನೋಡುವುದನ್ನು ಅಥವಾ ರೇಡಿಯೊವನ್ನು ಕೇಳುವುದು, ಮೊಬೈಲ್​ ಬಳಕೆಯನ್ನು ತಪ್ಪಿಸಿ. ಈ ಎಲ್ಲಾ ಚಟುವಟಿಕೆಗಳು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸಬಹುದು ಮತ್ತು ನಿದ್ರಿಸಲು ಕಷ್ಟವಾಗಬಹುದು.

6. ಮಲಗುವ ಮುನ್ನ ತಿನ್ನಬೇಡಿ ಅಥವಾ ಕುಡಿಯಬೇಡಿ: ರಾತ್ರಿ ತಡವಾಗಿ ಊಟ ಮಾಡುವುದರಿಂದ ಅಥವಾ ಮಲಗುವ ಮುನ್ನ ತಿಂಡಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುರ ಜತೆಗೆ ಇದು ನಿಮ್ಮನ್ನು ಎಚ್ಚರವಾಗಿರಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ಆದಾಯ, ಸರಕು ನಿರ್ವಹಣೆಯಲ್ಲಿ ನೈಋತ್ಯ ರೈಲ್ವೆ ದಾಖಲೆ

7. ಮಲಗುವ ವಾತಾವರಣವನ್ನು ಶುಚಿಯಾಗಿರಿಸಿ: ಮಲಗುವ ಕೋಣೆಯಲ್ಲಿ ನಿದ್ರಿಸಲು ಅನುಕೂಲಕರವಾದ ಗಾಳಿ, ಬೆಳಕು ಬರುವುದರ ಜತೆಗೆ ಕೋಣೆ ನಿಶ್ಯಬ್ದವಾಗಿರಬೇಕು. ಮನಸ್ಸಿನ ಹಾಗೂ ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಉಸಿರಾಟದ ತಂತ್ರ, ಧ್ಯಾನ ಮತ್ತು ಮಧುರವಾದ ಸಂಗೀತ ಆಲಿಸಿ.

8. ಅರಿವಿನ ಚಿಕಿತ್ಸೆ: ನಿಮ್ಮನ್ನು ನೀವು ಅರಿತುಕೊಳ್ಳಲು ಪ್ರಯತ್ನಿಸಿ. ನಿದ್ರಾಹೀನತೆಗೆ ಕಾರಣವಾಗುವ ಆಲೋಚನೆಗಳನ್ನು ಬದಿಗೊತ್ತಿ ಶಾಂತವಾಗಿರಲು ಯತ್ನಿಸಿ.(ಏಜನ್ಸೀಸ್​​​)

Latest Posts

ಲೈಫ್‌ಸ್ಟೈಲ್