

ಬಿಹಾರ: 13 ವರ್ಷದ ಬಾಲಕಿಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನ ತಂಗಿಯ ಜೀವ ತೆಗೆದು, ಆಕೆಯನ್ನು ಆಸಿಡ್‌ನಿಂದ ಸುಟ್ಟು ಹಾಕಿರುವ ಭೀಕರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಜಂಡಹಾಳ ಬ್ಲಾಕ್ನಲ್ಲಿ ನಡೆದಿದೆ. ಶವದ ಅವಶೇಷಗಳನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಇಬ್ಬರು ಬಾಲ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಬಳಿಕ ಒಂಬತ್ತು ವರ್ಷದ ಬಾಲಕಿಯ ಶವವನ್ನು ಮನೆಯೊಳಗಿನ ಪೆಟ್ಟಿಗೆಯಲ್ಲಿಟ್ಟಿದ್ದರು. ದೇಹ ಕೊಳೆತು ದುರ್ವಾಸನೆ ಬರುತ್ತಿದ್ದಂತೆ ಅದನ್ನು ಕತ್ತರಿಸಿ ಆಸಿಡ್‌ನಿಂದ ಸುಟ್ಟು ಮನೆಯ ಹಿತ್ತಲಿಗೆ ಎಸೆದಿದ್ದಾರೆ. ಘಟನೆ ನಡೆದ ವೇಳೆ ಬಾಲಕಿಯರ ತಂದೆ ಮನೆಯಲ್ಲಿ ಇರಲಿಲ್ಲ. ಆತ ಕೆಲಸಕ್ಕೆಂದು ಹೊರಗಡೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯದ ಕುರಿತು ಪೊಲೀಸರು ಆರೋಪಿಗಳನ್ನು ವಿಚಾರಿಸಿದಾಗ, ತಾನು ಮತ್ತು ತನ್ನ ಪ್ರಿಯಕರ ಖಾಸಗಿ ಕ್ಷಣಗಳನ್ನು ಕಳೆಯುವ ವೇಳೆ ತಂಗಿ ಅದನ್ನು ನೋಡಿದ್ದಳು. ಈ ವೇಳೆ ಹೆದರಿಕೆಯಿಂದ ಆಕೆಯನ್ನು ಜೀವವನ್ನು ತೆಗೆಯಲಾಯಿತು ಎಂದು ಹೇಳಿದ್ದಾರೆ. (ಏಜೆನ್ಸೀಸ್)